ಲೈಫ್ ಸ್ಟೈಲ್

‘ಆ ಕರಾಳ ರಾತ್ರಿಯಲ್ಲಿ’ ಮದನ ಮುರಳಿ ಮಾಧವ ಎಂದ ಗಾನ ಕೋಗಿಲೆ ಶೃತಿ ಪ್ರಶಾಂತ್..!

Published

on

ಬಿಗ್ ಬಾಸ್ ಖ್ಯಾತಿಯ ದಯಾಳ್ ಪದ್ಮನಾಭ, ಅನುಪಮಾ ಗೌಡ..ಜೆ .ಕೆ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಮೂವರ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ “ಆ ಕರಾಳ ರಾತ್ರಿಯಲ್ಲಿ ” ಚಿತ್ರ ಈ ಶುಕ್ರವಾರ ತೆರೆದೆ ಸಿದ್ಧ ವಾಗಿರುವ ಬೆನ್ನಲ್ಲೇ, ಈ ಚಿತ್ರದ “ಮಧನ ಮುರುಳಿ ಮೋಹನ ” ಎಂಬ ಹಾಡು ಸೋಷಿಯಲ್ ಮೀಡಿಯಾ ದಲ್ಲಿ ಈಗ  ಸಿಕ್ಕಾಪಟ್ಟೆ  ವೈರಲ್ ಆಗಿದೆ.

ಅಂದ ಹಾಗೆ ರಾಯಲ್ ಸ್ಟಾರ್ ಉಪೇಂದ್ರ ರವರು ಈ ಚಿತ್ರದ ಆಡಿಯೋ ಲಾಂಚ್ ಮಾಡಿದ್ದು.. ಈ ಚಿತ್ರದ ಹಾಡುಗಳು ಕೇಳುಗರ ಮನ ಗೆದ್ದಿದೆ.

ಒಮ್ಮೆ ಕೇಳಿದರೆ ಸಾಕು ಮತ್ತೆ ಮತ್ತೆ ಕೇಳಬೇಕೆನಿಸುವಷ್ಟು ಇಂಪಾಗಿ  ಮೂಡಿ ಬಂದಿರುವ ಈ ಹಾಡಿಗೆ ಅನುಪಮಾ ಮತ್ತು ಜೆ.ಕೆ ನೃತ್ಯಿಸಿದ್ದಾರೆ. ಮೂಗುತಿ ಸುಂದರಿ ಎಂದೇ ಹೆಸರಾಗಿರುವ ಅನುಪಮಾ ಬಹಳ ಹಾಟ್ ಮತ್ತು ಬ್ಯೂಟಿಫುಲ್  ಆಗಿ ಕಾಣಿಸಿಕೊಂಡಿದ್ದಾರೆ. ಈ ಹಾಡು ಕೇಳುವುದಕ್ಕೆ ಎಷ್ಟು ಇಂಪೋ ಇದರ ವಿಜುಯಲ್ ಕೂಡಾ ಅಷ್ಟೇ ಸೂಪರ್ ಹಿಟ್ ಆಗಿದೆ.

https://youtu.be/35YaWgh0unc

ಸೂಪರ್ ಹಿಟ್ ಆಯ್ತು ‘ಮದನ ಮುರಳಿ ಮಾಧವ’

ಈ ಹಾಡು ಸದ್ಯ  ಈಗ ಎಲ್ಲರ ನಾಲಿಗೆ ಯ ಮೇಲೆ ನಲಿದಾಡುತ್ತಿದೆ. ಎಲ್ಲೆಲ್ಲೂ “ಮದನ ಮುರಳಿ ಮಾಧವನ” ಮಾಯೆ! ಕೇಳಲು ಬಹಳ ಇಂಪಾಗಿ ಮೂಡಿ ಬಂದಿರುವ  ಹಾಡು ಫಣೀಶ್ ರಾಜ  ರವರ ಅದ್ಭುತ ರಚನೆ ಯಾಗಿದೆ. ಸಂಗೀತ ನಿರ್ದೇಶಕ R.S. ಗಣೇಶ್ ನಾರಾಯಣನ್ ರವರು ಇದಕ್ಕೆ ಟ್ಯೂನ್  ಕಂಪೋಸ್ ಮಾಡಿದ್ದು… ಗಾನ ಕೋಗಿಲೆ ಶೃತಿ ಪ್ರಶಾಂತ್ ಈ ಹಾಡನ್ನು ಅಷ್ಟೇ ಸುಂದರವಾಗಿ ಹಾಡಿದ್ದಾರೆ. ಸೋಷಿಯಲ್ ಮೀಡಿಯಾ ದಲ್ಲಿ ತುಂಬಾ ವೈರಲ್ ಆಗಿರುವ ಈ ಹಾಡು ಕರ್ನಾಟಕದ ಸಂಗೀತ ರಸಿಕರ ಮನ ಗೆದ್ದಿದೆ.

ಶೃತಿ ಪ್ರಶಾಂತ್

ಯಾರು ಈ ಶೃತಿ ಪ್ರಶಾಂತ್?

ಈಕೆಯ ಹೆಸರಲ್ಲಿ ಸಂಗೀತ ದ ಲಯವಿದೆ.. ಹೆಸರಿಗೆ ತಕ್ಕಂತೆ ಶೃತಿ ಬದ್ಧವಾಗಿ ಹಾಡುವ ಸ್ಯಾಂಡಲ್ ವುಡ್ ನ ಈ ಗಾನ ಕೋಗಿಲೆ.. ಕನ್ನಡ..ತಮಿಳು..ತೆಲುಗು ಸೇರಿದಂತೆ ನೂರು ಚಿತ್ರಗಳಿಗೆ ದನಿ ನೀಡಿದ್ದಾರೆ.

S.K ಪ್ರಹಲ್ಲಾದ್ ಮತ್ತು ಮಂಜುಳ ಪ್ರಹಲ್ಲಾದ್ ರ ಪುತ್ರಿ ಶೃತಿ. ಪ್ರಶಾಂತ್ ವಿಶ್ವಕರ್ಮ ರ ಧರ್ಮ ಪತ್ನಿ. ಇಬ್ಬರು ಮುದ್ದು ಮಕ್ಕಳ ತಾಯಿ.ಕನ್ನಡ ದ ಈ ಹೆಣ್ಣು ಮಗಳಿಗೆ ಸಂಗೀತ ಅನ್ನೋದು ಹುಟ್ಟಿನಿಂದಲೇ

ಇವರ ವಂಶಸ್ಥರಿಂದ  ಈಕೆ ಪಡೆದ ವರ.. ಶೃತಿ ಭಾರತದ ಅದ್ಭುತ ಘಜಲ್ ಗಾಯಕಿ. ತಮ್ಮ ಗುರು ದಿ.ರವೀಂದ್ರ ಹಂಬಿನೂರ್ ರಿಂದ ಛಜಲ್ ಮತ್ತು ಹಿಂದುಸ್ತಾನಿ ಸಂಗೀತಾಭ್ಯಾಸ ಪಡೆದಿದ್ದು.. ಕರ್ನಾಟಿಕ್  ಕ್ಲಾಸಿಕಲ್ ಅನ್ನು ಶಮಂತಕಮಣಿ ಅಯ್ಯಂಗಾರ್ ಅವರ ಬಳಿ ಅಭ್ಯಾಸ ಮಾಡಿದ್ದಾರೆ.

2001 ರಿಂದಲೇ ಇವರು ಕನ್ನಡ ದ ಹಲವಾರು ಚಿತ್ರ ಗಳಲ್ಲಿ ಹಾಡಿದ್ದಾರೆ.ಚಿಕ್ಕ ವಯಸ್ಸಿನಲ್ಲೇ ಸಂಗೀತಾಭ್ಯಾಸ ದಲ್ಲಿ ಮುಳುಗಿದ ಶೃತಿ ಯ ಸಾಧನೆ ಅಪಾರ. ಸುಮಾರು ನೂರಕ್ಕೂ ಹೆಚ್ಚು ಆಲ್ಬಮ್ ಗಳಲ್ಲಿ ಹಾಡಿರುವ ಶೃತಿ ಕನ್ನಡ ಚಿತ್ರರಂಗದ ಒಬ್ಬ ಪ್ರತಿಭಾವಂತ ಹೆಣ್ಣು ಮಗಳು. ಹಲವಾರು ಸುಪ್ರಸಿದ್ಧ ಗಾಯಕರೊಂದಿಗೆ ಧನಿಗೂಡಿಸಿರುವ ಹೆಗ್ಗಳಿಕೆ ಇವರದು. “ಎದೆ ತುಂಬಿ ಹಾಡುವೆನು” ಕಾರ್ಯಕ್ರಮ ದಲ್ಲಿ S.P.ಬಾಲಸುಬ್ರಹ್ಮಣ್ಯಮ್ ರೊಂದಿಗೆ ಹಾಡಿದ ಆ ಕ್ಷಣ ವನ್ನು ಎಂದಿಗೂ ಮರೆಯಲಾರೆ “ಅನ್ನುತ್ತಾರೆ ಶೃತಿ ಪ್ರಶಾಂತ್.

2007ರಲ್ಲಿ ವಿ.ಮನೋಹರ್ ರವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ದೈವ ಭಕ್ತಿ ಕಥಾಹಂದರದ ಚಿತ್ರ ದ ಇವರ ಹಾಡು ಅಂದಹಾಗೆ ತುಂಬಾ ಹಿಟ್ ಆಗಿತ್ತು.

ಇತ್ತೀಚೆಗೆ ತೆರೆಕಂಡ  ” ರಾಜ-ರಾಧೆ” ಯ “ಹೊತ್ತು ಹತ್ತು ಸಲಹುವಳು” ಎಂಬ ಭಾವನಾತ್ಮಕ ಗೀತೆಯನ್ನು ಸೊಗಸಾಗಿ ಹಾಡಿ ಜನರಿಂದ ಮನ ಗೆದ್ದಿದ್ದಾರೆ. ಕೃಷ್ಣನ್  ಲವ್ ಸ್ಟೋರಿ ಯ “ಕಾದಿರುವೆ ನಿನಗಾಗಿ” ಗೀತೆ ಇವರ ಸಾಧನೆಯ ಕಿರೀಟ ಕ್ಕೆ ಮತ್ತೊಂದು ಗರಿ.

• ಒನ್ಸ್ ಮೋರ್ ಕೌರವರ ಚಿತ್ರ ಕ್ಕೆ ಇವರು ಹಾಡಿದ ಗೀತೆ ಸೂಪರ್ ಹಿಟ್.

• ಮೊನ್ನೆ ಅಷ್ಟೇ ಮುಕ್ತಾಯ ವಾದ “ಸರಿಗಮಪ”  ಕಾರ್ಯಕ್ರಮ ದಲ್ಲಿ ಜೂರಿ ಯಾಗಿ ಕೂಡ ನಿಂತಿದ್ದಾರೆ ಶೃತಿ.

• ಅರ್ಜುನ್ ಜನ್ಯ, ಶ್ರೇಯಸ್ ಗಂಧರ್ವ, ಜೆಸ್ಸೀ ಗಿಫ್ಟ್, ಶ್ರೀಧರ್.ವಿ.ಸನರನ್.. ಗಣೇಶ್ ನಾರಾಯಣನ್ ಹೀಗೆ ಹಲವಾರು ಸೂಪರ್ ಹಿಟ್ ಸಂಗೀತ ನಿರ್ದೇಶಕ ರೊಂದಿಗೆ ಕೆಲಸ ಮಾಡಿದ್ದಾರೆ.

• ತೆರಿಗೆ ಸಿದ್ಧ ವಾಗಿರುವ  “ಆ ಕರಾಳ ರಾತ್ರಿಯಲ್ಲಿ ”  ಸೂಪರ್ ಹಿಟ್ ಆಯ್ತು ಗಾನ ಕೋಗಿಲೆ ಶೃತಿ ಪ್ರಶಾಂತ್ ರ ಸೆನ್ಸೇಷನಲ್ ವಾಯ್ಸ್!.

ಇವರ ಎಲ್ಲಾ ಪ್ರಯತ್ನಗಳು ಯಶಸ್ವಿಯಾಗಲೀ. ಸಂಗೀತ ಸರಸ್ವತಿ ಇವರಲ್ಲಿ ಸದಾ ನಲಿನಲಿದಾಡಲಿ. ಯಶಸ್ಸು-ಕೀರ್ತಿ ಇವರದಾಗಲಿ ಎಂದು ಹಾರೈಸುತ್ತೇವೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version