ದಿನದ ಸುದ್ದಿ
ಐತಿಹಾಸಿಕ, ಪಾರಂಪರಿಕ ದೇವಾಲಯಗಳು ಶಾಸನಗಳು, ವೀರಗಲ್ಲು, ಸ್ಮಾರಕಗಳ ಸಂರಕ್ಷಣೆ ; ಸಾರ್ವಜನಿಕರ ಸಹಕಾರ ಅಗತ್ಯ
ಸುದ್ದಿದಿನ,ದಾವಣಗೆರೆ : ಕರ್ನಾಟಕ ಇತಿಹಾಸದ ಶಾಸನಗಳು, ದೇವಾಲಯಗಳು, ಸ್ಮಾರಕಗಳು ಸೇರಿದಂತೆ ಸ್ಥಳಗಳಿದ್ದಲ್ಲಿ ಸಾರ್ವಜನಿಕರು ತಮ್ಮ ತಾಲ್ಲೂಕು, ಊರು, ಗ್ರಾಮಗಳಲ್ಲಿ ವಿನಾಶದ ಸ್ಥಿತಿಯಲ್ಲಿರುವ ದೇವಾಲಯಗಳು, ಶಾಸನಗಳು, ವೀರಗಲ್ಲುಗಳು, ಕೋಟೆಗಳು, ಬತೇರಿಗಳ ಕಂಡುಬಂದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಮಾಹಿತಿ ಒದಗಿಸಿದ್ದಲ್ಲಿ. ಮೈಸೂರು ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪಾರಂಪರಿಕ ಇಲಾಖೆ ಆಯುಕ್ತರು, ಇವರ ಗಮನಕ್ಕೆ ತರಬೇಕು.
ಹೆಚ್ಚಿನ ಮಾಹಿತಿಗಾಗಿ ಪ್ರವಾಸೋದ್ಯಮ ಇಲಾಖೆ ಕಚೇರಿಯ ದೂರವಾಣಿ ಸಂಖ್ಯೆ:08192-230123 ಕರೆ ಮಾಡಲು ಅಥವಾ ಭೇಟಿ ನೀಡಿ ಮಾಹಿತಿ ಪಡೆಯಲು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ಮಧು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243