ಸಿನಿ ಸುದ್ದಿ

ನಾನು ದೇಶ ಬಿಟ್ಟುಹೋಗೋ ಮಾತನಾಡಿಲ್ಲ : ನಟ ಚೇತನ್

Published

on

ಸುದ್ದಿದಿನ, ಕಲಬುರಗಿ : ಮಿ ಟೂ ಅನ್ನೊದು ಇವತ್ತು ನಿನ್ನೆಯದಲ್ಲ,ಇದು ದಶಕಗಳಿಂದ ಬಂದಿರೋ ಕಾಯಿಲೆ ಅದನ್ನ ನಾವೆಲ್ಲ ಒಟ್ಟಾಗಿ ಕೈಜೋಡಿಸಿ ತೆಗೆದುಹಾಕೋದು ನಮ್ಮಲ್ಲರ ಕರ್ತವ್ಯ. ಚಿತ್ರರಂಗ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿದೆ, ಅಲೆಮಾರಿ ಜನಾಂಗದವರಿಗೂ ಲೈಂಗಿಕ ಕಿರುಕೂಳ ಆಗ್ತಿದೆ. ಕಾನೂನಾತ್ಮಕವಾಗಿ ಇದರ ಬಗ್ಗೆ ಆಂತರಿಕ ಸಮಿತಿ ರಚಿಸಬೇಕಾಗಿದೆ ಎಂದು ಕಲಬುರಗಿಯ ಕನ್ನಡ ಭವನದಲ್ಲಿ ನಟ ಚೇತನ್ ಸುದ್ಧಿಗೋಷ್ಟಿಯಲ್ಲಿ ತಿಳಿಸಿದರು.

ಮಿ ಟೂ ಅಡಿಯಲ್ಲಿ ಬರುವ ಕೆಸ್‌ಗಳನ್ನ ಸೂಕ್ಷ್ಮವಾಗಿ ಪರಿಶೀಲಿಸಲಾಗ್ತಿದೆ, ದೂರುಪಯೋಗ ಆಗೋಕೆ ಬಿಡಲ್ಲ. ತನ್ನ ಮೇಲೆ ದೌರ್ಜನ್ಯ ಆದಾಗ ಮುಂದೆ ಬರ್ತಾರೆ, ಪ್ರಚಾರಗೊಸ್ಕರ ಯಾರು ಬರಲ್ಲ. ನಾನು ದೇಶ ಬಿಟ್ಟು ಹೋಗೊ ಮಾತು ಆಡಿಲ್ಲ, ಕರ್ನಾಟಕ ಬಿಟ್ಟು ಎಲ್ಲು ಹೋಗಲ್ಲ. ನಾಡಿನ ಮೂಲೆಮೂಲೆಗೂ ಹೋಗಿ ಜನರ ಸೇವೆ ಮಾಡುತ್ತಿದ್ದೇವೆ.ರಾಜಕೀಯಕ್ಕೆ ಬರೋ ಇಚ್ಛೆಯಿಲ್ಲ, ಸೌಲಭ್ಯ ವಂಚಿತರ ಪರವಾಗಿ ಹೋರಾಟ ಮುಂದುವರಿಕೆ ಮಾಡುತ್ತೇವೆ ಎಂದರು‌.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version