ದಿನದ ಸುದ್ದಿ
ದೂರದ ಬೆಟ್ಟ ಎಂಬ ಮೆದುಮನುವಾದಿ “ಕ್ರೇಜಿ”ವಾಲ್..!
- ಹ.ರಾ. ಮಹಿಶ
“ನನಗೆ ಓಟು ಹಾಕದ ದೆಹಲಿಜನರಿಗೂ ನಾನೇ ಮುಖ್ಯಮಂತ್ರಿ” ಎಂದು ಬೀಗಿ ಬಡಬಡಾಯಿಸಿದ ಈ ಮನುಷ್ಯ ಆಳುತ್ತಿರುವ ದೆದಲಿ ಎಂಬ ಭಾರತದ ಶಿರವು ದಿನೇದಿನೇ ಕೆಂಪಾಗುತ್ತಿದೆ..! ಆ ಮೇಲಿನ ತಲೆಯ ರಕ್ತ ದಕ್ಷಿಣಕ್ಕೂ ಸೋರುವ ಭಯಾನಕ ಅಪಾಯ ಕಣ್ಣ ಮುಂದಿದೆ ಆ ದೆಹಲಿಯ ಪೋಲಿಸರು ನಿಮ್ಮ ಆಡಳಿತದ ವ್ಯಾಪ್ತಿಗೆ ಒಳಪಡದಿರಬಹುದು ಆದರೆ ಅಲ್ಲಿ ಸಾಯುತ್ತಿರುವ ಜನರೂ ನಿಮ್ಮ ವ್ಯಾಪ್ತಿಗೆ ಬರುವುದಿಲ್ಲವೇ..!?
ಮಿಸ್ಟರ್.ಕೆ.ವಾಲ್ ನಿಮ್ಮಿಂದ ಆ ಸಾಯಿಸುವವರನ್ನು ತಡೆಯಲು ಸಾಧ್ಯವಿಲ್ಲ. ನಿಮಗೆ ಆ ಮನುಸ್ಸೂ ಇಲ್ಲ..! ಅದು ನಿಮ್ಮ ಆಧ್ಯತೆಯೂ ಅಲ್ಲ ಬಿಡಿ..! ನಿಮ್ಮ ಅಜೆಂಡದಲ್ಲಿ ಇದು ಇಲ್ಲವೇಇಲ್ಲ..! ಸಾಯುವವರನ್ನೂ ಸಾವನ್ನೂ ತಡೆಯುವ ಶಕ್ತಿ ನಿಮಗಿಲ್ಲ.! ನಿಮ್ಮದು ನಿಮ್ಮ ಜನಾಂಗದವರದು ಮೊದಲಿನಿಂದಲೂ ಕೇವಲ ಪವರ್ ಪಾಲಿಟಿಕ್ಸ್ ಅಷ್ಟೇ ಎಂಬುದನ್ನು ಮುಗ್ಧಜನರು ಅರಿಯಲಿ..!
ನಿಮ್ಮ ಗೆಲುವಿನ ಗುಟ್ಟು ಕೇವಲ ನಿಮ್ಮ ಜಾತಿಯ ಹಿನ್ನೆಲೆ ಮತ್ತು ನಿಮ್ಮ ಮನುವಾದಿ ಅಜೆಂಡ ಮಾತ್ರ..! ದೂರದ ವಿದ್ಯಾವಂತ ಮುಗ್ಧಜನ ನಿಮ್ಮನ್ನು ನಂಬಿರುವುದು ಮಾತ್ರ ದೊಡ್ಡ ವಿಪರ್ಯಾಸ ದೇಶದ ವಿಚಿತ್ರ ದುರಂತ…!
ಸುದ್ದಿದಿನ.ಕಾಂ|ವಾಟ್ಸಾಪ್|9980346243