ಸಿನಿ ಸುದ್ದಿ

ತಾಯಿಯ ತೋಟ ಮಾರಾಟ ಮಾಡಲು ಮುಂದಾಗಿದ್ದೇನೆ : ನಟ ವಿನೋದ್ ರಾಜ್ ; ಕಾರಣ ಏನು ಗೊತ್ತಾ..?

Published

on

ಸುದ್ದಿದಿನ, ಬೆಂಗಳೂರು : ಹಲವು ಕಹಿ ಘಟನೆಯಿಂದ ಬೇಸತ್ತ ನಟ ವಿನೋದ್ ರಾಜ್ ಅವರಿಗೆ ಜೀವನದಲ್ಲಿ ಕಷ್ಟದ ಮೇಲೆ ಕಷ್ಟಗಳು ಬಂದದ್ದರಿಂದ ಚೆನೈ‌ನಲ್ಲಿರುವ ಆಸ್ತಿ ಮಾರಾಟಕ್ಕೆ ಮುಂದಾಗಿದ್ದು ಕೃಷಿಯಿಂದ ಜೀವನ ನಡೆಸಲು ಕಷ್ಟವಾಗುತ್ತಿದೆ. ಎಂದು ನೆಲಮಂಗಲದಲ್ಲಿ ಬೇಸರದಿಂದ ನುಡಿದರು.

ಚಿತ್ರರಂಗದಿಂದ ದೂರ ಉಳಿದು ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ವಿನೋದ್ ರಾಜ್ ಅವರು ಕೂಲಿಯಾಳುಗಳಿಗೆ ಸಂಬಳ ನೀಡುವ ಹಣ ಅವರ ಮನೆಯಿಂದ ಇತ್ತೀಚೆಗೆ ಕಳುವಾಯಿತು. ಇಂದಿನ ಪರಿಸ್ಥಿತಿಯಲ್ಲಿ ಒಂದು ಲಕ್ಷ ಹಣ ಹೊಂದಿಸುವುದು ಕಷ್ಟವಾಗಿದೆ. ಕೂಲಿ ಆಳುಗಳ ಸಂಬಳದ ಹಣ ಕಳವಾದ ಬಳಿಕ ಹಣ ಹೊಂದಿಸಲು ಸಾಕಷ್ಟು ಬಳಲಿದೆ. ತಾಲೂಕಿನಲ್ಲಿ ಪದೆಪದೆ ಕಳ್ಳತನ ಪ್ರಕರಣಗಳು ಮರುಕಳಿಸುತ್ತಿವೆ ಎಂದರು.

ಕಳ್ಳಕಾಕರ ಬಗ್ಗೆ ಪೊಲೀಸರು ಸೂಕ್ತ ಕ್ರಮಗಳನ್ನ ಜರುಗಿಸಬೇಕು.ಈಗಿನ ಪರಿಸ್ಥಿತಿಯಲ್ಲಿ ಕೃಷಿ ಮಾಡುವುದು ಕಷ್ಟಕರ. ಹೀಗಾಗಿ ಚೆನೈನಲ್ಲಿ 5 ಎಕರೆ ತೋಟ ಮಾರಾಟ ಮಾಡಲು ಮುಂದಾಗಿದ್ದೇನೆ. ತಾಯಿ ಮಾಡಿಟ್ಟ ತೋಟ ಮಾರುತ್ತಿದ್ದೇನೆ ಎಂದು ಬೇಸರದಿಂದ ತಮ್ಮ ಅಸಹಾಯಕತೆ ಹೊರಹಾಕಿದರು ನಟ ವಿನೋದ್ ರಾಜ್.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version