ದಿನದ ಸುದ್ದಿ

ಬೈಕ್ ನಿಂದ ಆಯತಪ್ಪಿ ಬಿದ್ದು : ‘ಸೆಸ್ಕ್ ಲೈನ್ ಮ್ಯಾನ್’ ಸಾವು

Published

on

ಸುದ್ದಿದಿನ, ಮಂಡ್ಯ : ಕೃಷ್ಣರಾಜಪೇಟೆ ತಾಲ್ಲೂಕು ಬೂಕನಕೆರೆ ಹೋಬಳಿ ರಂಗನಾಥಪುರ ಗೇಟ್ ನಲ್ಲಿ ಬೈಕಿನಿಂದ ಆಯತಪ್ಪಿಬಿದ್ದು ಸೆಸ್ಕ್ ಲೈನ್ ಮ್ಯಾನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಉಯ್ಗೋನಹಳ್ಳಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್(25)ಮೃತ ದುರ್ದೈವಿಯಾಗಿದ್ದಾನೆ. ಬೂಕನಕೆರೆ ಗ್ರಾಮದ ನಿವಾಸಿಯಾಗಿರುವ ಅಭಿಷೇಕ್ ಕೆ.ಆರ್.ಪೇಟೆ ಪಟ್ಟಣದಲ್ಲಿ ಸ್ನೇಹಿತನ ಮದುವೆ ರಿಸೆಪ್ಷನ್ ಮುಗಿಸಿಕೊಂಡು ಬರುವಾಗ ರಂಗನಾಥಪುರ ಗೇಟಿನಲ್ಲಿರುವ ರಸ್ತೆ ಉಬ್ಬಿನ ಬಳಿ ಬೈಕಿನಿಂದ ಆಯತಪ್ಪಿ ಕೆಳಗೆ ಬಿದ್ದು ಸಾವಿಗೆ ಶರಣಾಗಿದ್ದಾರೆ. ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಕೆ.ಎನ್.ಗಿರೀಶ್ ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿದ್ದು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತನ ಬಂಧುಗಳ ಆಕ್ರಂದನವು ಮುಗಿಲು ಮುಟ್ಟಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version