ದಿನದ ಸುದ್ದಿ

2ಜಿ ಇಥನಾಲ್ ಕೇಂದ್ರವನ್ನು ಶೀಘ್ರದಲ್ಲಿ ಆರಂಭಿಸುವಂತೆ ಜಿ.ಎಂ ಸಿದ್ದೇಶ್ ಸೂಚನೆ

Published

on

ಸುದ್ದಿದಿನ,ದಾವಣಗೆರೆ : ಭಾರತದ ಅತೀ ದೊಡ್ಡ 2ಜಿ ಇಥನಾಲ್ ಕೇಂದ್ರವನ್ನು ಸ್ಥಾಪಿಸಲು ಜಿಲ್ಲೆಯ ಹರಿಹರ ತಾಲ್ಲೂಕಿನ ಹನಗವಾಡಿಯಲ್ಲಿ ಜಾಗ ನೀಡಲಾಗಿದ್ದು, ಆದಷ್ಟು ಬೇಗ ಈ ಕೇಂದ್ರದ ಕಟ್ಟಡ ಕಾಮಗಾರಿ ಕೆಲಸವನ್ನು ಶೀಘ್ರದಲ್ಲಿ ಆರಂಭಿಸಿ ಹಾಗೂ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸುವಂತೆ ಸಂಸದರಾದ ಜಿ.ಎಂ. ಸಿದ್ದೇಶ್ವರ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಿದರು.

ಡಿ.18 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೆ|| ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿ., ಇವರು ಹನಗವಾಡಿ ಗ್ರಾಮ, ಹರಿಹರ ತಾಲ್ಲೂಕು ಇಲ್ಲಿ 60 ಕೆಎಲ್‍ಪಿಡಿ 2ಜಿ ಇಥನಾಲ್ ಉತ್ಪಾದನೆಯ ಘಟಕವನ್ನು ಸ್ಥಾಪಿಸುವ ಸಂಬಂಧ ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲಿ 2ಜಿ ಇಥನಾಲ್ ಕೇಂದ್ರ ಸ್ಥಾಪಸಿಲು ಅವಕಾಶ ದೊರೆತಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಅವಶ್ಯವಾದ ತಯಾರಿಗಳನ್ನು ಆದಷ್ಟು ಬೇಗ ಮಾಡಿಕೊಂಡು 2 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಕಾರ್ಯ ಆರಂಭಿಸುವಂತೆ ತಿಳಿಸಿದರು.

ಸಭೆಯಲ್ಲಿ ಎಂಆರ್‍ಪಿಎಲ್ ಜನರಲ್ ಮ್ಯಾನೇಜರ್ ಗಿರೀಶ್ ಮಾತನಾಡಿ, ಸಂಸ್ಥೆಯ ಬೆಳವಣಿಗೆ ಮತ್ತು 2ಜಿ ತಂತ್ರಜ್ಞಾನದಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸಲಿದೆ ಎಂದು ವಿವರಿಸಿದರು. ಈ ಹಿಂದೆ 60 ಕೆಡಿಎಲ್‍ಪಿ ತಂತ್ರಜ್ಞಾನವನ್ನು ಈಗ 2ಜಿ ಇಥನಾಲ್ ತಂತ್ರಜ್ಞಾನಕ್ಕೆ ಅಭಿವೃದ್ದಿ ಪಡಿಸಲಾಗುತ್ತಿದೆ. ಭಾರತ ದೇಶವು ಪೆಟ್ರೋಲ್‍ಗೆ ಬೇರೆ ದೇಶಗಳ ಮೇಲೆ ಅವಲಂಬನೆಯಾಗುವುದನ್ನು ಕಡಿಮೆ ಮಾಡಲು ಈ ತಂತ್ರಜ್ಞಾನವನ್ನು ಅಭಿವೃದ್ದಿ ಪಡಿಸಲಾಗುತ್ತಿದೆ. ತಮ್ಮ ಸಂಸ್ಥೆಯಿಂದ ಎಲ್.ಪಿ.ಜಿ. ಡಿಸೇಲ್, ಪೆಟ್ರೋಲ್, ನೆಪ್ತಾ, ಬಿಲಿಯಮ್ ಆಯಿಲ್‍ಗಳನ್ನು ತಯಾರಿಸುತ್ತಿದ್ದು, ಕರ್ನಾಟ ಸರ್ಕಾರಕ್ಕೆ ರೂ.1000 ಕೋಟಿ ತೆರಿಗೆ ನೀಡುತ್ತಿದೆ ಹಾಗೂ ಭಾರತಕ್ಕೆ ರೂ.11,000 ಕೋಟಿ ತೆರಿಗೆ ನೀಡುತ್ತಿದೆ ಎಂದರು.

2ಜಿ ತಂತ್ರಜ್ಞಾನದಲ್ಲಿ ಆಯಿಲ್‍ಗಳ ತಯಾರಿಕೆಗಾಗಿ ರೈತರು ಬೆಳೆದ ಬೆಳೆಗಳ ತ್ಯಾಜ್ಯ ವಸ್ತುಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಮೆಕ್ಕೆಜೋಳದ ದಂಟು, ಬೆಂಡು, ಭತ್ತದ ಹುಲ್ಲು, ಹತ್ತಿಯ ಕಡ್ಡಿಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದರು.

ಸಂಸದರು ಬೆಳೆಯ ತ್ಯಾಜ್ಯಗಳನ್ನು ನೇರವಾಗಿ ರೈತರಿಂದ ಖರೀದಿಸುತ್ತೀರಾ ? ಎಂದು ಕೇಳಿದಾಗ ಅವರು ಕೆಲವು ಏಜೆನ್ಸಿಗಳನ್ನು ಗುರುತಿಸಿದ್ದು, ಅವರು ರೈತರಿಂದ ಖರೀದಿಸಿ ತಮಗೆ ನೀಡುತ್ತಾರೆ ಎಂದು ಮಾಹಿತಿ ನೀಡಿದರು.

ಈ ಸಂಸ್ಥೆಯು ಒಂದು ದಿನಕ್ಕೆ 60000 ಲೀಟರ್ ಆಯಿಲ್ ಸಂಗ್ರಹಿಸುವ ಸಾಮಥ್ರ್ಯ ಹೊಂದಿದ್ದು, ಇದರ ತಯಾರಿಕೆಗೆ 200 ರಿಂದ 300 ಟನ್ ತ್ಯಾಜ್ಯ ಪದಾರ್ಥಗಳು ಬೇಕಾಗುತ್ತವೆ. ಈ ಪ್ರಮಾಣದ ಕಚ್ಚಾ ಪದಾರ್ಥಗಳನ್ನು ರೈತರಿಂದ ಸಂಗ್ರಹಿಸಲಾಗುವುದು. ಹಾಗೂ ನೀರಿಗಾಗಿ ಶಾಂತಿಸಾಗರದ ಕೆರೆಯನ್ನು ಗುರುತಿಸಿದ್ದು, ಸರ್ಕಾರದಿಂದ ಅಧಿಕೃತ ಆದೇಶ ಬಂದ ನಂತರ ತುಂಗಭದ್ರ ನದಿ ನೀರನ್ನು ಬಳಸುತ್ತೇವೆ ಎಂದರು.

ಸಂಸದರು ಶಾಂತಿಸಾಗರದ ನೀರು ಕುಡಿಯಲು ಬಳಸಲಾಗುತ್ತದೆ. ನೀವು ಆ ನೀರನ್ನು ಬಳಸಬೇಡಿ, ಬದಲಾಗಿ ತುಂಗಭದ್ರ ನದಿ ನೀರನ್ನು ಬಳಸುವಂತೆ ಸಲಹೆ ನೀಡಿದರು.

2ಜಿ ಇಥನಾಲ್ ಕಟ್ಟಡ ಕಾಮಗಾರಿಗೆ ಕೇಂದ್ರ ಸರ್ಕಾರದ ‘ಪ್ರಧಾನ್ ಮಂತ್ರಿ ಜೀವನ್’ ಯೋಜನೆಯಲ್ಲಿ ಶೇ.20 ರಷ್ಟು ಅನುದಾನ ನೀಡುತ್ತಾರೆ. ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ಇಲ್ಲ, ರಾಜ್ಯ ಸರ್ಕಾರದ ಅನುದಾನಕ್ಕೆ ಅರ್ಜಿ ಸಲ್ಲಿಸುತ್ತೇವೆ ಎಂದಾಗ ಸಂಸದರು ರಾಜ್ಯದಿಂದ ಭೂಮಿ, ನೀರು, ವಿದ್ಯುತ್ ನೀಡುತ್ತಿದ್ದೇವೆ ಅನುದಾನ ನೀಡಲು ಕಷ್ಟ ಆಗುತ್ತದೆ ಎಂದರು.

ಸರ್ಕಾರ 2 ವರ್ಷಗಳ ಹಿಂದೆಯೇ ನಿಮಗೆ ಭೂಮಿ ನೀಡಲಾಗಿದೆ. ಆದರೆ ನೀವು ಇನ್ನು ಕಟ್ಟಡ ಕಾಮಗಾರಿ ಏಕೆ ಆರಂಭಿಸಿಲ್ಲ ಎಂದು ಪ್ರಶ್ನಿಸಿದಾಗ ಸಂಸ್ಥೆಯ ಮ್ಯಾನೇಜರ್ ಅಔS ಇಅ (ಪರಿಸರ ಮಾಲಿನ್ಯ ನಿವಾರಣೆ) ಸರ್ಟಿಫಿಕೇಟ್ ಬಂದ ಕೂಡಲೇ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು.

ಸಂಸದರು 2020ರ ಫೆಬ್ರವರಿಯೊಳಗೆ ಸಂಬಂಧಿಸಿದ ಎಲ್ಲಾ ಸರ್ಟಿಫಿಕೇಟ್‍ಗಳನ್ನು ಪಡೆದುಕೊಂಡು ಕಾಮಗಾರಿ ಆರಂಭಿಸಬೇಕು. 2023 ಏಪ್ರಿಲ್ ಅಂತ್ಯದ ವೇಳೆಗೆ ಕಟ್ಟಡ ಉದ್ಘಾಟನೆಗೆ ಸಿದ್ದವಾಗಬೇಕೆಂದು ಸೂಚನೆ ನೀಡಿದರು. ಹಾಗೂ ಕಟ್ಟಡ ಕಾಮಗಾರಿಗೆ ಈ ವ್ಯಾಪ್ತಿಯಲ್ಲಿನ ಕುಟುಂಬಗಳನ್ನು ಗುರುತಿಸಲಾಗಿದ್ದು, ಅವರನ್ನು ತೆಗೆದುಕೊಳ್ಳಿ ಎಂದರು.

ಸಂಸ್ಥೆ ಕೆಲಸ ಆರಂಭಿಸಿದ ನಂತರ ಉದ್ಯೋಗದಲ್ಲಿ ದಾವಣಗೆರೆಯ ಸ್ಥಳೀಯ ಜನರಿಗೆ ಆದ್ಯತೆ ನೀಡಬೇಕು. ಅರ್ಹತೆ ಅನುಗುಣವಾಗಿ ಕೆಲಸ ನೀಡಿ. ವಾಚಮ್ಯಾನ್ ಕೆಲಸದಿಂದ ತಂತ್ರಜ್ಞಾನದ ಕೆಲಸ ಮಾಡುವ ಅರ್ಹತೆ ಇದ್ದವರು ಕಂಡು ಬಂದರೆ ಸ್ಥಳೀಯ ನಿವಾಸಿಗಳಿಗೆ ಹೆಚ್ಚಿನ ಆದ್ಯತೆ ನೀಡಿ. ಸಾಧ್ಯವಾದಷ್ಟು ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸಿಕೊಡುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ.ಜಿ, ಉಪವಿಭಾಗಧಿಕಾರಿ ಮಮತಾ ಹೊಸಗೌಡರ್, ಎಂ.ಆರ್.ಪಿ.ಎಲ್ ಸಂಸ್ಥೆಯ ಇಂಡಿಪೆಂಡೆಂಟ್ ಡೈರೆಕ್ಟರ್ ಮಂಜುಳಾ, ಹರಿಹರ ತಹಶೀಲ್ದಾರರಾದ ರಾಮಚಂದ್ರಪ್ಪ, ಪರಿಸರ ಮಾಲಿನ್ಯ ನಿಯಂತ್ರಣಾ ಧಿಕಾರಿಗಳು, ಎಂಆರ್‍ಪಿಎಲ್ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version