ಸಿನಿ ಸುದ್ದಿ
ಮಗಳ ಜತೆ ಫೋಟೊ ಅಮೀರ್ ಕಾಲೆಳೆದ ತುಂಡ್ ಹೈಕ್ಳು
ಸುದ್ದಿದಿನ ಡೆಸ್ಕ್: ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿಕೊಳ್ಳುವ ಬಾಲಿವುಡ್‌ನ ಖ್ಯಾತ ನಟ ಅಮೀರ್ ಖಾನ್ ಅವರು ಈಗ ಹೊಸದೊಂದು ಟ್ರೋಲ್‌ನಲ್ಲಿ ತಗ್ಲಾಕೊಂಡಿದ್ದಾರೆ.
ತಮ್ಮ ಮಗಳು ಇರಾ ಜತೆಯಲ್ಲಿ ತೆಗೆಸಿಕೊಂಡಿರುವ ಫೋಟೊವೊಂದು ವಿವಾದಕ್ಕೊಳಗಾಗಿದ್ದು, ಟ್ವಿಟರ್ ಬಳಕೆದಾರರು ಅಮೀರ್ ಅವರನ್ನು ಕುಟುಕುತ್ತಿದ್ದಾರೆ.
ಪ್ಲೇ ಗ್ರೌಂಡ್‌ವೊಂದರಲ್ಲಿ ತಮ್ಮ ಮಗಳು ಇರಾ ಜತೆ ಆತ್ಮೀಯವಾಗಿರುವ ಚಿತ್ರವನ್ನು ಟ್ವಿಟ್ಟಿಗರು ಕೆಟ್ಟದಾಗಿ ಬಣ್ಣಿಸಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಚರ್ಚೆಗೆ ಒಳಗಾಗುತ್ತಿದೆ.
ಫೋಟೊ ನೋಡಿದ ಟ್ವಿಟ್ಟಿಗನೊಬ್ಬ ‘ಅಪ್ಪ ಮಗಳ ಇಂಥ ಅಶ್ಲೀಲ ಫೋಟೊವನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಕಮೆಂಟ್ ಬರೆದಿದ್ದಾನೆ. ಇನ್ನೊಬ್ಬ ಟ್ವಿಟರ್ ಬಳಕೆದಾರ ರಂಜಾನ್‌ನಲ್ಲಿ ಇಂಥ ಬಟ್ಟೆ ತೊಡುವುದು ಸರಿಯಾದ ಕ್ರಮವಲ್ಲ ಎಂದು ಬರೆದಿದ್ದಾನೆ. ಇನ್ನು ಅನೇಕ ಅಶ್ಲೀಲ ಕಮೆಂಟ್‌ಗಳು ಒಂದರ ಹಿಂದೊಂದರಂತೆ ವ್ಯಕ್ತವಾಗುತ್ತಿದ್ದು, ಅಮೀರ್ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಅಮೀರ್ ಖಾನ್ ಅವರು ದಂಗಲ್ ಸಿನಿಮಾದಲ್ಲಿ ನಟಿಸಿದಾಗಿನಿಂದಲೂ ಮಗಳು ಇರಾನನ್ನೂ ಕೂಡ ರೆಸ್ಲರ್ ಮಾಡುವ ಕನಸು ಕಾಣುತ್ತಿದ್ದು, ಇದಕ್ಕಾಗಿ ಅವರು ತರಬೇತಿ ಪಡೆಯುತ್ತಿದ್ದಾರೆ.