ಲೈಫ್ ಸ್ಟೈಲ್
‘ಬಾರ್ಲಿ ಬಿಸಿಬೇಳೆ ಬಾತ್’ ಮಾಡೋದು ಹೇಗೆ ಗೊತ್ತಾ..?
ನಮ್ಮ ದೇಶದಲ್ಲಿ ಬಾರ್ಲಿಯನ್ನು ಆಹಾರವಾಗಿ ಉಪಯೋಗಿಸುವ ಮಂದಿ ತುಂಬಾ ಕಡಿಮೆ. ವೈದ್ಯರು ಹೇಳಿದರೆ ಮಾತ್ರ ಕೆಲವು ಮಂದಿ ಇದನ್ನುಆಹಾರವಾಗಿಬಳಸುತ್ತಾರೆ.ಈಜಿಪ್ಟ್,ಉತ್ತರ ಆಫ್ರಿಕಾ ದೇಶದಲ್ಲಿ ಮೊದಲು ಬಾರ್ಲಿಯನ್ನು ಉಪಯೋಗಿಸಲು ಪ್ರಾರಂಭ ಮಾಡಿದರು. ಅಂದಹಾಗೆ ಈ ಬಾರ್ಲಿಯಿಂದ ರುಚಿ ರುಚಿಯಾದ ಬಿಸಿ ಬೇಳೆಬಾತ್ ಕೂಡ ಮಾಡಬಹುದು.
ಬೇಕಾಗುವ ಸಾಮಾಗ್ರಿಗಳು
- ಬಾರ್ಲಿ 100ಗ್ರಾಂ
- ತೊಗರಿ ಬೇಳೆ ಅರ್ಧ ಕಪ್
- ತರಕಾರಿಗಳು ಎಲ್ಲವನ್ನು ಒಂದಿಂಚು ಹೆಚ್ಚಿಕೊಳ್ಳಿ.
- ಕ್ಯಾರೆಟ್ 2
- ಹುರುಳಿ ಕಾಳಿ 7-8
- ಬಟಾಣಿ ಸ್ವಲ್ಪ
- ಆಲೂಗಡ್ಡೆ 1
- ಕ್ಯಾಪ್ಸಿಕಂ 1/2
- ಕರಿಬೇವು ಸ್ವಲ್ಪ
ಹುರಿದು ಕೊಳ್ಳಲು
- ಕಡಲೆಬೇಳೆ ಒಂದು ಟೀ ಚಮಚ
- ಉದ್ದಿನ ಬೇಳೆ ಒಂದು ಟೀ ಚಮಚ
- ಜೀರಿಗೆ ಅರ್ಧ ಟೀ ಚಮಚ
- ಸಾಸಿವೆ ಅರ್ಧ ಟೀ ಚಮಚ
- ಧನಿಯಾ ಎರಡು ಟೀ ಚಮಚ
- ಗಸಗಸೆ ಒಂದು ಟೀ ಚಮಚ
- ಮೆಂತ್ಯ ಕಾಲು ಟೀ ಚಮಚ.
- ಒಣಮೆಣಸಿನ ಕಾಯಿ ನಾಲ್ಕು/ಖಾರ ಎಷ್ಟು
- ಬೇಕು ಅಷ್ಟು
- ಕರಿಬೇವು ಸ್ವಲ್ಪ
- ಲವಂಗ ಎರಡು
- ಕಾಳುಮೆಣಸು ಹತ್ತು
- ಚಕ್ಕೆ ಅರ್ಧ ಇಂಚು
- ತೆಂಗಿನ ತುರಿ ಅರ್ಧ ಕಪ್
- ಹುರಿಯಲು ಎಣ್ಣೆ ಒಂದು ಟೀ ಚಮಚ
- ಉಪ್ಪು ರುಚಿಗೆ ತಕ್ಕಷ್ಟು
- ಹುಣಸೆ ಹಣ್ಣು ಸ್ವಲ್ಪ
- ಬೆಲ್ಲ ಚಿಕ್ಕ ತುಂಡು
ಒಗ್ಗರಣೆಗೆ
- ತುಪ್ಪ 3-4ಚಮಚ
- ಸಾಸಿವೆ ಅರ್ಧ ಟೀ ಚಮಚ
- ಕರಿಬೇವು ಸ್ವಲ್ಪ
- ಗೋಡಂಬಿ ಸ್ವಲ್ಪ
- ಇಂಗು ಚಿಟಿಕೆ
ಮಾಡುವ ವಿಧಾನ
- ಮೊದಲು ಕುಕ್ಕರಿನ ಪಾತ್ರೆಯಲ್ಲಿ ಬೇಳೆ ತರಕಾರಿಯನ್ನು ಒಂದು ಪಾತ್ರೆಯಲ್ಲಿ ಮತ್ತು ಬಾರ್ಲಿಯನ್ನು ಒಂದು ಪಾತ್ರೆಯಲ್ಲಿ ಹಾಕಿ 2-3ಕಪ್ ನೀರು(ಅರ್ಧ ಲೀಟರ್ ನೀರು)ಹಾಕಿ, 5-6ವಿಷಲ್ ಬರುವರೆಗೆ ಬೇಯಿಸಿ.
- ನಂತರ ಮಸಾಲೆ ಪದಾರ್ಥಗಳನ್ನು ಹುರಿದು ಅರ್ಧ ಕಪ್ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ ಕೊಳ್ಳಿ.
- ಅದಕ್ಕೆ ಸಾಸಿವೆ, ಕರಿಬೇವು, ಇಂಗು ಮತ್ತು ಗೋಡಂಬಿಯನ್ನು ಹಾಕಿ ಒಗ್ಗರಣೆ ಮಾಡಿ ಕೊಳ್ಳಿ.
ಇದಕ್ಕೆ ಬೇಯಿಸಿದ ತರಕಾರಿ ಮತ್ತು ಬೇಳೆಯನ್ನು ಹಾಕಿ. - ನಂತರ ರುಬ್ಬಿಕೊಂಡ ಮಸಾಲೆ ಪದಾರ್ಥಗಳನ್ನು ಹಾಕಿ ಎಷ್ಟು ತಳ್ಳಗೆ ಬೇಕೋ ಅಷ್ಟು ನೀರನ್ನು ಹಾಕಿ ಚೆನ್ನಾಗಿ ಕುದಿಸಿ.
- ಕುದಿಯುವಾಗ ಬೆಲ್ಲವನ್ನು ಸೇರಿಸಿ.ಚೆನ್ನಾಗಿ ಕುದಿ ಬಂದ ನಂತರ ಒಲೆಯಿಂದ ಇಳಿಸಿ.ರುಚಿಯಾದ ಆರೋಗ್ಯಕರವಾದ ಬಾರ್ಲಿ ಬಿಸಿಬೇಳೆ ಬಾತ್ ತಯಾರಿಸಿ ಸವಿಯಿರಿ.
ಸುದ್ದಿದಿನ.ಕಾಂ|ವಾಟ್ಸಾಪ್|9986715401