ದಿನದ ಸುದ್ದಿ
“ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಗತ್ ಸಿಂಗ್ ಅವರ ಸಾಮಾಜಿಕ ಕಳಕಳಿ ಮತ್ತು ಬದ್ಧತೆ ” : ಪ್ರಬಂಧ ಮತ್ತು ಭಾಷಣ ಸ್ಪರ್ಧೆ
ಸುದ್ದಿದಿನ ಬೆಂಗಳೂರು : ಕೆಪಿಸಿಸಿ ಕಾನೂನು ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ವಿಭಾಗದಿಂದ ಮಾರ್ಚ್ 23 ಭಗತ್ ಸಿಂಗ್ ಅವರ ಹುತಾತ್ಮ ದಿನದ ನೆನಪಿಗಾಗಿ ಕಾಲೇಜು ವಿದ್ಯಾರ್ಥಿಗಳಿಗೆ “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಗತ್ ಸಿಂಗ್ ಅವರ ಸಾಮಾಜಿಕ ಕಳಕಳಿ ಮತ್ತು ಬದ್ಧತೆ ” ಕುರಿತು ಪ್ರಬಂಧ ಮತ್ತು ಭಾಷಣ ಸ್ಪರ್ಧೆಯನ್ನು ಏರ್ಪಡಿಸಿದ್ದು ಈ ಮೂಲಕ ಯುವ ಮಿತ್ರರಿಗೆ ಸ್ವಾತಂತ್ರ್ಯ ಹೋರಾಟ ಮತ್ತು ಹೋರಾಟಗಾರರ ಪಾತ್ರ ಮತ್ತು ಪ್ರಾಮುಖ್ಯತೆಯ ಅರಿವು ಮೂಡಿಸುವ ಸದುದ್ದೇಶದೊಂದಿಗೆ ಏಪ್ರಿಲ್ 14 ರಂದು ಅಂದರೆ ಅಂಬೇಡ್ಕರ್ ಜಯಂತಿ ದಿನ ಕಾರ್ಯಕ್ರಮವನ್ನು ನಡೆಸಲಿದೆ.
ಎ ಎಸ್ ಪೊನ್ನಣ್ಣ ಅಧ್ಯಕ್ಷರು , ಎಸ್ ಎ ಅಹಮದ್ ಉಪಾಧ್ಯಕ್ಷರು ಅವರ ಸಹಕಾರ ಮತ್ತು
ಸೂರ್ಯ ಮುಕುಂದರಾಜ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಬಿಂದು ಗೌಡ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾನವ ಹಕ್ಕು , ಅಡ್ವೊಕೇಟ್ ಆನಂದ್ ಅಧ್ಯಕ್ಷರು ಬೆಂಗಳೂರು ದಕ್ಷಿಣ ಜಿಲ್ಲೆ ಅವರ ಸಹಯೋಗದೊಂದಿಗೆ ನೇಷನಲ್ ಸ್ಟೂಡೆಂಟ್ ಹಾಗೂ ಯೂನಿಯನ್ ಆಫ್ ಇಂಡಿಯಾ (NSUI) ಮುಂದಾಳತ್ವ ವಹಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243