ಲೈಫ್ ಸ್ಟೈಲ್

ಒಂದು ದಿನಾ ಇರುವೆ ಬಿಟ್ಕೊಳ್ಳಿ..!

Published

on

ಮಾರು 100-180ದಶಲಕ್ಷ ವರ್ಷಗಳ ಪ್ರಾಚೀನ ಕಾಲದಿಂದಲೂ ಒಂದೆಡೆ ಸಿಪಾಯಿ ಜೀವನ ನಡೆಸಿಕೊಂಡು ಬಂದಿರುವ,ಪ್ರಪಂಚದ ಪ್ರಾಣಿ ಸಂಕುಲದೊಂದಿಗೆ ಒಂದಿಲ್ಲೊಂದು ರೀತಿಯಲ್ಲಿ ಸಂಬಂಧ ಹೊಂದಿರುವ angiosperm ಎಂದ ಸಸ್ಯದ ಪ್ರಭಾವದಿಂದಾಗಿ ಕಣಜದಿಂದ ಬೇರ್ಪಟ್ಟು ವಿಶಿಷ್ಠವಾದ ಜೀವನ ನಡೆಸುತ್ತಿರುವ ಸಾಮಾಜ ಸೇವಕನನ್ನು ,ಸಿಹಿ ಭಕ್ಷಕ ದೊಡ್ಡ ಪ್ರಮಾಣ ಸಂಕುಲ ಹೊಂದಿರುವ Hymenoptera’s ಜಾತಿಯ ಕ್ರಿಮಿಗಳ ಬಗ್ಗೆ ಒಂದಷ್ಟು ತಿಳಿಯುವಾ,.

ಇವುಗಳಲ್ಲಿ ಸು12000 ಪ್ರಭೇದಗಳು ಬೆಳೆದಿವೆ ,ಅಂಟಾರ್ಕ್‍ಟಿಕಾ ,ಗ್ರೀನ್ ಲ್ಯಾಂಡ್ ,ಐಸ್ ಲ್ಯಾಂಡ್, ಹವಾಯ್, ಪಾಲಿನ ಏಷ್ಯಾ ಗಳಲ್ಲಿ ಹೊರತು ಪಡಿಸಿ ಉಳಿದ ಭೂಮಿಯ ಎಲ್ಲಾ ವಲಯಗಳಲ್ಲಿ ಕಂಡುಬರುವ ಇದು,ದೇಹದ ಒಳ ಭಾಗವನ್ನೆ ಹೃದಯ ಮಾಡಿಕೊಂಡಿರುವ ವಿಶೇಷ ಜಂತು.

ಇವುಗಳಲ್ಲಿ ಗಂಡಿರುವೆ, ರಾಣಿ ಇರುವೆ , ಸೇವಕ ಇರುವೆ ಸಹಾಯಕ ಇರುವೆಗಳು ಎಂದ ಸ್ಥರ ವಿನ್ಯಾಸ ಮಾಡಲಾಗಿದೆ. ಗಂಡಿರುವೆಗಳು ಮಿಲಿನಕ್ಕೆ ಮಾತ್ರ ಸೀಮಿತ, ಸಂಭೋಗಕಿಂತ ಪೂರ್ವದಲ್ಲಿ ಗಂಡಿರುವೆ ಮತ್ತು ರಾಣಿ ಇರುವೆ ಪುಕ್ಕಗಳನ್ನು ಹೊಂದಿರುತ್ತವೆ. ಸಂಭೋಗ ಪೂರ್ತಿ ಮುಗಿದ ತಕ್ಷಣ ಗಂಡಿರುವೆ ಸತ್ತರೆ ರಾಣಿರಾಜನನ್ನು ಕಳೆದುಕೊಂಡ ದುಃಖದಲ್ಲಿ ಸೇವಕರ ಗುಂಪು ಸೇರಿ ಅಲ್ಲೆ ಸುಮ್ಮನೆ ಇದ್ದು ಬಿಡುತ್ತದೆ.

ಇದನ್ನು ಪ್ರಸವ ಪೂರ್ವ ಎಂದು ಹೇಳಬಹುದು. ಗಂಡಿರುವೆ ಕೆಲವೇ ದಿನಗಳಲ್ಲಿ ಸತ್ತೆರೆ ರಾಣಿ ಇರುವೆ 45-50 ವರ್ಷ ಬದುಕುತ್ತವೆ ಎಂದು ಅಂದಾಜು ಮಾಡಲಾಗಿದೆ.ಸೇವಕ ಇರುವೆಗಳು 5-8ವರ್ಷ ಬದುಕಿದರೂ ಸಂತಾನೋತ್ಪತ್ತಿಯ ಭಾಗ್ಯ ಅವುಗಳಿಗೆ ಇಲ್ಲ. ಆದರೆ ವಿಜ್ಞಾನ ಸವಾಲು ಎನ್ನುವಂತೆ ಒಂದೊಂದು ಬಾರಿ ಸೇವಕ ಇರುವೆಗಳು ಮೊಟ್ಟೆಗಳನ್ನು ಹಾಕಿವೆ, ಇದು ಅಚಾತುರ್ಯ ಮಾತ್ರ. ಅವುಗಳ ನಿರಂತರವಾಗಿ ಮೊಟ್ಟೆಗಳು ಇಡಲಾರವು. ಸೇವಕ ಇರುವೆಗಳಿಂದಲೂ ಗಂಡಿರುವೆ ರಾಣಿ ಇರುವೆ ಹುಟ್ಟಿರುವ ಉದಾಹರಣೆಗಳಿವೆ.

ಸಾಮಾನ್ಯವಾಗಿ ಎರಡು ಮೊಟ್ಟೆಗಳನ್ನು ಹಾಕುವ ರಾಣಿ ಇರುವೆಗಳು ಶರತ್ಕಾಲದಲ್ಲಿ ಮರಿಮಾಡುತ್ತವೆ. ಇರುವೆ ಗಳಿಗೆ ಎರಡು ಹೊಟ್ಟೆಗಳಿದ್ದು ಒಂದು ಹೊಟ್ಟೆಯನ್ನು ದಿನಸಿಯ ಬಳಕೆಯಾಗಿ ಇನ್ನೊಂದು ಹೊಟ್ಟೆ ಗಂಡಿರುವೆ ಮತ್ತು ಮರಿ ಇರುವೆಗಳಿಗೆ ಸಲುವಲು ಬಳಕೆ ಮಾಡುವವು.

Escoscolitic ಎಂಬ ಬಿರುಸಾದ ಹೊರವಲಯದಿಂದ ನಮ್ಮನ್ನು ರಕ್ಷಣೆ ಮಾಡಿಕೊಂಡರೆ , forlic acid’sನಂತ ಉರಿತ ತರುವ ದ್ರವ ಹೊರಸೂಸುವಿಕೆಯಿಂದ ತಮ್ಮನ್ನು ತಾವು ವೈರಿಗಳಿಂದ ಅಥವಾ ಅನಾಹುತ ತಡೆಯಲು ಬಳಸಲಾಗುತ್ತದೆ. ಇವುಗಳಿಗೆ ಶ್ವಾಸಕೋಶದ ಕೊರತೆ ಇದೆಯಾದರೆ ಟುಪಿಲ್ಲರ್(Tover)ಗಳಿಂದ ವಾಸನೆಯನ್ನು ಶಬ್ದ ಮತ್ತು ಮಾರ್ಗವನ್ನು ಗ್ರಹಿಕೆಗೆ ಮಾಡುತ್ತವೆ.

ಲಾವಾ ಮತ್ತು ಪ್ಯೂಪಾ ವ್ಯವಸ್ಥೆಯಿಂದ ಹೊರಬರುವ ವರೆಗೆ ಅವುಗಳು ಸೇವಕ ಇರುವೆಗಳ ಸಹಾಯದಿಂದ ಬೆಳೆಯುತ್ತವೆ.ಒಂದು ಸತ್ಯ ಏನ ಗೊತ್ತಾ ? ಸೇವಕ ಇರುವೆಗಳೆ ಮರಿಗಳಿಗೆ ಆಹಾರ ಒದಗಿಸುವುದರಿಂದ ಬಹುತೇಕ ನಾಯಕ ಇರುವೆಯಾಗುವುದು, ರಾಣಿ ಇರುವೆಯಾಗುವುದು,ಸೇವಕ ಇರುವೆಯಾಗುವುದು ಸೇವಕ ಇರುವೆಯ ಮೇಲೆ ಡಿಪೆಂಡ್ ಆಗಿದೆ. ಯಾವ ರೀತಿಯ ಆಹಾರ ನೀಡುತ್ತವೆಯೋ ಅವುಗಳ ಸೃಷ್ಟಿ ಆಗುತ್ತದೆ.

ಇವುಗಳ ಕಾಲುಗಳು ಥೋರಾಕ್ಷ್ ಎನ್ನುವ ಮುಂಡ ಭಾಗದಿಂದ ಸೃಷ್ಟಿಯಾಗಿರುವುದರಿಂದ ಗಟ್ಟಿಯಾಗಿರುತ್ತವೆ. Pheromone aide ಸಂಪರ್ಕಾಮ್ಲವಾಗಿ ಬಳಕೆ ಮಾಡಿಕೊಳ್ಳುತ್ತವೆ.ಆಸ್ಟ್ರೇಲಿಯಾದ ‘ಜಾಕ್ ಜಂಪರ್’ ಎನ್ನುವ ಇರುವೆ ಜಾತಿ Pheromone aide ಸುರಿಸಿ ಮನುಷ್ಯನ ಸಾಯಿಸುವ ಮೂಲಕ ತನ್ನ ವಿಷದ ಪ್ರಬಲತೆ ದಿಕ್ಕುಸಂವೇದನೆ ಮಾಡಿದೆ.

ಸಾವು ಸಮೀಪಿಸಿದ ಸಂದರ್ಭದಲ್ಲಿ Oleic acid ದ್ರವಿಸುವ ಮೂಲಕ ತಮ್ಮ ಸಾವಿನ ಸುದ್ದಿಯನ್ನು ಮುದಿ ಇರುವೆಗಳು ಸಾರುತ್ತವೆ.ಇದರ ಗ್ರಹಿಕೆ ಸೇವಕ ಇರುವೆಗಳಿಗೆ ಮಾತ್ರ ತಿಳಿಯಲು ಸಾಧ್ಯವಾಗುತ್ತದೆ ಎನ್ನುವುದೇ ವಿಜ್ಞಾನ ಲೋಕಕ್ಕೆ ಸಿಕ್ಕಿರುವ ವಿಚಿತ್ರ ಸತ್ಯ.

ಒಟ್ಟಾರೆ ಇರುವೆ ಬಿಟ್ಕೊಂಡು ಓದಿ ಇರುವೆಗಳ ಜೀವನ ಮತ್ತು ವಿಶಿಷ್ಟ ಲಕ್ಷಣಗಳನ್ನು ತಿಳಿಸುವುದರಲ್ಲಿ ನನಗೆ ಅತೀವ ಸಂತಸವಾಗಿದೆ..

ಪೂರ್ತಿ ಓದಿ ಅಭಿಪ್ರಾಯ ತಿಳಿಸಿ ಆತ್ಮೀಯರೆ..

ಸಹಾಯ:- ವಿಜ್ಞಾನ ಲೋಕದ ವಿಚಿತ್ರ ಸತ್ಯ, ಬಾಲ ವಿಜ್ಞಾನ ಮತ್ತು ಗೂಗಲ್ ಕೊಂಡಿ..

ವಾಯ್.ಜೆ.ಮಹಿಬೂಬ
ರಾಜ್ಯ ಉಪಾಧ್ಯಕ್ಷರು
ಕರುನಾಡ ಹಣತೆ ಕವಿ ಬಳಗ (ರಿ)
ಚಿತ್ರದುರ್ಗ ಜಿಲ್ಲೆ.
ಮೊ : 9535104785

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version