ಸಿನಿ ಸುದ್ದಿ
ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ನೂರನೆ ಸಿನೆಮಾ ; ಕಿಚ್ಚ ಏನಂದ್ರು ಗೊತ್ತಾ..!?
ಕನ್ನಡ ಸಿನೆಮಾರಂಗದ ಸೂಪರ್ ಹಿಟ್ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ಸಂಗೀತ ನಿರ್ದೇಶನದ ನೂರನೆ ಸಿನೆಮಾ ತಯಾರಿಯಲ್ಲಿದೆ. ತನ್ನ ವಿಭಿನ್ನ ಶೈಲಿಯ ಸಂಗೀತದ ಮೂಲಕ ಯುವಜನತೆ ಮನಗೆದ್ದ ಇವರು ಸೂಪರ್ ಹಿಟ್ ಸಾಂಗ್ ಗಳನ್ನು ನೀಡಿದ್ದಾರೆ.
ಸುದೀಪ್ ಅವರು ತಮ್ಮ ಕೆಂಪೇಗೌಡ ಸಿನೆಮಾಕ್ಕೆ ಅರ್ಜುನ್ ಜನ್ಯಾ ಅವರಿಗೆ ಅವಕಾಶ ಮಾಡಿಕೊಟ್ಟಿದ್ದರು. ಆಕಾರಕ್ಕಾಗಿ ಜನ್ಯಾ ಅವರು ಸುದೀಪ್ ನನ್ನ ಗಾಡ್ ಪಾಧರ್ ಎಂದು ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನೂರು ಸಿನೆಮಾ ಪೂರೈಸಿರುವ ಇವರಿಗೆ ಸುದೀಪ್ ಶುಭಕೋರಿ ಟ್ವೀಟ್ ಮಾಡಿದ್ದಾರೆ.
Congrats @ArjunjanyaAJ on ur 100th film. U truely deserve every bit of the success u have achieved in this wonderful journey of urs. I'm glad to have been a part of ur travel n to have witnessed ur growth both as a musician n as a Human.
Keep entertaining us n keep ur head high.— Kichcha Sudeepa (@KicchaSudeep) December 11, 2018