ರಾಜಕೀಯ
ಚುನಾವಣಾ ಕಣಕ್ಕೆ ‘ತೃತೀಯ ಲಿಂಗಿ’ ಕಣಕ್ಕಿಳಿಸಿದ ಬಿಎಸ್ಪಿ..!
ಸುದ್ದಿದಿನ, ಒಡಿಶಾ: ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಬಹುಜನ ಸಮಾಜವಾದಿ ಪಕ್ಷ (BSP) ಟ್ರಾನ್ಸ್‌ಜೆಂಡರ್ ಅಭ್ಯರ್ಥಿಯನ್ನ ಕಣಕ್ಕಿಳಿಸಲಿದೆ. 27 ವಯಸ್ಸಿನ ಟ್ರಾನ್ಸ್‌ಜೆಂಡರ್ ಕಾಜಲ್ ನಾಯಕ್, ಸಾಮಾಜಿಕ ಕಾರ್ಯಕರ್ತೆಯಾಗಿದ್ದು, ಜಾಜ್ಪುರ ಜಿಲ್ಲೆ ಕೊರೆಯಿ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಜಲ್, ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಸಂತೋಷ ತಂದಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಬಿಎಸ್ಪಿ ಪಕ್ಷ ನನಗೆ ಟಿಕೆಟ್ ನೀಡಿದೆ.ಈ ಮಧ್ಯೆ ನಾನು ಹಲವು ರಾಜಕೀಯ ಪಕ್ಷಗಳನ್ನು ಸಂಪರ್ಕಿಸಿದ್ದೆ, ಆದ್ರೆ ಯಾರು ನನಗೆ ಅವಕಾಶ ನೀಡಲಿಲ್ಲ. ಬಿಎಸ್ಪಿ ನನಗೆ ಟಿಕೆಟ್ ನೀಡಲು ನಿರ್ಧರಿಸಿದೆ. ನಾನು ಪಕ್ಷಕ್ಕೆ ಕೃತಜ್ಞಳಾಗಿದ್ದೇನೆ ಎಂದು ಕಾಜಲ್ ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ.
ಕಾಜಲ್ ನಾಯಕ್ ಜೈಪುರ್‌ನ ಟ್ರಾನ್ಸ್‌ಜೆಂಡರ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದರು, ಸಾಮಾಜಿಕ ಕಾರ್ಯಕರ್ತೆಯೂ ಆಗಿರುವ ಅವರು, ತೃತೀಯ ಲಿಂಗಿಗಳ ಹಕ್ಕು ಹಾಗೂ ಸಾಮಾಜಿಕ ವಿಷಯಗಳ ಕುರಿತಂತೆ ಅವರು ಕೆಲಸ ನಿರ್ವಹಿಸುತ್ತಿದ್ದಾರೆ. ತೃತೀಯಲಿಂಗಿಗಳ ಸಮುದಾಯಕ್ಕೆ ಸಂಬಂಧಪಟ್ಟಂತೆ ನಾನಾ ಕಡೆಗಳಲ್ಲಿ ಹಲವು ಸಮಸ್ಯೆಗಳಿವೆ. ಕ್ಷೇತ್ರದ ಜನರ ಸಮಸ್ಯೆ ಜತೆಗೆ ಟ್ರಾನ್ಸ್‌ಜೆಂಡರ್ ಸಮಸ್ಯೆಗಳ ಬಗ್ಗೆ ಗಮನ ಕೊಡುತ್ತೇನೆ ಅಂತಾ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಎಸ್ಪಿ ನಾಯಕ, ಕೃಶನ್ ಚಂದ್ರ ಸಾಗರಿಯಾ, ನಮ್ಮ ಪಕ್ಷ ಎಲ್ಲಾ ಸಮುದಾಯದಗಳ ಸಾಮಾಜಿಕ ಸಬಲೀಕರಣದ ಉದ್ದೇಶ ಹೊಂದಿದೆ. ಅದಕ್ಕಾಗಿ ತೃತೀಯಲಿಂಗಿ ಕಾಜಲ್ ನಾಯಕ್‌ಗೆ ಟಿಕೆಟ್ ನೀಡಲು ನಿರ್ಧರಿಸಿದ್ದೇವೆ. ಯಾರು ತೃತೀಯಲಿಂಗಿಗಳ ಬಗ್ಗೆ ಮಾತನಾಡುವುದಿಲ್ಲ. ನಾನು ಅವರ ಅಭಿವೃದ್ಧಿ ಬಯಸಿದರೆ, ಅವರನ್ನು ಮುಖ್ಯವಾಹಿನಿಗೆ ತರಬೇಕಾಗಿದೆ ಎಂದು ಸಾಗರಿಯಾ ಅಭಿಪ್ರಾಯಪಟ್ಟರು.
ಒಡಿಶಾ ಒಟ್ಟು 147 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದೆ. ಏಪ್ರಿಲ್ 11ರಂದು ನಾಲ್ಕು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಇದರ ಜತೆಗೆ ಲೋಕಸಭೆ ಚುನವಾಣೆಯು ನಡೆಯಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401