ದಿನದ ಸುದ್ದಿ

ಚಿರು ನೋಡಲಾಗದೆ, ಸೋಶಿಯಲ್ ಮೀಡಿಯಾ ಗೆ ಎರಡು ದಿನ ಬರಲಿಲ್ಲ : ಆ್ಯಂಕರ್ ಅನುಶ್ರೀ ಕಂಬನಿ

Published

on

ಸುದ್ದಿದಿನ,ಬೆಂಗಳೂರು: ಈ ಎರಡು ದಿನ ಸೋಶಿಯಲ್ ಮೀಡಿಯಾ ಓಪನ್ ಮಾಡಲು ಹಿಂಜರಿದೆ. ನ್ಯೂಸ್ ನೋಡಲು ಅಂಜಿದೆ ಎಂದು ಕನ್ನಡದ ನಟಿ ಮತ್ತು ನಿರೂಪಕಿ ಅನುಶ್ರೀ ಅವರು ಹೇಳಿದ್ದಾರೆ.

ಹೃದಯಾಘಾತದಿಂದ ಭಾನುವಾರ ಸಾವನ್ನಪ್ಪಿದ ನಟ ಚಿರಂಜೀವಿ ಸರ್ಜಾ ಅವರ ಬಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಅನುಶ್ರೀ, ಚಿರು ಸಾವಿನ ನಂತರ ನನಗೆ ಸೋಶಿಯಲ್ ಮೀಡಿಯಾ ನೋಡಲು ಆಗುತ್ತಿರಲಿಲ್ಲ. ನ್ಯೂಸ್ ಕೂಡ ನೋಡಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಚಿರು ಸ್ವಭಾವದ ಬಗ್ಗೆ ಮಾತನಾಡಿದ್ದಾರೆ.

ಚಿರು ವಿಚಾರವಾಗಿ ತಮ್ಮ ಇನ್‍ಸ್ಟಾದಲ್ಲಿ ಬರೆದುಕೊಂಡಿರುವ ಅನುಶ್ರೀ, ಈ ಎರಡು ದಿನ ಸೋಶಿಯಲ್ ಮೀಡಿಯಾ ಓಪನ್ ಮಾಡಲು ಹಿಂಜರಿದೆ. ನ್ಯೂಸ್ ನೋಡಲು ಅಂಜಿದೆ. ಕಾರಣ ಚಿರ ನಿದ್ರೆಗೆ ಜಾರಿದ ಚಿರು ನೋಡಲು ಆಗದೆ. ದೇವರ ಆಟ ಬಲ್ಲವರಾರು. ಹೌದು ಆದರೆ ಈ ಆಟಗಾರ ಬಹಳ ಬೇಗ ಅಗಲಿದ. ಸದಾ ನಗುವ ನಗಿಸುವ, ಕಿಂಚಿತ್ತೂ ಬೇರೆಯವರ ಬಗ್ಗೆ ಅಸೂಯೆ ಪಡದ ಚಿರುವನ್ನು ಆ ಬಾಕ್ಸ್ ನಲ್ಲಿ ನೋಡಿದಾಗ ವಿವರಿಸಲಾಗದ ಸಂಕಟ ಎಂದು ಬರೆದುಕೊಂಡಿದ್ದಾರೆ.

ಜೊತೆಗೆ ಈಗ ಎಲ್ಲೆಡೆ ಹಾಗೆ ಮಾಡಿದ್ದರೆ ಹೀಗೆ ಆಗುತಿತ್ತು ಹೀಗೆ ಮಾಡಬೇಕಿತ್ತು ಅನ್ನೋ ನೂರಾರು ಊಹಾಪೋಹಗಳು. ಆದರೆ ಅವನನ್ನು ಅರಿತವರು ಈ ಭಾವಚಿತ್ರದಲ್ಲಿರೋ ಗೆಳೆಯರೆಲ್ಲರಿಗೂ ಗೊತ್ತು ಆತ ಎಷ್ಟು ಕೂಲ್ ಹುಡುಗ ಅಂತ. ಯಾವ ಕಾರಣಗಳು ಅವನನ್ನು ಮತ್ತೆ ತರಲು ಸಾಧ್ಯವೇ? ಅವನ ಆತ್ಮಕ್ಕೆ ಶಾಂತಿ ಸಿಗಲಿ. ಮೇಘನಾ ಹಾಗೂ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಆ ದೇವರು ಧೈರ್ಯ ಕೊಡಲಿ. ದೇವರೇ ಇನ್ನೆಂದು ಇಂತ ಸ್ನೇಹ ಜೀವಿಯನ್ನ ಇಷ್ಟು ಬೇಗ ಕರೆಯಬೇಡ ಎಂದು ನೋವಿನಲ್ಲಿ ಹೇಳಿದ್ದಾರೆ.

ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಿ

https://www.instagram.com/p/CBMsVaLHTYL/?utm_source=ig_web_copy_link

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version