ದಿನದ ಸುದ್ದಿ
ಅದು ಕಣ್ಣಲ್ಲ ಕುಲುಮೆ, ಸುಖ ದುಃಖ ಬೆಂದ ಚಿಲುಮೆ : ಡಾಲಿ ಧನಂಜಯ
ಸುದ್ದಿದಿನ ಡೆಸ್ಕ್ : ಕಣ್ಣ ಹೊರಳಾಟ, ಮೌನದಲಿ ತನ್ನ ನಟನೆಯನು ಪಳಗಿಸಿಕೊಂಡಿದ್ದರು ನಟ ಇರ್ಫಾನ್ ಖಾನ್. ಇವರ ಅಕಾಲಮರಣಕ್ಕೆ ಅದೆಷ್ಟು ಮಂದಿ ಕಂಬನಿ ಮಿಡಿದರು. ಕೇವಲ ಹೀರೋಹಿಸಂ ರೂಪಿಸಿಕೊಂಡಿರುವ ನಟ ಯಾವುದೋ ಒಂದು ವರ್ಗದ ಅಭಿಮಾನಿಗಳ ಎದೆಯಲ್ಲಿ ಉಳಿದಿರುತ್ತಾನೆ. ಆದರೆ ಬದುಕಿನ ನಮ್ಮದೇ ಪಾತ್ರಗಳನ್ನು ಆವಾಹಿಸಿ ಅಭಿನಯಿಸಿದ ನಟ ಮಾತ್ರ ಎಲ್ಲರಲ್ಲೂ ಉಳಿದಿರುತ್ತಾನೆ ಎಂಬುದಕ್ಕೆ ಇರ್ಫಾನ್ ಸಾಕ್ಷಿ.
ವಿಶ್ವದ ಸಿನೆರಂಗದ ಪ್ರಖ್ಯಾತರು ಇರ್ಫಾನ್ ಸಾವಿಗೆ ಅತೀವ ಸಂಕಟದಿಂದ ತಮ್ಮ ಸೋಶಿಯಲ್ ಮೀಡಿಯಾ ಫ್ಲಾಟ್ ಪಾರ್ಮ್ ನಲ್ಲಿ ಅವರೊಂದಿಗಿನ ಅನುಭವವನ್ನು ಹಂಚಿಕೊಂಡಿದ್ದಾರೆ. ಮಲಯಾಳಿ, ಕನ್ನಡ ಸಿನೆಮಾ ನಟಿ ಪಾರ್ವತಿ ಮೆನನ್ ಕೂಡ ಇರ್ಫಾನ್ ಜತೆಗಿನ ನೆನಪನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ಹಾಗೇ ನಮ್ಮ ಕನ್ನಡದ ನಟ ಡಾಲಿ ಧನಂಜಯ ಕೂಡ ಇರ್ಫಾನ್ ಖಾನ್ ಸಾವಿಗೆ ಕಂಬನಿ ಮಿಡಿಯುತ್ತಾ” ಅದು ಕಣ್ಣಲ್ಲ ಕುಲುಮೆ,ಸುಖ ದುಃಖ ಬೆಂದ ಚಿಲುಮೆ” ಎಂದು ತಮ್ಮ ನೆಚ್ಚಿನ ನಟನ ಬಗ್ಗೆ ಎದೆಯ ಮಾತೊಂದನು ಹಂಚಿಕೊಂಡಿದ್ದಾರೆ. ಇರ್ಫಾನ್…!?
ಸುದ್ದಿದಿನ.ಕಾಂ|ವಾಟ್ಸಾಪ್|9980346243