ದಿನದ ಸುದ್ದಿ
ಬ್ಯಾಂಕುಗಳಿಗೆ ಸಾಲು-ಸಾಲು ರಜೆ ಇಲ್ಲ : ಕೆ.ರಾಘವೇಂದ್ರ ನಾಯರಿ
ಸುದ್ದಿದಿನ, ದಾವಣಗೆರೆ:26-08-2020 ರಿಂದ 02-10-2020 ರ ವರೆಗೆ ಬ್ಯಾಂಕುಗಳಿಗೆ ರಜೆ ಇರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಬಿತ್ತರವಾಗುತ್ತಿದೆ. ಆದರೆ ಇದು ತಪ್ಪು ಮಾಹಿತಿ.
ದಿನಾಂಕ 26-09-2020 ರಿಂದ 02-10-2020 ರ ಅವಧಿಯಲ್ಲಿ ದಿನಾಂಕ 28-09-2020 ರಿಂದ 01-10-2020 ರ ಬ್ಯಾಂಕುಗಳ ವ್ಯವಹಾರಗಳು ಯಥಾ ಪ್ರಕಾರ ನಡೆಯುತ್ತದೆ. 26 ರಂದು ನಾಲ್ಕನೇ ಶನಿವಾರ 27 ರಂದು ಭಾನುವಾರ ಮತ್ತು ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಪ್ರಯುಕ್ತ ಮಾತ್ರ ರಜೆ ಇರುತ್ತದೆ ಎಂದು ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಕೆ.ರಾಘವೇಂದ್ರ ನಾಯರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243