ದಿನದ ಸುದ್ದಿ

ಚಿತ್ರದುರ್ಗ | ಜಿಲ್ಲಾ ವಾರ್ತಾಧಿಕಾರಿ ಬಿ.ಧನಂಜಯಪ್ಪಗೆ ಬೀಳ್ಕೊಡುಗೆ

Published

on

ಸುದ್ದಿದಿನ,ಚಿತ್ರದುರ್ಗ: ಚಿತ್ರದುರ್ಗ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಿಲ್ಲಾ ವಾರ್ತಾಧಿಕಾರಿ ಬಿ.ಧನಂಜಯಪ್ಪ ಅವರು ದಾವಣಗೆರೆಗೆ ವರ್ಗಾವಣೆ ಹೊಂದಿದ ಹಿನ್ನಲೆಯಲ್ಲಿ ಗುರುವಾರ ವಾರ್ತಾಭವನದಲ್ಲಿ ಸನ್ಮಾನಿಸಿ, ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ವಾರ್ತಾಧಿಕಾರಿ ಬಿ.ಧನಂಜಯಪ್ಪ, ಸರ್ಕಾರಿ ನೌಕರರಿಗೆ ವರ್ಗಾವಣೆ ಸಹಜ ಪ್ರಕ್ರಿಯೆ. 2005ರಲ್ಲಿ ವೃತ್ತಿ ಜೀವನ ಆರಂಭವಾಯಿತು. ಆರಂಭದಲ್ಲಿ ಪ್ರಥಮದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದೇನೆ. ಶಿವಮೊಗ್ಗ, ಬಳ್ಳಾರಿ, ಕೊಪ್ಪಳ, ದಾವಣಗೆರೆಯಲ್ಲಿ ಕಾರ್ಯನಿರ್ವಹಿಸಿದ್ದೇನೆ ಎಂದು ಹೇಳಿದರು.

ಚಿತ್ರದುರ್ಗ ತವರು ಜಿಲ್ಲೆ. ಪತ್ರಕರ್ತರು ಹಾಗೂ ಅಧಿಕಾರಿಗಳಿಂದ ಕಿರುಕುಳ, ತೊಂದರೆ ಇಲ್ಲದೇ ಕೆಲಸ ಮಾಡಿದ್ದೇನೆ. ಇಲಾಖೆಯೊಂದಿಗೆ ಪತ್ರಕರ್ತರ ಉತ್ತಮ ಒಡನಾಟವಿದ್ದು, ಇಲಾಖೆಯ ಸಿಬ್ಬಂದಿಯೊಂದಿಗೆ ಪ್ರೀತಿ, ವಿಶ್ವಾಸದೊಂದಿಗೆ, ಆತ್ಮತೃಪ್ತಿಯಿಂದ ಕೆಲಸ ಮಾಡಿದ್ದೇವೆ. ಜಿಲ್ಲೆಯ ಎಲ್ಲ ಅಧಿಕಾರಿಗಳು ಇಲಾಖೆಯ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜೊತೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಲಾಗಿದೆ ಎಂದರು.
ನೂತನ ಜಿಲ್ಲಾ ವಾರ್ತಾಧಿಕಾರಿಗಳಾದ ಜೆ.ಮಂಜೇಗೌಡ ಮಾತನಾಡಿ, ಇಲಾಖೆ ಬಗ್ಗೆ ಅಭಿಮಾನವಿದೆ. ಮಾಧ್ಯಮ ಹಾಗೂ ವಾರ್ತಾ ಇಲಾಖೆ ಹಾಲು ಜೇನು ಇದ್ದಹಾಗೆ ಇರಬೇಕು ಎಂದು ಸಲಹೆ ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಸಿನಿಚಾಲಕ ಹೆಚ್.ತಿಪ್ಪಯ್ಯ, ಪತ್ರಕರ್ತ ಸುಭಾಷ ಚಂದ್ರ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಚೇರಿಗೆ ಹೊಸದಾಗಿ ಬಂದಿರುವ ನೂತನ ಸಹಾಯಕ ನಿರ್ದೇಶಕರಾದ ಜೆ.ಮಂಜೇಗೌಡ, ಪ್ರಥಮ ದರ್ಜೆ ಸಹಾಯಕ ವೆಂಕಟೇಶ್, ಸ್ವಾಗತಕಾರ ಹಾಗೂ ಗ್ರಂಥಪಾಲಕ ವೇಣುಗೋಪಾಲ್ ಅವರನ್ನು ಆತ್ಮೀಯವಾಗಿ ಸ್ಮಾಗತಿಸಲಾಯಿತು.

ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿಗಳಾದ ಎಸ್. ಚಂದ್ರಶೇಖರ್,  ಎಂ.ಜೆ.ಬೋರೇಶ, ಅಂಜಿನಮೂರ್ತಿ, ಅಪ್ರೆಂಟಿಸ್ ತರಬೇತಾರ್ಥಿಗಳಾದ ಆನಂದಪ್ಪ, ಲಕ್ಷ್ಮೀಪತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಿಬ್ಬಂದಿಗಳಾದ ಉಷಾ, ಯಲ್ಲಪ್ಪ, ಮಧು,  ಪತ್ರಕರ್ತರಾದ ವೀರೇಶ್, ನಾಗೇಶ್, ವಿ.ಚಂದ್ರಪ್ಪ, ಪುಟ್ಟಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version