ಲೈಫ್ ಸ್ಟೈಲ್
‘ಸುವರ್ಣ ಗೆಡ್ಡೆ ಹೂ’ ಬಗ್ಗೆ ನಿಮಗೆಷ್ಟು ಗೊತ್ತು..!?
ಹೂ ಎಂದಡೊಡನೆ ಎಲ್ಲರಿಗೂ ಇಷ್ಟ ಸುವಾಸಿತ ವಾಸನೆ ಬಿರುತ ಶುಭ ಮುಂಜಾನೆ ನಗೆ ಬೀರುತ ತನ್ನ ಜೀವನ ಸ್ವಾರ್ಥಕ ಗೊಳಿಸಿಕೊಳ್ಳುವ ಈ ಹೂಗಳ ಬಗ್ಗೆ ನಿಮಗೆ ತಿಳಿದೆ ಇದೆ. ಆದರೆ ನಾ ಇಲ್ಲಿ ಹೇಳಬೇಕೆಂದಿರುವುದು ಮಳೆಗಾಲದ ಮೂನ್ಸೂಚನೆ ನೀಡುವ ಅಪರೂಪದ ಹೂ ಇದನ್ನು ನೋಡಲು ವರ್ಷದವರೆಗೆ ಕಾಯ ಬೇಕು. ಆದರೆ ಅದರ ಹತ್ತಿರ ಹೋಗಲೆ ಬೇಕೆಂದರೆ ಮೂಗು ಮುಚ್ಚಿಕೊಂಡು ಹೋಗಬೇಕು ಅಷ್ಟೋಂದು ಸುವಾಸನೆ ಬೀರುತ್ತದೆ ಅನ್ಕೊಂಡಿದ್ದಿರಾ ಅಲ್ಲ ಅಷ್ಟೋಂದು ದುರ್ವಾಸನೆ ಬೀರುತ್ತದೆ. ಇಂಥದೊಂದು ಹೂ ಇದೆನಾ ಅಂತಾ ವಿಚಾರ ಮಾಡತ್ತೀದ್ದಿರಾ ಇಲ್ಲಿ ನೋಡಿ
ಹೂ ಅರಳುವುದು ಹೇಗೆ?
ಈ ಹೂವು ಎಲ್ಲಾ ಕಾಲದಲ್ಲಿಯೂ ನೋಡಲು ಸಿಗುವುದಿಲ್ಲ ಸಾಮಾನ್ಯವಾಗಿ ಎಪ್ರೀಲ್,ಮೇ ತಿಂಗಳನಲ್ಲಿ ಮಳೆ ಬಿದ್ದೊಡನೆ ವಾತವರಣದಲ್ಲಿ ಆರ್ದ್ರತೆ ಉಂಟಾದಾಗ ಈ ಸಮಯದಲ್ಲಿ ನೆಲದೊಳಗಿದ್ದ ಕಾಡು ಪಂಜರದ ಗಡ್ಡೆ ಮೊಗ್ಗಾಗಿ ಹೊರಬಂದು ಅರಳುತ್ತದೆ. 2 ವರ್ಷದಷ್ಟು ಹಳೆಯದಾದ ಕಾಡು ಪಂಜರ ಅಥವಾ ಸುವರ್ಣ ಗಡ್ಡೆಗೆ ಈ ಹೂವು ಅರಳುತ್ತದೆ. ಭೂಮಿಯ ಆಳದಲ್ಲಿ ಹೂತಿದ್ದ ಗಡ್ಡೆಗೆ ಮೊದಲ ಮಳೆಯ ಸ್ಪರ್ಶ ತಾಕಿದೊಡನೆ ಕಾಡು ಪಂಜರಗಡೆಯಿಂದ ಹೂವು ಅರಳಿ ನಿಲ್ಲುತ್ತದೆ. ಯಾರಿಗೂ ಗೊತ್ತಾಗದ ರೀತಿಯಲ್ಲಿ ದಿಡೀರನೆ ಎದ್ದು ನಿಲ್ಲತ್ತದೆ.ಇದು ಕೆಲವೊಮ್ಮೆ 7ರಿಂದ 10 ಅಡಿ ಎತ್ತರದವರೆಗೂ ಬೆಳೆಯಬಲ್ಲದು ಸುತ್ತ ಮುತ್ತಲೂ ಇದರ ವಾಸನೆ ಹರಡಿದಾಗಲೇ ಹೂವು ಅರಳಿದ್ದು ಅರಿವಾಗುತ್ತದೆ.
ಎರಡು ದಿನದ ಬದುಕು ಬಾಳುವ ಸುವರ್ಣ ಗೆಡ್ಡೆ
ಎರಡು ವರ್ಷಗಳ ಕಾಲ ಗಡ್ಡೆ ಮಣ್ಣಿನೊಳಗೇ ಇದ್ದು. ಎರಡು ವರ್ಷದ ಬಳಿಕ ಅರಳಿದರೂ ಇದರ ಜೀವಿತಾವಧಿ 2 ದಿನ ಮಾತ್ರ ಕೇವಲ 48 ಗಂಟೆ ಮಾತ್ರ ಕಾಡಿನ ಮಧ್ಯದಲ್ಲೆಲ್ಲೊ ಅರಳಿ ನಿಂತರು ತನ್ನ ಸುತ್ತಮುತ್ತಲೂ ಕೊಳೆತ ಶವದಂತೆ ವಾಸನೆ ಬೀರುತ್ತ ತಾನು ಇದ್ದೆನೆ ಎಂಬ ಸೂಚನೆ ನೀಡುತ್ತದೆ.ಇದನ್ನು (ಕಾಪ್ರ್ಸ್ ಫ್ಲವರ್) ಹೆಸರಿನಿಂದ ಕರೆಯಲಾಗುತ್ತದೆ. ಸಮುದ್ರ ಮಟ್ಟದಿಂದ ಸುಮಾರು 120 ರಿಂದ 365 ಮೀ ಎತ್ತರದಲ್ಲಿ ಮಾತ್ರ ಹೂವು ಅರಳುತ್ತದೆ.
ಈ ಹೂವಿನ ವಿಶೇಷತೆ
ಈ ಗಿಡದಲ್ಲಿರುವುದು ಒಂದೇ ದೈತ್ಯಾಕಾರದ ಎಲೆ ಮಾತ್ರ ಈ ಎಲೆಯೇ ಹೂವಿನ ಆಕಾರದಲ್ಲಿ ಸುರುಳಿ ಸುತ್ತಿಕೊಂಡಿರುತ್ತದೆ. ಕೆಲವೊಂದು ಗಿಡದ ಎಲೆ ಸುಮಾರು 6 ಮೀ (20ಅಡಿ) ದೊಡ್ಡದಾಗಿರುತ್ತದೆ. ಈ ಹೂವು ತನ್ನ ದುರ್ವಾಸನೆಯಿಂದ ಪರಾಗಸ್ಪರ್ಶಕ್ಕೆ ನೆರವಾಗುವ ವಿಶಿಷ್ಟ ಜಾತಿಯ ಕೀಟಗಳನ್ನು ಆಕರ್ಷಿಸುತ್ತದೆ. ಪರಾಗಸ್ಪರ್ಶದ ಬಳಿಕ ಹೂವು ಮರೆಯಾಗಿ ಅದೇ ಜಾಗದಲ್ಲಿ ಅರ್ಧ ಮೀ ಎತ್ತರದ ಹಣ್ಣಿನಗೊಂಚಲಿನ ಗಿಡ ಎದ್ದು ನಿಲ್ಲುತ್ತದೆ. ಭೂಮಿಯ ಒಳಗೆ ಸಂಗ್ರಹವಾದ ಇದರ ಗಡ್ಡೆ ಸುಮಾರು 75 ಕೆಜಿ ತನಕವೂ ತೂಕ ಇರುತ್ತದೆ.ಇದರಲ್ಲಿ ಕೆಲವೊಂದು ಗಡ್ಡೆ (ಸುವರ್ಣ ಗಡ್ಡೆ) ತರಕಾರಿಯಾಗಿಯೂ ಬಳಸುತ್ತಾರೆ. ಈ ಹೂವಿನ ಮೇಲೆ ಕಂದು ವೆಲ್ವೆಟ್ ವಸ್ತ್ರವನ್ನು ಹೊದಸಿ ಇಟ್ಟಂತೆ ಕಾಣುತ್ತದೆ. ಹೂವು ಪೂರ್ಣ ಅರಳಿದ ಮೇಲೆ ವಾಸನೆ ಇರುವುದಿಲ್ಲ. ಈ ಹೂವು ಹೆಚ್ಚಾಗಿ ರಾತ್ರಿಯ ವೇಳೆ ಅರಳುತ್ತದೆ ಅಲ್ಲದೇ ಗಡ್ಡೆಯಲ್ಲಿದ್ದ ಬಿಸಿಗಾಳಿಯನ್ನು ಹೊರಹಾಕುತ್ತದೆ. ಪಂಜರ ಗಡ್ಡೆಯ ಹೂವು ವಾಸನೆ ಸೂಸಿದರೂ ಎರಡೇ ದಿನದ ಬದುಕಿದ್ದರೂ ಸಹಸ್ರಾರು ಜನರ ಗಮನ ಸೆಳೆಯುತ್ತದೆ.
–ನಿವೇದಿತಾ ಸು ಸೋಲಾಪುರ
ಸುದ್ದಿದಿನ.ಕಾಂ|ವಾಟ್ಸಾಪ್|9980346243