ದಿನದ ಸುದ್ದಿ
ಅಯೋಧ್ಯೆಯ ರಾಮಮಂದಿರ ಗರ್ಭಗುಡಿ ನಿರ್ಮಾಣಕ್ಕೆ ಇಂದು ಶಿಲಾನ್ಯಾಸ
ಸುದ್ದಿದಿನ ಡೆಸ್ಕ್ : ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ರಾಮಮಂದಿರದಲ್ಲಿ ಗರ್ಭಗುಡಿ ನಿರ್ಮಾಣದ ಕಾರ್ಯ ಇಂದಿನಿಂದ ಆರಂಭಗೊಳ್ಳಲಿದೆ.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗರ್ಭಗುಡಿ ನಿರ್ಮಾಣದ ಶಿಲಾನ್ಯಾಸ ಸಮಾರಂಭದಲ್ಲಿ ಪಾಲ್ಗೊಂಡು ಮೊದಲ ಶಿಲೆಯನ್ನು ಇರಿಸಲಿದ್ದಾರೆ. ಶಿಲಾನ್ಯಾಸ ಸಮಾರಂಭಕ್ಕೆ ದೇಶಾದ್ಯಂತ ಮಠಾಧೀಶರು, ಸಂತರನ್ನು ಆಹ್ವಾನಿಸಲಾಗಿದ್ದು, ಶಿಲಾನ್ಯಾಸ ಕಾರ್ಯಕ್ರಮದ ನೇರಪ್ರಸಾರ ಮಾಡಲಾಗುತ್ತದೆ.
ಅಯೋಧ್ಯೆಯ ಜನರಿಗೆ ಇಂದು ಸಂಭ್ರಮದ ದಿನವಾಗಿದ್ದು, ಅದ್ಧೂರಿ ಆಚರಣೆಗೆ ಯೋಜನೆ ರೂಪಿಸಿಕೊಂಡಿದ್ದಾರೆ. ಭಗವಾನ್ ಶ್ರೀರಾಮನ ನಗರವಾದ ಅಯೋಧ್ಯೆಯ ಎಲ್ಲ ದೇಗುಲಗಳನ್ನು ಅಲಂಕರಿಸಲಾಗಿದ್ದು, ಇಂದು ಸಂಜೆ ಮಣ್ಣಿನ ಹಣತೆಗಳನ್ನು ಬೆಳಗಿಸಲಾಗುವುದು. ಪ್ರಧಾನಿ ನರೇಂದ್ರಮೋದಿ 2020 ಆಗಸ್ಟ್ 5 ರಂದು ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವ ಭೂಮಿಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
#UttarPradesh Chief Minister Yogi Adityanath will lay the foundation stone of #RamMandir's Garbhagriha in #Ayodhya today, preparations underway#ZEE24Kalak pic.twitter.com/tUm5dhX5rm
— Zee 24 Kalak (@Zee24Kalak) June 1, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243