ದಿನದ ಸುದ್ದಿ
ದಾವಣಗೆರೆ | ಜಿಲ್ಲಾಡಳಿತಕ್ಕೆ ನಮಸ್ಕರಿಸಿದ ಕೊರೋನಾ ಗುಣಮುಖ
ಸುದ್ದಿದಿನ,ದಾವಣಗೆರೆ: ಕೊರೊನಾದಿಂದ ಗುಣಮುಖರಾದ 5 ಜನರನ್ನು ಗುರುವಾರ ಆಸ್ಪತ್ರೆಯಿಂದ ಸಂತಸದಿಂದ ಬೀಳ್ಕೊಡಲಾಯಿತು. ಈ ಸಮಯದಲ್ಲಿ ಗುಣಮುಖರಾದ ವ್ಯಕ್ತಿಯೊಬ್ಬರು ನೆಲಕ್ಕೆ ತಲೆಯೂರಿ ಜಿಲ್ಲಾಡಳಿತಕ್ಕೆ ನಮಸ್ಕರಿಸಿದರು.
ಕೊರೊನಾ ಪಾಸಿಟಿವ್ ಬಾಧಿತರಾಗಿ ದಾವಣಗೆರೆ ಚಿಗಟೇರಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಐವರು ಸಂಪೂರ್ಣ ಗುಣಮುಖರಾಗಿದ್ದು, ಇವರನ್ನು ಡಿಸಿ, ಎಸ್ಪಿ ಹಾಗೂ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಚಪ್ಪಾಳೆ ತಟ್ಟುವ ಮೂಲಕ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಗುರುವಾರ ಜಿಲ್ಲೆಯಲ್ಲಿ ಮೂರು ಹೊಸ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಪಿ-1483, ಪಿ-1485, ಪಿ-1488 ಜಾಲಿನಗರಕ್ಕೆ ಸಂಬಂಧಟ್ಟವರು. ಪಿ-1485 ಇವರು ಪಿ-667 ರ ದ್ವಿತೀಯ ಸಂಪರ್ಕ ಹೊಂದಿದವರಾಗಿದ್ದರೆ. ಪಿ-1488 ಇವರು ಪಿ-634 ಸಂಪರ್ಕಿತರಾಗಿದ್ದಾರೆ. ಕಂಟೈನ್‍ಮೆಂಟ್ ಜೋನ್‍ಲ್ಲಿರುವ ಎಪಿಸೆಂಟರ್‍ನ ಅಕ್ಕಪಕ್ಕದ ಮನೆಯವರಲ್ಲಿ ಕಂಡುಬಂದಂತಹ ಒಂದು ಪ್ರಕರಣ ಪಿ-1483 ಆಗಿದ್ದು ಇವರು 15 ವರ್ಷದ ಬಾಲಕನಾಗಿದ್ದಾನೆ ಎಂದು ಮಾಹಿತಿ ನೀಡಿದರು.
ಕೋವಿಡ್19: 21 ಮೇ ಗುರುವಾರ 2020 ರ ಮಾಹಿತಿ
- ಒಟ್ಟು ಪ್ರಕರಣಗಳು: 115
- ಮೃತಪಟ್ಟವರು: 04
- ಗುಣಮುಖರಾದವರು: 14
- ಹೊಸ ಪ್ರಕರಣಗಳು: 03
ಈ ಸಂದರ್ಭದಲ್ಲಿ ಎಸಿ ಮಮತಾ ಹೊಸಗೌಡರ್, ಡಿಎಚ್‍ಒ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಜಿಲ್ಲಾ ಶಸ್ತ್ರಚಿತ್ಸಕ ಸುಭಾಷಚಂದ್ರ, ತಹಶೀಲ್ದಾರ್ ಗಿರೀಶ್ ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243