ಲೋಕಾರೂಢಿ
ಮೊದಲದಿನ ಸೈಲೆಂಟ್ ಆಗಿದ್ದ ಮುಷ್ಕರ, ಎರಡನೆ ದಿನ ವೈಲೆಂಟ್!
ಚುಮು-ಚುಮು ಚಳಿಗೆ ಮೊದಲ ದಿನ ಕಾರ್ಮಿಕರ ಮುಷ್ಕರದ ಅಷ್ಟೋಂದು ಬಿಸಿ ತಟ್ಟಲಿಲ್ಲ!!ಆದರೆ ಎರಡೆ ದಿನದ ಬಿಸಿ ಜೋರಿತ್ತು?!!
ದೇಶದಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ಕಾರ್ಮಿಕರ ಮುಷ್ಕರಕ್ಕೆ ಕೆಲವೆಡೆ ಸಂಪುರ್ಣ ಬೆಂಬಲ ತೊರಿಸಿದರೆ, ದೇಶದ ಹಲವೆಡೆ ಮಿಶ್ರ ಮತ್ತು ನಿರಸ ಪ್ರತಿಕ್ರಿಯೆಯನ್ನು ಮೊನ್ನೆ ನಿನ್ನಯಿಂದ ನೋಡಿದ್ದೇವೆ. ಎರಡು ದಿನದ ಮುಷ್ಕರದಿಂದ ಮೊನ್ನೆ ಆಯಾ ಜಿಲ್ಲೆಯ ಜಿಲ್ಲಾದಿಕಾರಿಗಳು ಒಂದು ದಿನದ ಮಟ್ಟಿಗೆ ಮಾತ್ರ ಶಾಲಾ ಕಾಲೆಜುಗಳಿಗೆ ರಜೆಯನ್ನು ಘೋಷಣೆ ಮಾಡಿದ್ದರು.
ಮೊನ್ನೆಯ ದಿನ ನಡೆದ ಮುಷ್ಕರದಿಂದ ಯಾವುದೆರೀತಿಯಲ್ಲಿ ಪೂರ್ಣ ಪ್ರಮಾಣದ ಬೆಂಬಲ ಸಿಕಿಲ್ಲ ಅದು ಯಾವ ರೀತಿಯಲ್ಲಿ ಅಂದರೆ ರಾಜ್ಯದ ಆಸ್ಪತ್ರೆಗಳು ಹಾಗೂ ಕ್ಲಿನಿಕ್ಗಲು ಎಂದಿನಂತೆ ತಮ್ಮ ಕಾರ್ಯವನ್ನು ನಿರ್ವಹಿದವು, ವಾಯುವ್ಯ ಹಾಗೂ ಈಶಾನ್ಯ ರಾಜ್ಯ ರಸ್ತೆ ಸಾರಿಗೆ ನಿಗಮ ಎರಡು ಸೇರಿ ರಾಜ್ಯದಲ್ಲಿ 5,760 ಬಸ್‍ಗಳಲ್ಲಿ ಕೆವಲ 370 ಬಸ್‍ಗಳು ಮಾತ್ರ ರಸ್ತೆಗಳಿದಿದ್ದವು. ಇದರಿಂದ ಜನರಸಂಚಾರಕ್ಕೆ ಅಸ್ಥವ್ಯಸ್ಥವಾಯಿತು. ಸಂಗೋಳ್ಳಿಯಲ್ಲಿ ಅಂಗಡಿ ಮುಚ್ಚಲು ಬಲವಂತಮಾಡಿದ ಸಿಪಿಎಂ ಕಾರ್ಯಾಕರ್ತರಿಗೆ ಅಂಗಡಿ ಮಾಲಿಕರು ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡರು. ಇದರಿಂದಾಗಿ ಅಸಮಧಾನಗೊಂಡ ಕಾರ್ಯಕರ್ತರು ನಿನ್ನೆ ಹಲವೆಡೆ ಬಿಎಮ್‍ಟಿಸಿ ಹಾಗೂ ಕೆಎಸ್‍ಆರ್‍ಟಿಸಿ ಬಸ್‍ಗಳ ಮೇಲೆ ಕಲ್ಲುಎಸೆತ ನಡೆಯಿತು. ಒಟ್ಟಾರೆಯಾಗಿ ರಾಜ್ಯದಲ್ಲಿ 42ಬಸ್‍ಗಳ ಮೇಲೆ ಕಲ್ಲು ತುರಾಟ ನಡೆದಿದೆ. ಎರಡನೆದಿನದಂದು ಶಾಲಾ-ಕಾಲೇಜು ವಿದ್ಯಾರ್ಥಿಗಳಿಲ್ಲಿ ಗೊಂದಲಗಳು ಕಾಡಿದವು.
ಮೊನ್ನೆ ನಡೆದ ಮುಷ್ಕರದಿಂದ ಹುಬ್ಬಳ್ಳಿಯಲ್ಲಿ ಕೆಎಸ್‍ಆರ್‍ಟಿಸಿ ಕಜಾನೆಗೆ 60ಲಕ್ಷ ರೂಪಾಯಿ ನಷ್ಟವಾಗಿದೆಯೆಂದು ಹುಬ್ಬಳ್ಳಿಯ ಡೀಪೊದ ಮೇಲ್ವಿಚಾರಕರು ಮಾಧ್ಯದವರೋಂದಿ ಮಾಹಿತಿಯನ್ನು ಹಂಚಿಕೊಂಡರು. ಈ ಪ್ರತಿಭಟನೆಯಲ್ಲಿ ಮಹಿಳಾ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಮಹಿಳಾ ಕಾರ್ಯಕರ್ತೆಯೊಬ್ಬರು ಅಸ್ವಸ್ಥರಾಗಿ ಮೃತಪಟ್ಟರು. ನಿನ್ನೆಯು ಸಹ ಮತ್ತೊಬ್ಬ ಮಹಿಳಾ ಕಾರ್ಯಕರ್ತೆ ಅಸ್ವಸ್ಥಗೊಂಡಿದ್ದಾರೆ. ಇಷ್ಟೆಲ್ಲ ಮುಷ್ಕರ ಗೊಂದಲ ಯ್ಯಾತಕ್ಕಾಗಿ ಬೇಕು?. ಎಲ್ಲಾ ನೌಕರರು, ಮಾಲಿಕರು, ಮತ್ತು ಕೇಂದ್ರ ಹಾಗೂ ರಾಜ್ಯದ ಆಡಳಿತ ಸರ್ಕಾರಗಳು ಕುಳಿತು ಮಾತನಾಡಿ ಸಮಸ್ಯಗಲನ್ನು ಬಗೆಸರಿಸಿಕೊಂಡರೆ ಒಳೆಯದು. ಕೆಲಸ ಮಾಡುವ ಕಾರ್ಮಿಕರೆ ಹಿಂದೆ ಸರಿದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಖಜಾನೆ ಬರಿದಾಗಬಹುದು. ಇದರಿಂದಾಗಿ ಅಭಿವೃದ್ದಿ ಹೊಂದಿದ ದೇಶ ಭಾರತ ಎನ್ನುವ ಪಟ್ಟಪಡೆಯ ಬೇಕು ಎನ್ನು ಕನಸು ಕನಸಾಗಿಯೆ ಉಳಿಯುದರಲ್ಲಿ ಎರಡು ಮಾತ್ತಿಲ್ಲ.
-ಕಾಂಚನಾ. ಬಸವರಾಜ. ಪೂಜಾರಿ
ಪತ್ರಿಕೋದ್ಯಮ ಮತ್ತು ಸಮುಹ ಸಂವಹನ ವಿಭಾಗ
ಪ್ರಥಮ ವರ್ಷದ ವಿದ್ಯಾರ್ಥಿನಿ
ಅಕ್ಕ ಮಹಾದೇವಿ ವಿಶ್ವವಿದ್ಯಾನಿಲಯ ತೋರವಿ
ವಿಜಯಪುರ