ಲೈಫ್ ಸ್ಟೈಲ್

ಹಲವು ಔಷದೀಯ ಗುಣವುಳ್ಳ ‘ಬಾರ್ಲಿ’ ಬಗ್ಗೆ ನಿಮಗೆಷ್ಟು ಗೊತ್ತು..?

Published

on

ನಮ್ಮ ದೇಶದಲ್ಲಿ ಬಾರ್ಲಿಯನ್ನು ಆಹಾರವಾಗಿ ಉಪಯೋಗಿಸುವ ಮಂದಿ ತುಂಬಾ ಕಡಿಮೆ. ವೈದ್ಯರು ಹೇಳಿದರೆ ಮಾತ್ರ ಕೆಲವು ಮಂದಿ ಇದನ್ನು ಆಹಾರವಾಗಿ ಬಳಸುತ್ತಾರೆ. ಈಜಿಪ್ಟ್,ಉತ್ತರ ಆಫ್ರಿಕಾ ದೇಶದಲ್ಲಿ ಮೊದಲು ಬಾರ್ಲಿಯನ್ನು ಉಪಯೋಗಿಸಲು ಪ್ರಾರಂಭ ಮಾಡಿದರು.

ಬಾರ್ಲಿಯ ಉಪಯೋಗ

  1. ಬಾರ್ಲಿಯಲ್ಲಿ ವಿಟಮಿನ್ ‘ಎ’ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
  2. ಬಾರ್ಲಿಯಲ್ಲಿ ಪೊಟ್ಯಾಶಿಯಂ ಹೇರಳವಾಗಿದೆ.ಇದು ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತದೆ.
  3. ಇದರಲ್ಲಿ ನಾರಿನಂಶ ಜಾಸ್ತಿಯಿರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.
  4. ಬಾರ್ಲಿಯಲ್ಲಿರುವ ನಾರಿನಂಶದಿಂದ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಧಾನವಾಗಿ ಬಿಡುಗಡೆ ಮಾಡಿ, ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ.
  5. ಮಧುಮೇಹ ಇದ್ದವರಿಗೆ ಬಾರ್ಲಿ ಉಪಯೋಗಿಸುವುದರಿಂದ ಲಾಭ ಪಡೆಯಬಹುದು.
  6. ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.ಬಾರ್ಲಿಯು ರಕ್ತದೊತ್ತಡದೊಂದಿಗೆ ಕೊಲೆಸ್ಟ್ರಾಲ್ನ್ನು ತಡೆಹಿಡಿಯುವ ಗುಣವನ್ನು ಹೊಂದಿರುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುವಲ್ಲಿ ಸಹಕಾರಿಯಾಗಿದೆ.
  7. ಬಾರ್ಲಿಯಲ್ಲಿ ಕಬ್ಬಿಣದ ಅಂಶ ಹೇರಳವಾಗಿರುತ್ತದೆ.ಇದರಿಂದ ರಕ್ತಹೀನತೆಯನ್ನು ನಿಯಂತ್ರಣ ಮಾಡಲು ಸಾಧ್ಯ.
  8. ಇದರಲ್ಲಿರುವ ಕ್ಯಾಲ್ಸಿಯಂ ಫಾಸ್ಪರಸ್ ಮೂಳೆಗಳ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.
  9. ಇದರಲ್ಲಿರುವ ಮೆಗ್ನಿಷಿಯಂ ಜಿಂಕ್ ಎಂಬ ಖನಿಜಗಳು ಚರ್ಮಕ್ಕೆ ಮತ್ತು ಕೂದಲಿಗೆ ಹೊಳಪನ್ನು ನೀಡುತ್ತದೆ.
  10. ಬಾರ್ಲಿಯಲ್ಲಿ ವಿಟಮಿನ್ ‘ಬಿ’ಕಾಂಪ್ಲೆಕ್ಸ್ ಜೊತೆಗೆ ವಿಟಮಿನ್ ‘ಸಿ’ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version