ರಾಜಕೀಯ
ಕೇಂದ್ರ ಸಚಿನ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ
ಸುದ್ದಿದಿನ, ದಾವಣಗೆರೆ | ಸದಾ ಒಂದಿಲ್ಲೊಂದು ವಿವಾದಕ್ಕೆ ಗುರಿಯಾಗುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು ಈಗ ಮತ್ತೊಮ್ಮೆ ವಿವಾದದ ಹೇಳಿಕೆ ನೀಡಿದ್ದಾರೆ.
ಕೇಂದ್ರ ಕೌಶಲ್ಯಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಈಗ ಮತ್ತೊಂದು ವಿವಾದವನ್ನ ಮೈ ಮೇಲೆ ಎಳೆದುಕೊಂಡಿದ್ದಾರೆ. ಈ ಹಿಂದೆ ಸಂವಿಧಾನ ತಿದ್ದುಪಡಿ ಹಾಗೂ ದಲಿತರನ್ನ ನಾಯಿಗಳು ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿ ದಲಿತ ಸಮುದಾಯದವರನ್ನ ವಿರೋಧ ಕಟ್ಟಿಕೊಂಡಿದ್ದ ಹೆಗಡೆ ಈಗ ತಮ್ಮ ಸರ್ಕಾರವನ್ನ ಹಾಗೂ ಮೋದಿಯನ್ನ ಹೊಗಳಲು ಹೋಗಿ ಈ ಹಿಂದೆ ಕಾಂಗ್ರೆಸ್ ಸರ್ಕಾರವನ್ನ ತರಾಟೆಗೆ ತಗೆದುಕೊಂಡಿದ್ದರು, ನಿನ್ನೆ ಮೋದಿ ಹಾಗೂ ರಾಹುಲ್ ಗಾಂಧಿ ಅವರು ನಡೆಸಿದ ವಾಕ್ಸಮರವನ್ನ ರಾಹುಲ್ ಗಾಂಧಿ ಅಪ್ರಭುದ್ಧ ಹೇಳಿಕೆ ಹಾಗೂ ಮೋದಿ ಅವರು ಪ್ರಬುದ್ಧರು ಎಂದು ಹೇಳಿಕೆ ನೀಡಿ ಮೊದಲು ವಿವಾದಕ್ಕೆ ಕಿಡಿ ಹಚ್ಚಿದರು, ಅಲ್ಲದೆ ಈ ಹಿಂದೆ ಕಾಂಗ್ರೆಸ್ 70 ವರ್ಷ ಆಳ್ವಿಕೆಯನ್ನ ಮಾಡಿ ರಾಜಕಾರಣ ಅಂದ್ರೆ ಹೇಸಿಗೆ ತರುವಂತೆ ಮಾಡಿದ್ದಾರೆ ಎಂದು ಹೇಳಿದ್ದರು. ಮತ್ತೆ ಲಾಲ್ ಬಹಾದ್ದೂರ್ ಶಾಸ್ತ್ರಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ನಂತರದಲ್ಲಿ ಹೇಡಿ ತನದ ಹಾಗೂ ಮನೆ ಮುರುಕ ಪರಪಂರೆಯ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಬಂದಿದೆ ಎಂದು ತಮ್ಮ ನಾಲೆಗೆಯನ್ನ ಹರಿಬಿಡುವ ಕೆಲಸ ಮಾಡಿದರು. ಇದೆ ವೇಳೆ ಮಾಧ್ಯಮದವರು ಅಕ್ಷರ ಹಾದರ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳ ಮೇಲೆ ತಮ್ಮ ಉದ್ಧಟನದ ಹೇಳಿಕೆ ಹಾಗೂ ವಿವಾದತ್ಮಕ ಹೇಳಿಕೆಯನ್ನ ನೀಡಿ ತಾವು ಕೂಡ ಅಪ್ರಬುದ್ಧರು ಎಂದು ತೋರಿಸಿಕೊಟ್ಟಿದ್ದಾರೆ.
ಇನ್ನು ಈ ಹಿಂದೆ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ವಾಗ್ದಾಳಿ ನಡೆಸಿದ ಹೆಗಡೆ, ಪುಕ್ಕಟೆ ಉಪವಾಸ ಮಾಡಿದವರಿಂದಾಗಲಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಮೂರು ಫೊಟೋಗಳಿಂದಾಗಲಿ ಸ್ವಾತಂತ್ರ್ಯ ಬಂದಿಲ್ಲ. ಬದಲಾಗಿ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಜನರಿಂದ ದೇಶಕ್ಕೆ ಸ್ವಾತಂತ್ರ ಬಂದಿದ್ದು ಎಂದು, ಮಹಾತ್ಮಗಾಂಧಿ, ನೆಹರು ಹಾಗೂ ಅಂಬೇಡ್ಕರ್ ವಿರುದ್ಧವಾಗಿ ಪರೋಕ್ಷ ವಾಗ್ದಾಳಿ ಮಾಡಿ ತಮ್ಮ ಉದ್ಧಟತನ ಮೆರೆದರು.
ಒಟ್ಟಾರೆಯಾಗಿ ಸದಾ ವಿವಾದ ಮಾಡಿಕೊಂಡು ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಮಿಂಚುವ ಹೆಗಡೆ ಈಗ ಮತ್ತೊಮ್ಮೆ ಮಾಧ್ಯಮಗಳಲ್ಲಿ ಮಿಂಚಲು ವಿವಾದ ಮಾಡಿದ್ದಾರೆ ಎಂಬುದು ಸಾಮಾನ್ಯ ಜನರ ಅಭಿಪ್ರಾಯ.
ಸುದ್ದಿದಿನ.ಕಾಂ|ವಾಟ್ಸಾಪ್|9986715401