ದಿನದ ಸುದ್ದಿ

’80 ವರ್ಷದ ನಿರ್ಗತಿಕ ವೃದ್ದೆಗೆ’ ಆಸರೆ ಕಲ್ಪಿಸಿದ ವೇದಾಂತ ಮೈನ್ಸ್ ಸಿಬ್ಬಂದಿ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ಚಿತ್ರದುರ್ಗ |ಜಿಲ್ಲಾ ಹೊಂಬೆಳಕು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದವರು ವೇದಾಂತ ಮೈನ್ಸ್ ಸಿಬ್ಬಂದಿ ವರ್ಗ ಭೀಮಸಮುದ್ರ ಮತ್ತು ಗ್ರಾಮಾಂತರ ಪೋಲಿಸ್ ಠಾಣಿ ಸಿಬ್ಬಂದಿ ಚಿತ್ರದುರ್ಗ ಇವರ ಸಹಯೋಗದಲ್ಲಿ ಸುಮಾರು 80 ವರ್ಷದ ನಿರ್ಗತಿಕ ವೃದ್ದೆಯೊಬ್ಬರನ್ನು ರಕ್ಷಿಸಲಾಯಿತು.

ತಾಲ್ಲೂಕಿನ ನಲ್ಲಿಕಟ್ಟೆ ಗ್ರಾಮದಲ್ಲಿ ಹಿರಿಯ ನಾಗರಿಕರಾದ ನಿರ್ಗತಿಕ ವೃದ್ದ ಮಹಿಳೆಯಾದ ಕರಿಯಮ್ಮನವರನ್ನು ಗಮನಿಸಿದ ವೇದಾಂತ ಮೈನ್ಸ್ ಸಿಬ್ಬಂದಿ ವರ್ಗದವರು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ನೀಡಿರುತ್ತಾರೆ .

ತಕ್ಷಣ ಕಾರ್ಯಪ್ರವೃತ್ತರಾದ ಸಹಾಯವಾಣಿ ಸಿಬ್ಬಂದಿಗಳಾದ ಕು.ಉಮಾದೇವಿ, ಶ್ರೀಹನುಮಂತಪ್ಪ ಹಾಗೂ ಸಂಸ್ಥೆಯ ಕಾರ್ಯದರ್ಶಿ ಶಂಕರಪ್ಪ, ಮತ್ತು ವೇದಾಂತ ಮೈನ್ಸ್ ಸಿಬ್ಬಂದಿ ವರ್ಗದವರಾದ ಯಶೋದಮ್ಮ ಮತ್ತು ರಾಘವೇಂದ್ರ ಹಾಗೂ ಗ್ರಾಮಾಂತರ ಪೋಲಿಸ್ ಠಾಣಿ ಸಿಬ್ಬಂದಿ ವರ್ಗದವರ ಜೊತೆಗೂಡಿ ನಲ್ಲಿಕಟ್ಟೆ ಗ್ರಾಮಕ್ಕೆ ತೆರಳಿ ನಿರ್ಗತಿಕ ವೃದ್ದೆಗೆ ಆಪ್ತ ಸಮಾಲೋಚನೆ ಮಾಡಿ ಗ್ರಾಮಸ್ಥರ ಸಹಾಕರದೊಂದಿಗೆ ವೃದ್ದೆ ಕರಿಯಮ್ಮನವರನ್ನು ಗೋನೂರು ನಿರಾಶ್ರಿತರ ಕೇಂದ್ರದಲ್ಲಿ ಪುನರ್ವಸತಿ ಕಲ್ಲಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version