ಲೈಫ್ ಸ್ಟೈಲ್
‘ಆಫ್ರಿಕನ್ ಕ್ಯಾಟ್ ಫಿಶ್’ ಬಗ್ಗೆ ಎಚ್ಚರ ವಹಿಸಿ..!
ಸುದ್ದಿದಿನ,ಮಡಿಕೇರಿ: ಆಫ್ರಿಕನ್ ಕ್ಯಾಟ್ ಫಿಶ್ ಒಂದು ವಿದೇಶಿ ಮೀನಿನ ತಳಿ, ಅತಿಯಾದ ಮಾಂಸಹಾರಿ ಪ್ರವೃತ್ತಿ ಹೊಂದಿರುವ ಈ ಮೀನು ತನ್ನ ಸಂತಾನವನ್ನೇ ಆಹಾರವಾಗಿ ಬಳಸುತ್ತದೆ. ಹಾಗಾಗಿ ಇ ತಳಿ ಕೆರೆ ಕಟ್ಟೆಗಳಲ್ಲಿ ನದಿಭಾಗಗಳಲ್ಲಿ ಅನ್ಯ ತಳಿಗಳನ್ನು ಬದುಕಿ ಉಳಿಯಲು ಬಿಡುವುದಿಲ್ಲ.
ನೀರಿನಲ್ಲಿರುವ ಅಮ್ಲಜನಕವನ್ನು ಬಳಸುವುದರೊಂದಿಗೆ ಇದು ಗಾಳಿಯಲ್ಲಿರುವ ಅಮ್ಲಜನಕವನ್ನು ಉಸಿರಾಟಕ್ಕಾಗಿ ಬಳಸಿಕೊಳ್ಳುವ ವಿಶೇಷ ಗುಣ ಹೊಂದಿರುವುದರಿಂದ ತಾನಿರುವ ಕೆರೆ ಕಟ್ಟೆಗಳಲ್ಲಿ ಆಹಾರ ಲಭ್ಯತೆ ಕಡಿಮೆಯಾದಲ್ಲಿ ಬೇರೆ ಕೆರೆಕಟ್ಟೆಗಳಿಗೆ ವಲಸೆ ಹೋಗುವ ಸಾಮಥ್ರ್ಯ ಹೊಂದಿದೆ.
ಹಲವರು ಅನಧಿಕೃತವಾಗಿ ಈ ಮೀನಿನ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದು ಅದಕ್ಕೆ ಮಾಂಸಾಹಾರವನ್ನು ನೀಡುತ್ತಿದ್ದರಿಂದ ಸುತ್ತಮುತ್ತಲಿನ ಪರಿಸರ ನೈರ್ಮಲ್ಯದ ಮೇಲೂ ವಿಪರೀತ ಪರಿಣಾಮ ಬೀರುತ್ತಿದೆ.
ಈ ಹಿನ್ನಲೆಯಲ್ಲಿ ರಾಷ್ಟ್ರೀಯ ನ್ಯಾಯಾಧಿಕರಣ ನವದೆಹಲಿ, ಚಂದ್ ಪಾಶಾ ಮತ್ತು ಇತರರು ಪ್ರಕರಣಕ್ಕೆ ಸಂಭಂದಿಸಿದಂತೆ ನೀಡಿದ ತೀರ್ಪಿನ ಅನುಪಲನಾ ಕ್ರಮವಾಗಿ ಆಫ್ರಿಕನ್ ಕ್ಯಾಟ್ ಫಿಶ್ ಪಾಲನೆ ನಿಗ್ರಹ ತಂಡವನ್ನು ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ರಚಿಸಲಾಗಿದೆ. ಹಾಗೂ ಕೃಷಿಕರು ಭಾರತೀಯ ಮೂಲದ ಕ್ಯಾಟ್ ಫಿಶ್ ತಳಿಯ ಮರಿಗಳನ್ನು ಕೇವಲ ಇಲಾಖೆಯ ಅಧಿಕೃತ ಕೇಂದ್ರಗಳಲ್ಲಿ ಮಾತ್ರ ಪಡೆಬಹುದಾಗಿದೆ.
ಇದನ್ನು ಹೊರತುಪಡಿಸಿ ಎಲ್ಲಾ ವಿಧದ ಕ್ಯಾಟ್ ಫಿಶ್ ಮೀನುಮರಿಗಳ ಮಾರಾಟ, ಪಾಲನೆ, ನ್ಯಾಯಾಲಯದ ತೀರ್ಪಿನ ಉಲ್ಲಂಘನೆಯಾಗಿ ಕಾನೂನು ಬಾಹಿರ ಕ್ರಮವಾಗುತ್ತದೆ ಎಂದು ಮೀನುಗಾರಿಕೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243