ದಿನದ ಸುದ್ದಿ

ಬೆಟ್ಟಿಂಗ್ ಜಾಹಿರಾತುಗಳ ಮೇಲೆ ಕಠಿಣಕ್ರಮ

Published

on

ಸುದ್ದಿದಿನ,ದೆಹಲಿ : ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಮಕ್ಕಳು ಮತ್ತು ಯುವಕರನ್ನು ಪ್ರಚೋದಿಸುತ್ತಿರುವ ಬೆಟ್ಟಿಂಗ್ ಜಾಹಿರಾತುಗಳ ಮೇಲೆ ಕಠಿಣಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ ಎಂದು ವಾರ್ತಾ ಶಾಖೆ ವರದಿ ಮಾಡಿದೆ.

ರಾಜ್ಯಗಳ ಪ್ರಮುಖ ಜಾಲತಾಣಗಳಲ್ಲಿ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬೆಟ್ಟಿಂಗ್ ಪ್ರಚೋದಿಸುತ್ತಿರುವ ಜಾಹಿರಾತುಗಳು ಬಿತ್ತರವಾಗುತ್ತಿವೆ. ಇವುಗಳ ಮೇಲೆ ನಿಗಾ ಇಡುವಂತೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವಚಂದ್ರ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version