ದಿನದ ಸುದ್ದಿ

ಭಾರತ್ ಬಂದ್..! ಏನಿರಲ್ಲ ? ಏನಿರುತ್ತೆ?

Published

on

ಸುದ್ದಿದಿನ ಡೆಸ್ಕ್ : ನಾಳೆ (ಸೆ.10) ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬೆಳಗ್ಗೆ 6ರಿಂದ ಸಂಜೆ 6 ರವರೆಗೆ ಭಾರತ್ ಬಂದ್ ಗೆ ಕಾಂಗ್ರೆಸ್ ಸೇರಿದಂತೆ ಮಿತ್ರ ಪಕ್ಷಗಳು ಕರೆಕೊಟ್ಟಿವೆ.

ಬಂದ್ ಗೆ ಹಲವು ಸಂಘಟನೆಗಳು ಕೈಜೊಡಿಸಿದ್ದು, ಪ್ರತಿಭಟನೆ ಜೋರಾಗಿಯೇ ನಡೆಯಲಿದೆ. ನಾಳೆ ಬೆಳಗ್ಗೆಯಿಂದಲೇ ಮೋದಿ ಸರ್ಕಾರದ ವಿರುದ್ಧ ರಣಕಹಳೆ ಸಾರಲು ಈ ಗಾಗಲೇ ಸಕಲ ಸಿದ್ದತೆಗಳು ನಡೆದಿವೆ.

ಈ ಬಂದ್ ಹಿನ್ನೆಲೆ ಸೋಮವಾರ ನಗರಗಳಲ್ಲಿ ಏನಿರುತ್ತೆ ? ಏನಿರಲ್ಲ ? ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಏನಿರುತ್ತೆ ?

  • ಔಷಧಿ
  • ಆಸ್ಪತ್ರೆಗಳು
  • ಸಾರ್ವಜನಿಕ ತುರ್ತು ಸೇವೆಗಳು
  • ಹೋಟೆಲ್ ಗಳು

ಏನಿರಲ್ಲ ?

  • ಕೆ.ಎಸ್.ಆರ್.ಟಿ.ಸಿ – ಬಿ.ಎಂ.ಟಿ.ಸಿ
  • ಓಲಾ-ಊಬರ್ ಟ್ಯಾಕ್ಸಿ
  • ಆಟೋ
  • ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
  • ಮಾಲ್ ಗಳ ಮಾರುಕಟ್ಟೆ ಸೇವೆಯಲ್ಲಿ ವ್ಯತ್ಯಯವಾಗಬಹುದು.

ಹಾಗೇ ಕೆಲವು ಖಾಸಗಿ ಕಂಪನಿಗಳು ಬಂದ್ ಗೆ ಬೆಂಬಲ ಸೂಷಿಸಿದ್ದು, ಬ್ಯಾಂಕ್, ಸರ್ಕಾರಿ, ಹಾಗೂ ಖಾಸಗಿ ಶಾಲೆಗಳಿಗೆ ಆಯಾ ಜಿಲ್ಲೆಗಳ ಡಿ.ಸಿಯವರು ರಜೆ ಘೋಷಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version