ದಿನದ ಸುದ್ದಿ

‘ನಾಗಮಂಡಲ’ ನಾಯಕಿಯ ಆಸ್ಪತ್ರೆ ಖರ್ಚಿಗೆ ಹಣವಿಲ್ಲ ; ಏನದು, ಈ ಸುದ್ದಿ ಓದಿ..!

Published

on

ಸುದ್ದಿದಿನ,ಬೆಂಗಳೂರು : ನಾಗಮಂಡಲ, ನಂ1, ಜೋಡಿಹಕ್ಕಿಯಂತಹ ಹಿಟ್ ಸಿನೆಮಾಗಳಲ್ಲಿ‌ ನಟಿಸಿ ಹೆಸರುವಾಸಿಯಾಗಿದ್ದ ನಟಿ ವಿಜಯಲಕ್ಷ್ಮಿ ಈಗ ತಮ್ಮ ಆಸ್ಪತ್ರೆಯ ಖರ್ಚಿಗೂ ಹಣವಿಲ್ಲದೆ ಸಂಕಷ್ಟ ಎದುರಿಸುತ್ತಿರುವುದು ದುರದೃಷ್ಟಕರ ಸಂಗತಿ.

ಆರೋಗ್ಯದಲ್ಲಿ‌ ಏರುಪೇರಾದ ಕಾರಣ ನಟಿ ವಿಜಯಲಕ್ಷ್ಮಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಸ್ತು ಹಾಗೂ ಹೈ ಬಿಪಿಯಿಂದ ಇವರ ಹದಗೆಟ್ಟಿದೆ. ಗುರುವಾರ ಈ ಘಟನೆ ನಡೆದಿದ್ದು,ಆಸ್ಪತ್ರೆಯ ಖರ್ಚಿಗೆ ಹಣವಿಲ್ಲದೆ ಚಿತ್ರರಂಗದ ಸಹಾಯ ಬೇಡಿದ್ದಾರೆ.

ನಟಿ‌ ವಿಜಯಲಕ್ಷ್ಮಿ ಅವರ ತಂಗಿ ಉಷಾದೇವಿಯವರು, ಇದ್ದ ಹಣವನ್ನೆಲ್ಲ ನಮ್ಮ ತಾಯಿಯ ಆರೋಗ್ಯಕ್ಕೆ ಖರ್ಚಾಗಿದ್ದು, ಈಗ ಅಕ್ಕನ ಆಸ್ಪತ್ರೆಯ ಖರ್ಚಿಗೆ ಹಣವಿಲ್ಲದಂತಾಗಿ್ದೆದೆ. ಆದ್ದರಿಂದ ಕನ್ನಡ‌ ಚಿತ್ರರಂಗದಿಂದ ಹಣಕಾಸಿನ ಸಹಾಯ ಬೇಡಿದ್ದೇನೆ ಎಂದು ದುಖ ಬರಿತವಾಗಿ ಮಾದ್ಯಮಗಳೊಂದಿಗೆ ಮಾತನಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version