ಸಿನಿ ಸುದ್ದಿ

ಕ್ಯೂಟ್ ಬೆಡಗಿ ಅದಿತಿ ಪ್ರಭುದೇವಾಗೆ ‘ಕ್ರಶ್’..!

Published

on

ಚಂದನವನದ ಕ್ಯೂಟ್ ಬೆಡಗಿ ಅದಿತಿ ಪ್ರಭುದೇವಾ ಸ್ಯಾಂಡಲ್‍ವುಡ್‍ನಲ್ಲಿ ಇತೀಚೆಗೆ ಕಿಕ್ಕೇರಿಸುತ್ತಿರುವ ಬೆಡಗಿ ಎಂದರೆ ತಪ್ಪಾಗಲಾರದು. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಅದಿತಿ ತಮ್ಮ ವಿಭಿನ್ನ ಸಿನಿಮಾಗಳ ಮೂಲಕ ತಮ್ಮದೇಯಾದ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಪಡ್ಡೆ ಹುಡುಗರ ಕನಸಿನಲ್ಲಿ ಕಾಡುತ್ತಾರೆ ಸಹ.

ಅಲ್ಲದೆ ಇತ್ತೀಚಿನ ಬ್ಯುಸಿಯೆಸ್ಟ್ ನಟಿಯರಲ್ಲಿ ಅದಿತಿ ಕೂಡ ಒಬ್ಬರು. ಹೀಗಿರುವಾಗ ತಮ್ಮ ಕ್ರಶ್ ಕುರಿತು ಹೇಳಿದರೆ ಯಾರ ಕಿವಿ ನಿಮಿರುವುದಿಲ್ಲ ಹೇಳಿ. ಈ ಹಿಂದೆ ಬ್ರಹ್ಮಚಾರಿ ಸಿನಿಮಾದಲ್ಲಿ ಹೆಂಡತಿ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದ ಅದಿತಿ, ಈಗ ವೃದ್ಧೆಯ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಓಲ್ಡ್ ಮಾಂಕ್ ಸಿನಿಮಾಗೆ ಸಹ ಸಹಿ ಹಾಕಿದ್ದಾರೆ.

ಹೀಗೆ ನಾನಾ ಪಾತ್ರಗಳಲ್ಲಿ ಅದಿತಿ ಪ್ರಯೋಗ ನಡೆಸುತ್ತಿದ್ದಾರೆ. ಆದರೆ ಇದೀಗ ತಮ್ಮ ಕ್ರಶ್ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಕೇವಲ ಹುಡುಗರಿಗೆ ಮಾತ್ರವಲ್ಲ, ಬಹುತೇಕ ಹುಡುಗಿಯರಿಗೂ ಬೈಕ್‍ಗಳ ಮೇಲೆ ಕ್ರಶ್ ಆಗುತ್ತದೆ. ವಿಶೇಷವಾಗಿ ರಾಯಲ್ ಎನ್ಫೀಲ್ಡ್ ಎಂದು ಬರೆದುಕೊಂಡಿದ್ದಾರೆ. ಹಳೆಯ ರಾಯಲ್ ಎನ್ಫೀಲ್ಡ್ ಬೈಕ್ ಮೇಲೆ ಕುಳಿತಿರುವ ಫೋಟೋಗಳನ್ನು ಹಾಕಿದ್ದಾರೆ. ಈ ಮೂಲಕ ರಾಯಲ್ ಎನ್ಫೀಲ್ಡ್ ಬೈಕ್ ಮೇಲಿನ ತಮ್ಮ ಕ್ರಶ್ ಹೊರ ಹಾಕಿದ್ದಾರೆ.

ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.instagram.com/p/B_bhG02DJzg/?igshid=1bftoxooivtdt

ಕೃಪೆ : ಸಿನಿತಾರಾ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version