ಸಿನಿ ಸುದ್ದಿ

ನಟ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ

Published

on

ಸುದ್ದಿದಿನ,ಬೆಂಗಳೂರು: ಸ್ಯಾಂಡಲ್ ವುಡ್ ನ ನಟ ‘ರೆಬಲ್​ ಸ್ಟಾರ್​’ ಅಂಬರೀಷ್​ ಹಾಗೂ ನಟಿ ಸುಮಲತಾ ದಂಪತಿಯ ಪುತ್ರ ಅಭಿಷೇಕ್​ ಅಂಬರೀಷ್ ಅವರು ಅವಿವಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಖ್ಯಾತ ಫ್ಯಾಷನ್‌ ಡಿಸೈನರ್‌ ಪ್ರಸಾದ್‌ ಬಿದ್ದಪ್ಪಾ ಅವರ ಪುತ್ರಿ ಅವಿವಾ ಬಿದ್ದಪ್ಪ ಜೊತೆ ಇಂದು ಅಭಿಷೇಕ್​ ನಿಶ್ಚಿತಾರ್ಥ ಖಾಸಗಿ ಹೋಟೆಲ್​​ನಲ್ಲಿ ನಿಶ್ಚಿತಾರ್ಥ ನಡೆದಿದೆ. ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಇಬ್ಬರು’ಸಂಕ್ರಾಂತಿ’ ಹಬ್ಬದ ನಂತರ ಸಪ್ತಪದಿ ತುಳಿಯಲಿದ್ದಾರೆ. ನಿಶ್ಚಿತಾರ್ಥದಲ್ಲಿ ಕುಟುಂಬಸ್ಥರು, ಆಪ್ತರು ಮಾತ್ರ ಭಾಗಿಯಾಗಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version