ನೆಲದನಿ

ಬಸವಣ್ಣನವರ ಪ್ರಜಾಪ್ರಭುತ್ವ

Published

on

  • ಶರಣ ಸಂಗಮೇಶ ಎನ್ ಜವಾದಿ, ಕೊಡಂಬಲ, ಬೀದರ ಜಿಲ್ಲೆ

ಚನ ಸಾಹಿತ್ಯ ವಿಶ್ವ ಶ್ರೇಷ್ಠ ಸಾಹಿತ್ಯ,ಪ್ರಜಾಪ್ರಭುತ್ವ ಮೌಲ್ಯಗಳನ್ನು ಸಾರುವ ವಿಶ್ವ ಸಂವಿಧಾನವಾಗಿದ್ದು, ವಚನಗಳಲ್ಲಿರುವ ಅಂಶಗಳು ಸಂವಿಧಾನದ ಚೌಕಟ್ಟಿನಲ್ಲಿ ಕಾಣುತ್ತೇವೆ. ಪ್ರಪಂಚಕ್ಕೆ
ಸಮಾನತೆ ಸಂದೇಶ ಸಾರುವ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೊಟ್ಟ ಮೊದಲು ಬಾರಿ ಜಾಗತಿಕ ಪ್ರಪಂಚಕ್ಕೆ ಕೊಟ್ಟವರು, ಅದನ್ನು ಜಾರಿಗೆ ತಂದವರು ಅಣ್ಣ ಬಸವಣ್ಣನವರು.

ಅನುಭವ ಮಂಟಪದ ಮೂಲಕ ಇಡೀ ಮನುಕುಲದ ಉದ್ಧಾರಕ್ಕಾಗಿ,ಸರ್ವರ ಕಲ್ಯಾಣಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ತಂದ ಕೀರ್ತಿ ಮತ್ತು ಶ್ರೇಯಸ್ಸು ಬಸವಣ್ಣನವರ ಆದಿಯಾಗಿ ಇಡೀ ಶರಣ ಸಂಕುಲಕ್ಕೆ ಸಲ್ಲುತ್ತದೆ ಜೊತೆಗೆ ಸಕಲ ಜೀವಾತ್ಮರೆಲ್ಲರಿಗೂ ಲೇಸು ಬಯಸಿದ ಜಗತ್ತಿನ ಮೊಟ್ಟ ಮೊದಲ ಸಮತವಾದಿ ಬಸವಣ್ಣನವರು ಎಂಬುದು ಯಾರು ಅಲ್ಲಗಳೆಯುವಂತಿಲ್ಲ. ಹಾಗಾಗಿ
ಮೌಲ್ಯಾಧಾರಿತ ಸಾಮರಸ್ಯ ಸಮೃದ್ಧ
ನಾಡು ಕಟ್ಟುವ ಕನಸು ಕಂಡು ಬಸವಣ್ಣನವರು,ಅದೇ ನಿಟ್ಟಿನಲ್ಲಿ ಪ್ರಜಾಪ್ರಭುತ್ವ ಸಿದ್ಧಾಂತವನ್ನು ಜಾಗತಿಕ ಮಟ್ಟದಲ್ಲಿ ಪ್ರತಿಪಾದಿಸಿದ್ದಾರೆ.ಜೊತೆಗೆ ಶಾಂತಿ,ಸಹಬಾಳ್ವೆ,ಕಾಯಕ,ದಯೇ,ಕರುಣೆ, ದಾಸೋಹ, ಅರಿವು, ಸಮಾನತೆಯ ವೈಚಾರಿಕ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.

ವಿಶ್ವವೇ ಒಂದು ಕುಟುಂಬವಿದಂತೆ ಹಾಗೂ ರಕ್ತ ಸಂಬಂಧಿಗಳೆಲ್ಲರೂ ಒಂದು, ಸ್ವಾರ್ಥ ಬಿಟ್ಟು, ನಾವೆಲ್ಲರೂ ಒಂದಾಗಿ ನಿಸ್ವಾರ್ಥದಿಂದ ಬದಕುವ ಯೋಚನೆಯ ಮನಸ್ಥಿತಿ ನಮ್ಮಲ್ಲಿ ಮೂಡಲಿ ಹಾಗೂ ಸೌಹಾರ್ದವಾಗಿ ಬಾಳುವ ಮೂಲಕ ಪ್ರೀತಿ – ಸ್ನೇಹಯವನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಮಾಡೋಣ – ಸಾರೋಣ ಎನ್ನುವ ಆಶಾವಾದ ಬಯಕೆ ಪ್ರತಿಯೊಬ್ಬರ ಶರಣರದಾಗಿತ್ತು, ಅದರಂತೆ ಅವರು ಬಾಳುವ ಮೂಲಕ ನಮ್ಮೆಲ್ಲರಿಗೂ ಮಾದರಿಯಾಗಿದಾರೆ.ಹಾಗಾಗಿ ಶರಣರು ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿರುವುದು ನಮಗೆ ಅವರ ವಚನಗಳ ಮೂಲಕ ತಿಳಿದುಬರುತ್ತದೆ.

ವಚನ ಸಾಹಿತ್ಯ ಮತ್ತು ಭಾರತ ಸಂವಿಧಾನ

ವಚನ ಮತ್ತು ಸಂವಿಧಾನ ಎರಡೂ ಒಂದೇ, ಅವು ಬೇರೆ, ಬೇರೆ ಅಲ್ಲ. ವಚನಗಳಲ್ಲಿರುವ ಅಂಶಗಳು ಸಂವಿಧಾನದಲ್ಲಿವೆ. ದೇಶದ ಪ್ರಗತಿಗೆ ವಚನ ಸಾಹಿತ್ಯ ಎಷ್ಟೋ ಪ್ರಮುಖ್ಯವೋ ಅಷ್ಟೋ ಮುಖ್ಯ ನಮ್ಮ ಭಾರತ ದೇಶದ ಸಂವಿಧಾನದ ಎನ್ನುವುದು ನಾವೆಲ್ಲರೂ ತಿಳಿದುಕೊಳ್ಳುವುದು ಅತಿ ಅವಶ್ಯ. ಹಾಗಾಗಿ ಈ ಎರಡು ತತ್ವಗಳಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಲ್ಲದೆ, ಪೂರಕ ಹಾಗೂ ಮಾರ್ಗದರ್ಶನ ಎನ್ನುವುದು ನಾವ್ಯಾರು ಮರೆಯಬಾರದು.ಆದ್ದರಿಂದ
ದೇಶದ ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ಸಮಾನತೆ, ಸ್ವಾತಂತ್ರ್ಯ ನೀಡಿದೆ.

ಆದರೆ ಕೆಲ ಸಂಪ್ರದಾಯವಾದಿಗಳು ಸಮಾನತೆಯ ತತ್ವವಾದ ಸಂವಿಧಾನವನ್ನು ಸುಡುವ, ಅಗೌರವಿಸುವ ಬಗೆ ಮಾತನಾಡುತ್ತಿದ್ದಾರೆ.ಇವರೆಲ್ಲ ಅಹಂಕಾರದ ಅಜ್ಞಾನಿಗಳಾಗಿದ್ದಾರೆ ಎಂದು ಹೇಳಬಹುದು. ಪ್ರತಿಯೊಬ್ಬ ಪ್ರಜೆಗೂ ಸ್ವಚಂದವಾಗಿ ಬದುಕಲು ಅವಕಾಶ ನೀಡಿದೆಯನ್ನುವುದು ಮರೆತು, ಮನಸ್ಸಿಗೆ ತೋಚಿದಂತೆ ಕೆಲ ಅವಿವೇಕಿಗಳು ಬಾಲಿಶ್ಯ ಹೇಳಿಕೆಗಳನ್ನು ಕೊಟ್ಟು, ಅವರ ಬೆನ್ನು ಅವರೇ ತಟ್ಟಿಕೊಳ್ಳುವ ಸನ್ನಿವೇಶಗಳು ನಾವು ಅಲ್ಲಲ್ಲಿ ಕಂಡಾಗ ಮನಸ್ಸಿಗೆ ಅತ್ಯಂತ ನೋವಾಗುತ್ತದೆ. (ನಮ್ಮ ಸಂವಿಧಾನದ
ಮಹತ್ವವನ್ನು ತಿಳಿದುಕೊಳ್ಳುವ ಕೆಲಸ ಮಾಡದೇ, ಬರೀ ಟೀಕೆ ಮಾಡುವುದು ಎಷ್ಟೋ ಸರಿ ಇದೆ ಹೇಳೀ) ಮೊದಲು ಸಂವಿಧಾನದ ತತ್ವಗಳನ್ನು ತಿಳಿದುಕೊಳ್ಳುವ ಕೆಲಸ ಮಾಡಲಿ,ಮಾಡುವುದು ಸೂಕ್ತ.

ಆದಕಾರಣ ಹಗುರವಾಗಿ ಮಾತನಾಡುವುದನ್ನು ಬಿಡುವುದು ಅವರ ಶ್ರೇಯಸ್ಸಿಗಾಗಿ ಉತ್ತಮ ಎನ್ನುವುದು ಮನಗಂಡು,ದೇಶದ ಒಳ್ಳಿತಿಗಾಗಿ ದುಡಿಯುವ ಮನೋಬಲವನ್ನು ಪ್ರದರ್ಶಿಸುವ ಕೆಲಸ ಮಾಡುವುದು ಒಳ್ಳೆಯದು ಜೊತೆಗೆ ಸಹಕಾರ ನೀಡುವುದು ಅತ್ಯುತ್ತಮ ಮಾರ್ಗ ಸ್ನೇಹಿತರೆ.ಹಾಗಾಗಿ ಇಂದಿನ ಸಮಾಜದ ಎಲ್ಲಾ ನಾಗರಿಕರು ಪ್ರಜಾಪ್ರಭುತ್ವದ ಆದರ್ಶ ವಿಚಾರಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ, ತಿಳಿದುಕೊಂಡಾಗಲೇ ಈ ದೇಶದಲ್ಲಿ ಬದುಕಲು ನಾವು ಯೋಗ್ಯರಾಗುತ್ತೇವೆ.ಶಾಂತಿ, ನೆಮ್ಮದಿ ಹಾಗೂ ಸ್ನೇಹಮಯ ಜೀವನವನ್ನು ಸಾಗಿಸಲು ಸಾಧ್ಯವಾಗಬಹುದಾಗಿದೆ.

ಪ್ರಜಾಪ್ರಭುತ್ವದ ಪಿತಾಮಹ

ಬಸವಣ್ಣನವರು ಒಬ್ಬ ಪ್ರಜಾವಾದಿ, ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳ ಪ್ರತಿಪಾದಕ. ಪ್ರಜಾಪ್ರಭುತ್ವದ ಪಿತಾಮಹ. ಮ್ಯಾಗ್ನಕಾರ್ಟ್‌ ಒಪ್ಪಂದಕ್ಕಿಂತ ಅರ್ಧ ಶತಮಾನದ ಹಿಂದೆಯೇ ಕಲ್ಯಾಣದಲ್ಲಿ ಅನುಭವ ಮಂಟಪವೆಂಬ ವಿಶ್ವಮಾನ್ಯ ಪ್ರಜಾಪ್ರಭುತ್ವದ ಸಂಸತ್ತನ್ನು ನಿರ್ಮಿಸಿದರು,ನಿರ್ಮಿಸಿದ ಕಾರಣದಿಂದಲೇ ಇಂದು ವಿಶ್ವವು ಪ್ರಜಾಪ್ರಭುತ್ವ ವ್ಯವಸ್ಥೆ ಬಗೆ ಮಾತನಾಡುತ್ತದೆ ಎಂದರೆ ಅಂದು ಬಸವಣ್ಣನವರ ವೈಚಾರಿಕ ನಿಲುವು ಹೇಗಿತ್ತು ಎನ್ನುವುದು ನಾವೆಲ್ಲರೂ ಒಮ್ಮೆ ಎದೆ ಮೇಲೆ ಕೈಯಿಟ್ಟು ಯೋಚನೆ ಮಾಡುವ ದೊಡ್ಡ ವಿಚಾರ. ಆದ್ದರಿಂದ ಈಗಲಾದರೂ ಎಚ್ಚತ್ತು ಬಸವಣ್ಣನವರು ನೀಡಿರುವ ಪ್ರಜಾಪ್ರಭುತ್ವ ವಚನ ಸಾಹಿತ್ಯವನ್ನು ಅರಿತು ನಾವೆಲ್ಲರೂ ಬಾಳಬೇಕಾಗಿದೆಯಲ್ಲವೇ.

ಬಸವಣ್ಣನವರ ಪ್ರಜಾಪ್ರಭುತ್ವ ಕಲ್ಪನೆಯ
ವಚನಗಳು ನಮ್ಮ ಬದುಕಿಗೆ ದಾರಿದೀಪವಾಗಿವೆ ಎನ್ನುವುದು ಸತ್ಯ. ಕಳಬೇಡ, ಕೊಲಬೇಡ ಎಂಬ ಸಪ್ತಶೀಲದ ವಚನವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಅಪರಾಧಗಳು ಈ ಜಗತ್ತಿನಲ್ಲಿ ನಡೆಯಲು ಸಾಧ್ಯವಿಲ್ಲ. ಈ ವಚನದ ಆಶಯವನ್ನೇ ನಮ್ಮ ಸಂವಿಧಾನ ತಿಳಿಸುತ್ತದೆ. ಸಮಾನತೆ ತತ್ವ ಸಾರಿದ ಬಸವಣ್ಣನವರು ಜಾತಿಯತೆ ಹೋಗಲಾಡಿಸಬೇಕೆಂದು ಕರೆ ನೀಡಿ ಅದರಂತೆ
ಹೋರಾಟ ಮಾಡಿದರು. ಆದರೆ ಇಂದಿಗೂ ಅದು ಹೋಗಿಲ್ಲ ಹೆಚ್ಚಾಗುತ್ತಿದೆ.

ವಚನಗಳ ಅಧ್ಯಯನ, ಅವುಗಳ ಪಾಲನೆಯಿಂದ ಜಾತ್ಯಾತೀತ ರಾಷ್ಟ್ರ, ಸಮಾಜ ನಿರ್ಮಾಣ ಸಾಧ್ಯ ಎನ್ನುವುದಂತು ನಾವು ಮರೆಯಬಾರದು ಸಹೋದರರೆ,ವಚನ ಸಾಹಿತ್ಯವು ಸಂವಿಧಾನದಂತೆ ಸರ್ವರಿಗೂ ಸಮಬಾಳು, ಸಮಪಾಲು ತತ್ವ ನೀಡುತ್ತದೆ. ಸರ್ವ ಸಮಾನತೆಯ ಸಮಾಜ ನಿರ್ಮಾಣವೇ ವಚನ ಸಾಹಿತ್ಯದ ಪ್ರಮುಖ ತತ್ವವಾಗಿದೆ. ಇದರಿಂದಾಗಿಯೇ 900 ವರ್ಷಗಳು ಕಳೆದರೂ ವಚನ ಸಾಹಿತ್ಯ ಜೀವಂತವಾಗಿದೆಯಲ್ಲವೇ.

ಹಾಗಾಗಿ ಬಸವಣ್ಣನ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಅಂದರೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಎಲ್ಲಾ ಜನಸಾಮಾನ್ಯರಿಗೆ ಮುಕ್ತವಾಗಿ ಸೀಗಬೇಕೆಂಬ ನಿಲುವೆ ಅವರದಾಗಿತ್ತು. ಬಸವಣ್ಣನವರ ಕಾಯಕ ನಿಷ್ಠೆಗೆ ಮಾನವೀಯತೆಗೆ ಬುನಾದಿ ಆಗಬೇಕೆಂದು ನಂಬಿ ಅದರಂತೆ ನಡೆದವರು ಹಾಗೆ ಧಾರ್ಮಿಕ, ಸಮಾಜಿಕ(ಪ್ರಜಾಪ್ರಭುತ್ವದ ಸಂಸತ್ತು ) ಕಾರ್ಯಗಳ ಸೇವೆಗಳು ಅಂದಿನ ಅನುಭವ ಮಂಟಪದ ಅಡಿಯಲ್ಲಿ ಸಾಗಿದವು, ಶರಣರೆಲ್ಲರೂ ಸೇರಿ ಆದರ್ಶ ಸಮಾನತೆಯ ಸಮಾಜವನ್ನು ಕಟ್ಟಿದರು,ವಚನ ಸಾಹಿತ್ಯವನ್ನು ರಚಿಸಿದರು. ಹಾಗೂ ಬಸವಣ್ಣ ನವರು ಅವರ ಆತ್ಮ ಬಲದ – ಅನುಭವದ ವೈಜ್ಞಾನಿಕ ಮನೋಧರ್ಮದ ದೃಷ್ಟಿಯಿಂದ ಲಿಂಗಾಯತ ಧರ್ಮವನ್ನು ಸ್ಥಾಪಿಸಿ – ಬೆಳೆಸಿ, ವಚನಗಳನ್ನು ನಮಗೆ ಕೊಟ್ಟು ಹೋಗಿದ್ದಾರೆ ಎನ್ನುವ ಅರಿವು ನಮ್ಮಲ್ಲಿ ಉಂಟುಮಾಡಲಿ ಹಾಗೆ ಸಮಾನತೆಯ ಮಂತ್ರ ಭೋದನೆ ಮಾಡಿದ ವಿಚಾರ ಸಹ ನಮ್ಮ ಗಮನದಲ್ಲಿಟ್ಟುಕೊಳ್ಳುವುದು ಉತ್ತಮ.

ಆದರೆ ಈಗಿನ ಸಮಾನತೆ ಕೇವಲ ನೆಪಮಾತ್ರಕ್ಕೆ ಅಂದರೆ ಲೋಕತಂತ್ರಕ್ಕೆ ಮಾತ್ರ ಸೀಮಿತವಾಗಿದೆ ಎನ್ನುವುದಂತು ಸತ್ಯ,ಹಾಗಾಗಿ ಲೋಕ ತಂತ್ರಕ್ಕೆ
ಸ್ವತಂತ್ರವಾಗಿ, ನಿಷ್ಪಕ್ಷವಾಗಿ ಕೆಲಸ ಮಾಡಲು ಸಮಾನತೆಯ ವಚನ ಸಾಹಿತ್ಯದ ಪ್ರಜಾಪ್ರಭುತ್ವದಿಂದ ಮಾತ್ರ ಸಾಧ್ಯ, ಇದರಿಂದ ಈ ದೇಶಕ್ಕೆ ಒಳ್ಳೆಯ ಭವಿಷ್ಯ ತಂದುಕೊಡುತ್ತದೆ ಎಂದು ತಿಳಿದುಕೊಂಡು ನಡೆದರೆ ಅದೊಂದು ಉತ್ತಮ ಹೆಜ್ಜೆ ಎನ್ನಬಹುದು. ಹಾಗೆ
ಬಸವಣ್ಣನವರು ಕಲ್ಯಾಣದಲ್ಲಿ ಮಾಡಿದ ಎಲ್ಲಾ ಪ್ರಜಾಪ್ರಭುತ್ವ ಪ್ರಯೋಗಗಳಲ್ಲಿ ಬಹಳಷ್ಟು ಪ್ರಯೋಗಗಳು ಜಗತ್ತಿನಲ್ಲಿ ನಡೆದ ಮೊದಲ ಪ್ರಯೋಗಗಳೇ ಆಗಿವೆ. ಬಸವಣ್ಣನವರು ಎಲ್ಲದಕ್ಕೂ ಸಮಾಜ ಮುಖಿ ಸೇವೆಗಳ ಕಾರ್ಯಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದರು.ರಾಜ್ಯಸಿಂಹಾಸನವನ್ನು ಅವರು ಕೆಣಕಲಿಲ್ಲ.

ಆದರೆ ಶೂನ್ಯಸಿಂಹಾಸನ ಸೃಷ್ಟಿಸಿ ಪ್ರಜಾಪ್ರಭುತ್ವದ ಕನಸು ಬಿತ್ತಿದರು. ಅವರ ಅನುಭವ ಮಂಟಪದ ಅಮರಗಣಂಗಳಲ್ಲಿ ಎಲ್ಲಾ ಜಾತಿ ಜನಾಂಗದವರಿದ್ದರು. ಮಹಿಳೆಯರಿದ್ದರು. ಅವರೆಲ್ಲ ಆ ಅನುಭವ ಮಂಟಪ ಎಂಬ ಸಮಜೋ ಧಾರ್ಮಿಕ ಸಂಸತ್ತಿನ ಸದಸ್ಯರಾಗಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯ ಪಡೆದವರಾಗಿದ್ದರು. ಹೀಗೆ ಸ್ವತಂತ್ರ ಸರ್ವಸಮಾನತೆಯ ವಿಚಾರಧಾರೆಯನ್ನು ಜಗತ್ತಿನಲ್ಲಿ ಹರಿಸಿದವರಲ್ಲಿ ಬಸವಣ್ಣನವರು ಪ್ರಥಮರು, ಅವರು ಪ್ರಾರಂಭಿಸಿದ ಚಳವಳಿಯಿಂದಾಗಿ ಮಹಿಳೆಯರು ಮತ್ತು ಅಸ್ಪೃಶ್ಯರು ಕೂಡ ಶರಣರಾದರು.

ಅಕ್ಷರ ಕಲಿತರು, ಕಲಿಯುವ ಮೂಲಕ ವಯಸ್ಕರ ಶಿಕ್ಷಣ ಕಲ್ಯಾಣದ ನಾಡಿನಲ್ಲಿ ಆರಂಭವಾಯಿತು – ಆರಂಭವಾಗಿದ್ದು ಐತಿಹಾಸಿಕ ಯಾಕೆಂದರೆ 21 ನೇ ಶತಮಾನದ ಈಗಿನ ಎಲ್ಲಾ ಸರಕಾರಗಳು ಕೋಟಿಗಟ್ಟಲೆ ಹಣ ಸುರಿದರೂ ಸಹ ಇಂದಿನ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯವಾಗುತ್ತಿಲ್ಲ ಅಂದ ಮೇಲೆ 12ನೇ ಶತಮಾನದಲ್ಲಿ ಅವಿಧ್ಯಾವಂತರನ್ನು ವಿಧ್ಯಾವಂತರನ್ನಾಗಿ ಮಾಡಿ – ಶಿಕ್ಷಣ ಕಲಿಸಿ, ವಚನಗಳನ್ನು ರಚನೆ ಮಾಡುವಂತೆ ಪ್ರೋತ್ಸಾಹ ಮಾಡಿದ ಕೆಲಸ ಸಣ್ಣದಲ್ಲಾ,ಅದಕ್ಕಾಗಿ ಇದರ ಕೀರ್ತಿ ಮತ್ತು ಸಾಧನೆ ಬಸವಣ್ಣನವರದು ಹಾಗಾಗಿ ಅವರ ಬಗೆ ಎಷ್ಟೋ ಹಾಡಿ ಹೊಗಳಿದರು ಕಡಿಮೆಯಾಗುತ್ತದೆ.

ಕೊನೆಯ ಮಾತು

ಬಸವಣ್ಣನವರ ವಚನಗಳಲ್ಲಿ ವಿಶ್ವಸಂಸ್ಥೆ ಘೋಷಿಸಿದ ಎಲ್ಲಾ ಮಾನವ ಹಕ್ಕುಗಳ ವಿಚಾರಗಳೆಲ್ಲವೋ ಸೇರಿವೆ.ಸ್ಥಾವರ ಲಿಂಗಕ್ಕೆ ಪರ್ಯಾಯವಾಗಿ ಇಷ್ಟಲಿಂಗ, ಗುಡಿಗೆ ಪರ್ಯಾಯವಾಗಿ ಅನುಭವ ಮಂಟಪ, ದಾನಕ್ಕೆ ಸಮನಾಗಿ ದಾಸೋಹ,ಕರ್ಮಸಿದ್ಧಾಂತಕ್ಕೆ ಪರ್ಯಾಯವಾಗಿ ಕಾಯಕ ಸಿದ್ಧಾಂತ, ಹೀಗೆ ಎಲ್ಲ ರೀತಿಯಿಂದಲೂ ಬಸವಣ್ಣನವರು ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ
ಹಿಡಿದುಕೊಳ್ಳುವ ಮೂಲಕ ಬದುಕಿನುದ್ದಕ್ಕೂ ಚ್ಯುತಿ ಬರದಂತೆ ಕಾಪಾಡಿಕೊಂಡು ಬಂದಿದ್ದಾರೆ.ಇದನ್ನು ನಾವೆಲ್ಲರೂ ಉಳಿಸಿಕೊಂಡು – ಬೆಳೆಸಿಕೊಂಡು ಹೋಗುವ ಹೋಣೆಗಾರಿಕೆ ಪ್ರತಿಯೊಬ್ಬ ಬಸವಾಭಿಮಾನಿಗಳ ಮೇಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version