ದಿನದ ಸುದ್ದಿ

ಅಭಿನಂದನ್ ಹಸ್ತಾಂತರದ ವೇಳೆ ಜೊತೆಗಿದ್ದ ಆ ಮಹಿಳೆ ಯಾರು ಗೊತ್ತಾ..?

Published

on

ಸುದ್ದಿದಿನ ಡೆಸ್ಕ್ : ಭಾರತಕ್ಕೆ ವಿಂಗ್ ಕಮಾಂಡರ್ ಅಭಿನಂದನ್ ಹಸ್ತಾಂತರದ ವೇಳೆ ಅಭಿ ಜೊತೆಗಿದ್ದ ಮಹಿಳೆ ಯಾರು? ಆಕೆ ಅಭಿನಂದನ್ ಜೊತೆ ಬಂದಿದ್ದಾದ್ರು ಯಾಕೆ..? ಎಂಬ ಪ್ರಶ್ನೆ ಎಲ್ಲರನ್ನು ಕಾಡಿದ್ದಂತೂ ಸತ್ಯ.

ಹೌದು, ಅಭಿನಂದನ್ ಜೊತೆ ಬಂದ ಮಹಿಳೆ ಹೆಸರು ಫರಿಯಾ ಬುಕ್ತಿ. ಆಕೆ ಪಾಕ್ ವಿದೇಶಾಂಗ ಸಚಿವಾಲಯದ ಭಾರತೀಯ ವಿಭಾಗದ ಮಹಿಳಾ ಅಧಿಕಾರಿ. ಕುಲಭೂಷಣ್ ಜಾಧವ್ ಪ್ರಕರಣ ನಿಭಾಯಿಸುತ್ತಿರುವ ಅಧಿಕಾರಿ ಕೂಡ.
ಪಾಕಿಸ್ತಾನದ ವಶದಲ್ಲಿರುವ ಕುಲಭೂಷಣ್ ಜಾಧವ್ , ಹಾಗೂ ಜಾಧವ್ ತಾಯಿ, ಪತ್ನಿ ಭೇಟಿ ವೇಳೆ ಉಪಸ್ಥಿತರಿದ್ದ ಮಹಿಳೆ ಅವರು. ನಿನ್ನೆ ಸಹ ಅಭಿನಂದನ್ ಹಸ್ತಾಂತರದ ವೇಳೆ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version