ಸಿನಿ ಸುದ್ದಿ
ಟಾಕೀಸ್ ಸಿನಿವಾರದಲ್ಲಿ : ಆ ಕರಾಳ ರಾತ್ರಿ ಕನ್ನಡ ಚಿತ್ರ ಪ್ರದರ್ಶನ ಮತ್ತು ಸಂವಾದ
ಸುದ್ದಿದಿನ,ಶಿವಮೊಗ್ಗ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಟಾಕೀಸ್ ಸಿನಿವಾರ- ವಾರಾಂತ್ಯ ಸಿನಿ ಸಂಭ್ರಮದಲ್ಲಿ 2019ರ ಅಂತ್ಯದಲ್ಲಿ ತೆರೆಕಂಡು ಉತ್ತಮ ವಿಮರ್ಶೆಗಳನ್ನು ಜೊತೆಗೆ ಈ ಸಾಲಿನ 3 ರಾಜ್ಯ ಪ್ರಶಸ್ತಿಗಳನ್ನು ಗಳಿಸಿದ ದಯಾಳ್ ಪದ್ಮನಾಭ್ ರವರ ನಿರ್ದೇಶನದ ಕನ್ನಡ ಚಿತ್ರ ‘ಆ ಕರಾಳ ರಾತ್ರಿ ’ ಚಿತ್ರದ ಉಚಿತ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ಶಿವಮೊಗ್ಗ ನಗರದ ನೆಹರೂ ಸ್ಟೇಡಿಯಂ ಬಳಿಯಿರುವ ವಾರ್ತಾಭವನದ ಎರಡನೇ ಮಹಡಿಯ ಮಿನಿಚಿತ್ರಮಂದಿರಲ್ಲಿ ದಿನಾಂಕ 18-01-2020ರ ಶನಿವಾರ ಸಂಜೆ 5.30ಕ್ಕೆ ಆಯೋಜಿಸಲಾಗಿದೆ.
ಆ ಕರಾಳರಾತ್ರಿ ಚಿತ್ರವು ಪಕ್ಕಾ ಕ್ರೈಂ ಥ್ರಿಲರ್ ಚಿತ್ರವಾಗಿದ್ದು, ಮೋಹನ್ ಹಬ್ಬುರವರ ನಾಟಕವನ್ನಾಧರಿಸಿದೆ. ಚಿತ್ರದ ಇಡೀ ಕಥೆ 1980ಯಲ್ಲಿ ನಡೆಯುತ್ತದೆ. ಗುಡ್ಡಗಾಡಿನ ಪ್ರದೇಶವದು, ಬಡತನವನ್ನು ಅಲ್ಲಿನ ಒಂಟಿ ಮನೆ ಅಪ್ಪಿಕೊಂಡಿದೆ. ಬದುಕಿನ ಭರವಸೆಗಳೇ ಇಲ್ಲದೇ ಬದುಕುತ್ತಿರುವ ಮೂರು ಜೀವಿಗಳ ಪೈಕಿ, ಒಬ್ಬಬ್ಬೊರದು ಒಂದೊಂದು ಕನಸು.
ಅಂತಹ ಮನೆಗೆ ಲಕ್ಷ್ಮಿ ತಾನಾಗಿಯೇ ಬಂದರೆ ಏನಾಗುತ್ತದೆ? ಎನ್ನುವುದು ಚಿತ್ರದ ಸಾರಾಂಶ. ಚಿತ್ರವು ಈ ಭಾರಿಯ ಮೊದಲ ಅತ್ಯುತ್ತಮ ಚಿತ್ರ, ಅತ್ಯುತ್ತಮ ಪೋಷಕ ನಟಿ ಹಾಗೂ ಅತ್ಯುತ್ತಮ ನಿರ್ದೇಶಕ ಸಾಲಿನಲ್ಲಿ ರಾಜ್ಯ ಪ್ರಶಸ್ತಿಯನ್ನು ಗಳಿಸಿದೆ.
ಚಿತ್ರದಲ್ಲಿ ಜೆ.ಕೆ. ಅನುಪಮ ಗೌಡ, ವೀಣಾ ಸುಂದರ್, ಸಿಹಿ ಕಹಿ ಚಂದ್ರು, ನವೀನ್ ಕೃಷ್ಣ ಮುಂತಾದವರಿದ್ದು, ಚಿತ್ರಕ್ಕೆ ನವೀನ್ ಕೃಷ್ಣರವರ ಸಂಭಾಷಣೆ, ಪಿ.ಕೆ.ಎಚ್.ದಾಸ್‍ರವರ ಛಾಯಾಗ್ರಹಣವಿದೆ. ಚಿತ್ರದ ಒಟ್ಟು ಅವಧಿ 98 ನಿಮಿಷಗಳು
ಸುದ್ದಿದಿನ.ಕಾಂ|ವಾಟ್ಸಾಪ್|9980346243