ಬಹಿರಂಗ

ಅಂಬೇಡ್ಕರ್ ವಾದ ಭಾರತದ ಸಮಸ್ಯೆಗಳಿಗೆ ಉತ್ತರ ; ಅದೇ ಎತ್ತರ

Published

on


ಪರಶುರಾಮ್.ಎ ರವರ ಹೊಸ ಪುಸ್ತಕ ” ವಿದ್ಯಾರ್ಥಿ ಯುವಜನರಿಗಾಗಿ ಅಂಬೇಡ್ಕರ್ ವಾದ ” ಬಿಡುಗಡೆಗೆ ಸಿದ್ದಗೊಂಡಿದ್ದು, ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿಗಳು ಈ ಪುಸ್ತಕಕ್ಕೆ ಬರೆದ ಮುನ್ನುಡಿ ನಿಮ್ಮ ಓದಿಗೆ.


  • ಪೂಜ್ಯ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿಗಳು
    ಶ್ರೀ ಉರಿಲಿಂಗ ಪೆದ್ದೀಶ್ವರ ಮಠ
    ಮೈಸೂರು

ಅಂಬೇಡ್ಕರ್ ವಾದ ಎಂಬುದು ಭಾರತದ ಎಲ್ಲಾ ಸಮಸ್ಯೆಗಳಿಗೆ ಉತ್ತರ. ಹಾಗೂ ಅದೇ ಎತ್ತರ.” ಭಾರತೀಯರ ಹಾಗೂ ಭಾರತದ ವಿಮೋಚನೆ ಇರುವುದೇ ಅಂಬೇಡ್ಕರ್ ವಾದದಲ್ಲಿ.

ಹೀಗಾಗಿ ಸಹೋದರ ಪರಶುರಾಮ್. ಎ ರವರು ಹೊರತರುತ್ತಿರುವ, “ವಿದ್ಯಾರ್ಥಿ- ಯುವಜನರಿಗಾಗಿ ಅಂಬೇಡ್ಕರ್ ವಾದ” ಪುಸ್ತಕವು ಕೇವಲ ಪದಗಳ ಪುಂಜವಲ್ಲ. ಅದು ‘ಅಧಿಕಾರ ಹೀನರನ್ನು ಅಧಿಕಾರಕ್ಕೆ ಏರಿಸುವುದೇ ಅಂಬೇಡ್ಕರ್ ವಾದ’ ಎಂದು ಕಟು ಸತ್ಯವನ್ನು ಸಮಸ್ತ ಶೋಷಿತ ವರ್ಗಕ್ಕೆ ರವಾನಿಸಿದ್ದಾರೆ.

ಶೋಷಿತರ ಸಮಸ್ಯೆಯು ರಾಜಕೀಯ ಸಮಸ್ಯೆಯಾಗಿದೆ ಎಂಬ ನಿಜದ ನಿಲುವನ್ನು ತಿಳಿಸುತ್ತಾ, ಅಧಿಕಾರ ಹೀನತೆಯೇ ಅಸ್ಪೃಶ್ಯತೆ ಎಂಬ ಸತ್ಯವನ್ನು ದಮನಿತರಿಗೆ ತಿಳಿ ಹೇಳಿದ ವಿಷಯವನ್ನು ಇಲ್ಲಿ ಸೂಕ್ಷ್ಮವಾಗಿ ಲೇಖಕರು ಎತ್ತಿ ಹಿಡಿದಿದ್ದಾರೆ. ಇಂದು ಅಂಬೇಡ್ಕರ್ ವಾದಿಗಳು, ಅವಕಾಶವಾದಿಗಳಾಗಿ ನಮ್ಮ ನೊಂದ ಸಮಾಜವನ್ನು ಮತ್ತೆ ಹಿಂದಕ್ಕೆ ತಳ್ಳುತ್ತಿದ್ದಾರೆ. ಹಾಗೂ ಸಾಧಕರಾಗಬೇಕಿದ್ದ ನಾವುಗಳು, ಸಮಯ ಸಾಧಕರಾಗುತ್ತಿದ್ದೇವೆ.

ಇದು ಅತ್ಯಂತ ಅಪಾಯದ ಕಾಲ ನಮ್ಮ ಪಾಲಿಗೆ ಬಂದು ಬಿಟ್ಟಿದೆ. ಈ ಕಾರಣಕ್ಕಾಗಿ ನಮಗೆ ಅಂಬೇಡ್ಕರ್ ವಾದ ಭಾರತದ ನಿಜವಾದ ಮುಖವನ್ನು ನಮಗೆ ಪರಿಚಯಿಸುತ್ತದೆ. ‘ಸಮಗ್ರ ಭಾರತವೆಂದರೆ ಅದು ಬೇರೆನೂ ಅಲ್ಲ. ಅದೇ ಅಂಬೇಡ್ಕರ್ ವಾದ‌’. ಜಗತ್ತು ಅಂಬೇಡ್ಕರ್ ವಾದದ ಕಡೆ ಮುಖ ಮಾಡಿದರೆ, ಈ ನತದೃಷ್ಠ ಭಾರತೀಯರು ಜಾತಿವಾದದ ಕಡೆ ಮುಖ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರವರು: “ಭಾರತದಲ್ಲಿ ಮನುಷ್ಯರು ಜೀವಂತವಿಲ್ಲ. ಜಾತಿಗಳು ಜೀವಂತವಿದೆ” ಎಂದು ಮಾರ್ಮಿಕವಾಗಿ ತಿಳಿಸಿದ್ದಾರೆ.

ಕೊರಳಿನಿಂದ ಅಂಬೇಡ್ಕರ್ ವಾದವನ್ನು ಹೇಳುವುದು ಬೇರೆ. ಕರುಳಿನಿಂದ ಅಂಬೇಡ್ಕರ್ ವಾದವನ್ನು ಹೇಳುವುದೇ ಬೇರೆ. ಹೀಗಾಗೀ ನಮ್ಮ ಸಾಹಿತಿ ಪರಶುರಾಮ್ ಕರುಳಿನ ಅಂಬೇಡ್ಕರ್ ವಾದವನ್ನು ನಮಗೆ ತಿಳಿಸಿ ಕೊಟ್ಟಿದ್ದಾರೆ. ದಲಿತರ ಧ್ವನಿ ಪ್ರೊ.ಬಿ.ಕೃಷ್ಣಪ್ಪ ಹಾಗೂ ನಮ್ಮ ಮಹಾನ್ ವಿಮೋಚಕ ದಾದಾಸಾಹೇಬ್ ಕಾನ್ಷಿರಾಮ್ ಜೀಯವರ ಬಗ್ಗೆ ಒಳಗೊಂಡಂತೆ ಅದ್ಭುತವಾದ ನಿಖರತೆಯ ವಿಷಯಗಳನ್ನು ವಿದ್ಯಾರ್ಥಿ ಹಾಗೂ ಯುವಜನತೆಗೆ ತಿಳಿಸಿದ್ದಾರೆ. ಮುಂದೆಯೂ ಇವರ ಸಾಹಿತ್ಯ ಪ್ರಬುದ್ಧ ಭಾರತದ ಕಡೆಗೆ ದಾರಿ ದೀಪವಾಗಿರಲಿ, ಮತ್ತಷ್ಟು ಸಾಹಿತ್ಯ ಇವರಿಂದ ಹೊರಬರಲಿ ಎಂದು ಶುಭ ಕೋರುತ್ತೇನೆ.

“ಭವತು ಸಬ್ಬ ಮಂಗಳಂ”

(ಪುಸ್ತಕಗಳಿಗೆ ಸಂಪರ್ಕಿಸಿ: ಬುದ್ದ ಬುಕ್ ಹೌಸ್
ವಿದ್ಯಾರ್ಥಿ ಯುವಜನರಿಗಾಗಿ ಅಂಬೇಡ್ಕರ್ ವಾದ
ಬೆಲೆ: 80ರೂ
ಫೋನ್ ನಂಬರ್: 7406155272 / 8050807463)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version