ದಿನದ ಸುದ್ದಿ

ನಾವು ಮಾಡಿದ ಒಳ್ಳೆಯ ಕರ್ಮಗಳು ಸತ್ತಮೇಲೆ ಉಳಿಯಬೇಕು : ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ

Published

on

ಸುದ್ದಿದಿನ,ಮಾಯಕೊಂಡ : ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರೆದರೂ ಸಾವನ್ನು ತಪ್ಪಿಸಲು ಸಾಧ್ಯವಾಗಿಲ್ಲ ಎನ್ನುವುದು ವಿಧಿಬರಹವಾಗಿದೆ, ಒಳಿತೊಂದೇ ನಮ್ಮ ಕಾಯುವುದು ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿಗಳು ಹೇಳಿದರು.

ಮಾಯಕೊಂಡ ವಿಧಾನಸಭಾಕ್ಷೇತ್ರದ ತೋಪೇನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಲಿಂಗೈಕ್ಯ ಬಿ.ಎಚ್.ಸರೋಜ ದೇವಿಯವರ ಶಿವಗಣಾರಾಧನೆ ಹಾಗೂ ಧರ್ಮ ಸಭೆ ಸಾನ್ನಿದ್ಯ ವಹಿಸಿ ಮಾತನಾಡಿದರು. ನಾವು ಪ್ರೀತಿಸಬೇಕು, ಗೌರವಿಸ ಬೇಕು ಹಾಗೂ ಎಲ್ಲರನ್ನು ಅಪ್ಪಿಕೊಳ್ಳಬೇಕು ಎಂಬುದು ಜೀವನದ ಯಶಸ್ಸಿನ ಮಾರ್ಗವಾಗಿದೆ. ಬದುಕಿನಲ್ಲಿ ನಾವು ಮಾಡಿದ ಒಳ್ಳೆಯ ಕರ್ಮಗಳು ಸತ್ತಮೇಲೆ ಉಳಿಯಬೇಕು, ಆಗ ಮಾತ್ರ ನಮ್ಮ ಹುಟ್ಟಿಗೆ ಸಾರ್ಥಕತೆ ಬರುತ್ತದೆ ಎಂದು ಹೇಳಿದರು.

ಹಾರನಹಳ್ಳಿ ಮಠದ ಶ್ರೀ ಶಿವಯೋಗಿ ಸ್ವಾಮೀಜಿಗಳು ಮಾತನಾಡಿ, ಧಾರ್ಮಿಕ ಶಿವಾನುಷ್ಟನದ ಲವಾಗಿ ನಮ್ಮ ಹಿರಿಯರು ಮುಂದಿನ ಪಿಳಿಗೆಗೆ ಉಳಿಸುವಂತ ಸಂಸ್ಕಾರ ಮತ್ತು ಚಿಂತನೆ ಮಾಡಿದ್ದರಿಂದ ಇಂದು ನಾವುಗಳು ನೆಮ್ಮದಿ ಜೀವನ ಸಾಗಿಸುತ್ತಿದ್ದೇವೆ.ಹಿರಿಯರ ಸಾಧನೆಯ ಶ್ರಮ ನಮಗೆ ಅನುಕರಣಿಯವಾಗಿದೆ.

ಧರ್ಮವನ್ನು ಅನುಸರಿಸಿದ ಹಿರಿಯರು ಎಂತಹ ಕಷ್ಟಗಳನ್ನು ಎದುರಿಸಿ, ಅನುಭವಿಸಿ ಕುಟುಂಬವನ್ನು ಗೌರವದಿಂದ ಸಮಾಜದಲ್ಲಿ ಗುರುತಿಸುವಂತೆ ಮಾಡಿದ್ದಾರೆ, ಆದರೆ ಇಂದು ವಾಸ್ತವದಲ್ಲಿ ಮನುಷ್ಯ ಎನೇ ಮಾಡಿದರು ತನ್ನ ಸ್ವಾರ್ಥಕ್ಕೆ ಮಾಡುತ್ತಿರುವುದು ದುರಂತಕ್ಕೆ ಎಡೆಮಾಡಿ ಕೊಡುತ್ತಿದೆ ಎಂದು ಹೇಳಿದರು. ಧರ್ಮಸಭೆಯಲ್ಲಿ ಬಿ.ಎಸ್.ರಂಗನಾಥ್, ಬಿ.ಎಸ್.ಕೃಷ್ಣಮೂರ್ತಿ, ಪ್ರಮೋದ್, ಸಿದ್ದಲಿಂಗಯ್ಯ, ಪ್ರದೀಪ್, ಪ್ರಶಾಂತ್, ಸಂದೀಪ್, ಅರುಣ್ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version