ದಿನದ ಸುದ್ದಿ

ಬೆಂಗಳೂರಿನಲ್ಲಿ ಏರ್‍ಮೆನ್ ನೇಮಕಾತಿ ರ್ಯಾಲಿ: ಆನ್‍ಲೈನ್ ಮೂಲಕ ನೋಂದಣಿಗೆ ಸೂಚನೆ

Published

on

ಸುದ್ದಿದಿನ,ಕಲಬುರಗಿ: ಭಾರತೀಯ ವಾಯುಸೇನೆಯಲ್ಲಿ ಗ್ರೂಪ್ ‘ಎಕ್ಸ್’ ಏರ್‍ಮನ್ (ತಾಂತ್ರಿಕ ಟ್ರೇಡ್) ಹುದ್ದೆಗಳಿಗೆ 2020ರ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 4 ರವರೆಗೆ ಬೆಂಗಳೂರಿನ ಕಬ್ಬನ್ ರೋಡದಲ್ಲಿನ ಮಾಣಿಕೇಶವ ಪರೇಡ್ ಗ್ರೌಂಡ್‍ದಲ್ಲಿ ರ್ಯಾಲಿ ಏರ್ಪಡಿಸಲಾಗಿದೆ. ಈ ರ್ಯಾಲಿಯಲ್ಲಿ ಭಾಗವಹಿಸಲು ಅರ್ಹ ಪುರುಷ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ನೋಂದಣಿಗೆ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಆನ್‍ಲೈನ್ ನೋಂದಣಿ ಪ್ರಕ್ರಿಯೆಯು 2020ರ ಸೆಪ್ಟೆಂಬರ್ 8 ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 11 ರಂದು ಮುಕ್ತಾಯಗೊಳ್ಳಲಿದೆ. ಕರ್ನಾಟಕ ರಾಜ್ಯದ ಅವಿವಾಹಿತ ಪುರುಷ ಭಾರತೀಯ ನಾಗರಿಕರು ಈ ರ್ಯಾಲಿಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳು 2000ರ ಜನವರಿ 17 ರಿಂದ 2003ರ ಡಿಸೆಂಬರ್ 30 ರ ಅವಧಿಯಲ್ಲಿ ಜನಿಸಿರಬೇಕು.

ಅಭ್ಯರ್ಥಿಗಳು 152.5 ಸೆಂ.ಮೀ. ಎತ್ತರ ಹೊಂದಿರಬೇಕು. ಅಭ್ಯರ್ಥಿಗಳು ವಿದ್ಯಾರ್ಹತೆ, ಆನ್‍ಲೈನ್ ನೋಂದಣಿ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ www.airmenselection.cdac.in ವೆಬ್‍ಸೈಟ್‍ನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version