ದಿನದ ಸುದ್ದಿ

ಕನ್ನಡಿಗರನ್ನು ತಾಯ್ನಾಡಿಗೆ ಕಳುಹಿಸಿದ ನಟ ಸೋನು ಸೂದ್..!

Published

on

ಸುದ್ದಿದಿನ ಡೆಸ್ಕ್ : ನಟ ಸೋನು ಸೂದ್ ಕೊರೋನಾ ಸಂಕಷ್ಟದ ಸಮಯದಲ್ಲಿ ಜನಸೇವೆಯಲ್ಲಿ ತೊಡಗಿದ್ದಾರೆ. ಮುಂಬೈನಲ್ಲಿ ಸಿಕ್ಕಿಹಾಕಿಕೊಂಡಿದ್ದ ನೂರಾರು ವಲಸೆ ಕಾರ್ಮಿಕರಿಗೆ ಸಹಾಯ ಮಾಡುವುದರ ಮೂಲಕ ಹೃದಯ‌‌ ವೈಶಾಲ್ಯತೆಯನ್ನು ಮೆರೆದಿದ್ದಾರೆ.

ಸೋನು ಸೂದ್ ಅವರು ಮಹಾರಾಷ್ಟ್ರದಲ್ಲಿದ್ದ ಕರ್ನಾಟಕದ‌ 350 ಕಾರ್ಮಿಕರನ್ನು ಎರಡೂ ಸರ್ಕಾರಗಳಿಂದ ಅನುಮತಿ ಪಡೆದು,ತಮ್ಮ ಸ್ವಂತ ಖರ್ಚಿನಲ್ಲಿ ಬಸ್ಸಿನ ವ್ಯವಸ್ಥೆ ಮಾಡಿ, ಸೋಮವಾರ, ಮಹಾರಾಷ್ಟ್ರದ ಥಾಣೆಯಿಂದ ಕರ್ನಾಟಕದ ಗುಲ್ಬರ್ಗಕ್ಕೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಅವರು ಬಸ್ಸುಗಳಿರುವ ಸ್ಥಳಕ್ಕೆ ಬಂದು ಕಾರ್ಮಿಕರಿಗೆ ಸುರಕ್ಷಿತವಾಗಿ ನಿಮ್ಮ ಪ್ರಯಾಣ ಸಾಗಲಿ‌ ಎಂದು ಹಾರೈಸಿ ಕಳಿಸಿದ್ದಾರೆ.


  • “ನಾವೆಲ್ಲರೂ ಈ ಜಾಗತಿಕ ಆರೋಗ್ಯ ವಿಪತ್ತನ್ನು ಎದುರಿಸುತ್ತಿರುವ ಪ್ರಸ್ತುತ ಕಾಲದಲ್ಲಿ, ಪ್ರತಿಯೊಬ್ಬ ಭಾರತೀಯರು ತಮ್ಮ ಕುಟುಂಬಗಳು ಮತ್ತು ಆತ್ಮೀಯರೊಂದಿಗೆ ಇರಲು ಅರ್ಹರು ಎಂದು ನಾನು ಬಲವಾಗಿ ನಂಬುತ್ತೇನೆ. ಈ ವಲಸಿಗರು ಮನೆಗೆ ತಲುಪಲು ಸಹಾಯ ಮಾಡಲು ನಾನು ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಗಳಿಂದ ಅಧಿಕೃತ ಅನುಮತಿಗಳನ್ನು ಸುಮಾರು ಹತ್ತು ಬಸ್ಸುಗಳಿಗೆ ಪಡೆದುಕೊಂಡಿದ್ದೇನೆ.” ಎಂದಿದ್ದಾರೆ ನಟ –ಸೋನು ಸೂದ್.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version