ಸಿನಿ ಸುದ್ದಿ
ಜಗ್ಗೇಶ್ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರ..!
ಸುದ್ದಿದಿನ ಡೆಸ್ಕ್: ಕನ್ನಡದ ಹಾಸ್ಯ ನಟರ ಕ್ಷೇತ್ರದಲ್ಲಿ ತಮ್ಮದೇ ಬ್ರ್ಯಾಂಡ್‍ಅನ್ನು ಇನ್ನೂ ಕಾಯ್ದುಕೊಂಡಿರುವ ನವರಸ ನಾಯಕ ಜಗ್ಗೇಶ್ ಅವರು ಒಂದು ಸಿನಿಮಾಗೆ ತೆಗೆದುಕೊಳ್ಳುವ ಪೇಮೆಂಟ್ ಎಷ್ಟು ಗೊತ್ತಾ? ಇವರ ಸಂಭಾವನೆ ಯಾವ ಸೂಪರ್ ಸ್ಟಾರ್ ನಟರಿಗೂ ಕಡಿಮೆ ಇಲ್ಲ.
ಜಗ್ಗೇಶ್ ಪ್ರತೀ ಸಿನಿಮಾಗೆ 1.25 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ. ಇತ್ತೀಚೆಗೆ ಖಾಸಗಿ ಎಫ್‍ಎಂವೊಂದರಲ್ಲಿ ತಮ್ಮ ಮುಂಬರುವ 8ಎಂಎಂ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಗ್ಗೇಶ್ ತಮ್ಮ ಆದಾಯ, ಖರ್ಚುವೆಚ್ಚ ಕುರಿತು ಮನ ಬಿಚ್ಚಿ ಮಾತಾಡಿದ್ದಾರೆ.
ಆರ್‍ಜೆ ನೇತ್ರಾ ಅವರು ಕೇಳಿದ ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರ ಕೊಟ್ಟು ಬೆಚ್ಚಿಬೀಳಿಸಿದ್ದಾರೆ. ಜಗ್ಗೇಶ್ ಹೇಳಿರುವ ಪ್ರಕಾರ ಅವರ ಬ್ಯಾಂಕ್‍ನಲ್ಲಿ 35 ಲಕ್ಷ ರೂ. ಹಣ ಇದೆ. ಸಾಕಷ್ಟು ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ಬಿಟ್ಟಿರುವ ಅವರು ತಿಂಗಳಿಗೆ ಎರಡರಿಂದ ಮೂರು ಲಕ್ಷ ರೂ. ಬಾಡಿಗೆ ಹಣ ಪಡೆಯುತ್ತಾರೆ. ತುರುವೇಕೆರೆಯಲ್ಲಿ ತೋಟ, ಗದ್ದೆ ಜತೆಗೆ ತಮ್ಮ ಮುಂದಿನ ತಲೆಮಾರಿಗೆ ಸಾಕಾಗುವಷ್ಟು ಆಸ್ತಿ ಮಾಡಿಟ್ಟಿರುವುದಾಗಿ ಜಗ್ಗೇಶ್ ಹೇಳಿದ್ದಾರೆ.
ಕನ್ನಡ ಸಿನಿಮಾ ರಂಗದಲ್ಲಿ ಪೇಮೆಂಟ್ ವಿಚಾರದಲ್ಲಿ ನಾನು, ವಿಷ್ಣುವರ್ಧನ್ ಪಕ್ಕಾ ಆಗಿದ್ದೆವು. 1.25 ಕೋಟಿ ರೂ. ಕೊಟ್ಟರೆ ಮಾತ್ರ ಸಿನಿಮಾ ಮಾಡುತ್ತೇನೆ. ಇಲ್ಲ ಅಂದ್ರೆ ಖಂಡಿತ ಮಾಡಲ್ಲ ಎಂದು ಜಗ್ಗೇಶ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಕ್ರೆಡಿಟ್ ಕಾರ್ಡ್ ಬಳಸಲ್ಲ ಯಾವುದೋ ಒಂದು ಬ್ಯಾಂಕ್‍ನ ಡೆಬಿಟ್ ಕಾರ್ಡ್ ನನ್ನ ಬಳಿ ಇದೆ. ಖರ್ಚಿನ ವಿಚಾರದಲ್ಲಿ ನಾನು ತುಂಬ ಹುಷಾರು, ನೋಡಿ ಮಾಡಿ ಖರ್ಚು ಮಾಡುತ್ತೇನೆ. ನನ್ನ ಸಂಪಾದನೆಯ ಅರ್ಧ ಹಣ ರಾಜಕೀಯಕ್ಕೆ ಬಂದು ಕಳೆದಿದ್ದೇನೆ ಅದು ಬಿಟ್ಟರೆ ಇನ್ನೆಲ್ಲೂ ಹಣ ಕಳೆದುಕೊಂಡಿಲ್ಲ ಎಂದು ಅವರು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401