ಸಿನಿ ಸುದ್ದಿ

ಈ ಕಿರುತೆರೆ ನಟಿ ಮೋಸ ಹೋಗಿದ್ದಾದ್ರೂ ಯಾಕೆ ಗೊತ್ತಾ..?

Published

on

ಆರೋಪಿ ರಘು | ನಟಿ ಸುಶ್ಮಿತಾ

ಸುದ್ದಿದಿನ, ಬೆಂಗಳೂರು : ಮಹಿಳಾ ಸಂಘಕ್ಕೆ ರಾಜ್ಯಾಧ್ಯಕ್ಷೆಯಾಗಿ ಮಾಡುವುದಾಗಿ ಕಿರುತೆರೆ ನಟಿ ಸುಶ್ಮಿತಾರಿಂದ ಲಕ್ಷಾಂತರ ರೂಪಾಯಿ ಕಸಿದು ರಘು ಚಂದ್ರಪ್ಪ ಹಾಗೂ ಸಂಗೀತಾ ಎಂಬುವರು ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಅದಿ ಶಕ್ತಿ ಮಹಿಳಾ ಸಂಘಕ್ಕೆ ರಾಜ್ಯಧ್ಯಕ್ಷೆಯಾಗಿ ಮಾಡುವುದಾಗಿ ಹೇಳಿದ್ದ ರಘು ಚಂದ್ರಪ್ಪ ಹಾಗೂ ಸಂಗೀತ ಅವರಿಂದ ಅಧ್ಯಕ್ಷ ಗಾದಿಗೆ ಆಸೆ ಬಿದ್ದು ಕಿರುತೆರೆ ನಟಿ ಸುಷ್ಮಿತ ಅವರು ಮೋಸಹೋಗಿದ್ದಾರೆ. ಹಣ ಕಳೆದುಕೊಂಡ ಈ ಕಿರುತೆರೆ ನಟಿ, ಕನ್ನಡದ ಹಲವು ಧಾರವಾಹಿಗಳಲ್ಲಿ ಸಹ ನಟಿಯಾಗಿ ನಟಿಸಿದ್ದಾರೆ.
ಸುಶ್ಮಿತ ಅಲ್ಲದೆ ಸರೋಜ ಎಂಬುವರಿಗೂ ವಂಚನೆ ಈ ಆರೋಪಿಗಳು ವಂಚನೆ ಮಾಡಿರುವುದಾಗಿ ತಿಳಿದು ಬಂದಿದೆ.

ಹಣ ಕೇಳೀದರೆ ನಟಿ ಸುಶ್ಮಿತಾ ಹಾಗೂ ಸರೋಜ ಇಬ್ಬರಿಗೂ ಜೀವ ಬೆದರಿಕೆ ಹಾಕುತ್ತಿದ್ದ ಈ ರಘು ಚಂದ್ರಪ್ಪ ಹಾಗೂ ಸಂಗೀತ ಅವರ ಮೇಲೆ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಐಪಿಸಿ 420,418, ಹಾಗೂ 506 ಸೆಕ್ಷನ್ ಆಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version