ಸಿನಿ ಸುದ್ದಿ

ಸಲ್ಲು ಭಾಯ್ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ‘ಭಾರತ್’..!

Published

on

ಕಳೆದ ವಾರ ಈದ್ ಗೆ ಬಿಡುಗಡೆ ಗೊಂದ ಸಲ್ಲು ಭಾಯ್ ರ ಬಹುನಿರೀಕ್ಷಿತ ಚಿತ್ರ “ಭಾರತ್” , ಬಿಡುಗಡೆಯಾದ ಮೂರೇ ದಿನಕ್ಕೆ ನೂರರ ಕ್ಲಬ್ ಸೇರಿದೆ. ಮೂರನೇ ದಿನವೇ 103 ಕೋಟಿ ರೂಗಳನ್ನುಗಳಿಸಿದ್ದು ಭರ್ಜರಿ ಓಪನಿಂಗ್ ಪಡೆದಿದೆ‌. ಸಲ್ಮಾನ್ ಖಾನ್, ಕತ್ರಿನಾ ಕೈಫ್ ರ ಪ್ರೇಮ ಕಹಾನಿ ದಿಲ್ ಖುಷ್ ಮಾಡಿದರೆ,  ಸುನೀಲ್ ಗ್ರೋವರ್ ರ ಅಧ್ಬುತ ಕಾಮಿಡಿ ಮತ್ತು ಸಲ್ಲು-ಸುನೀಲ್ ರ ಜುಗಲ್ ಬಂದಿ ಸೂಪರ್ ಕೂಲ್ ಎನಿಸುತ್ತದೆ.

ಅಲಿ  ಅಬ್ಬಾಸ್ ಜಾಫರ್  ನಿರ್ದೇಶಿಸಿರುವ, ದೊಡ್ಡ ತಾರಾಗಣ ಒಳಗೊಂಡಿರುವ ಈ ಚಿತ್ರದಲ್ಲಿ ಜಾಕಿ ಶ್ರಾಫ್, ವಿದ್ಯಾ ಬಾಲನ್, ನೂರ್ ಫತೇಹಲಿ ಖಾನ್, ದಿಶಾ ಪಟಾಣಿ, ಸೇರಿದಂತೆ ಹಲವಾರು ತಾರೆಯರು ಮುಖ್ಯ ಭೂಮಿಕೆಯಲ್ಲಿ ಇದ್ದಾರೆ.

ತಂದೆ ಗೆ ತಕ್ಕ ಜವಾಬ್ದಾರಿ ಯುತ ಮಗನಾಗಿ, ಸಲ್ಮಾನ್ ಖಾನ್ ರ ಅಮೋಘ ಅಭಿನಯ ಮನಸ್ಸಿಗೆ ಮುದ ನೀಡುತ್ತದೆ.70 ರ ವೃದ್ಧನಾಗಿ ತನ್ನ ಜೀವನಗಾಥೆಯನ್ನ ಮೊಮ್ಮಕ್ಕಳೊಂದಿಗೆ ಹಂಚಿಕೊಳ್ಳುವುದರಿಂದ ಶುರುವಾಗುವ ಚಿತ್ರ, ಮುಂದೆ  ಭಾರತ-ಪಾಕ್ ಗಡಿಯ ವಿಭಜನೆ ಸಮಯದ ಜನರ ನೋವು, ಕುಟುಂಬಗಳ ಮಾರಣ ಹೋಮ, ಇವೆಲ್ಲವೂ ಮನಸ್ಸಿಗೆ ನೇರವಾಗಿ ನಾಟುವಂತೆ ಚಿತ್ರಿಸಲಾಗಿದೆ.

ಹಿಂದ್ ರಾಷನ್ ಶಾಪ್ ಗಾಡಿ ಏನೆಲ್ಲಾ ಕಷ್ಟಗಳನ್ನು ಅನುಭವಿಸಬೇಕಾಗುವ ನಾಯಕ ಭಾರತ್,  ಕೂದಲೆಳೆಯ ಮೇಲೆ ಸಾಗುವ ಕಥಾಹಂದರ ಕ್ಕೆ ಸಲ್ಮಾನ್ ಖಾನ್ ರ ಅಭಿನಯವೇ ಕಥಾನಾಯಕ. 2010ರಲ್ಲಿ ಶುರುವಾಗುವ ಕಥೆ,1947,  1960 ಮತ್ತು 90ರ ದಶಕಕ್ಕೆ ಕೊಂಡೊಯ್ಯುತ್ತದೆ.

ಆಕ್ಷನ್ ಸೆಂಟಿಮೆಂಟ್ ರೊಮ್ಯಾನ್ಸ್,  ಭರಿತ ಭಾರತ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು,ಸಲ್ಲು ಫಾನ್ಸ್ ಗೆ ರಸದೌತಣ ಉಣಬಡಿಸಿದೆ ಭಾರತ್. ನೂರ್ ಮತ್ತು ದಿಶಾ ರ ಎಂಟ್ರಿ ಪಡ್ಡೆ ಗಳ ಹಾರ್ಟಿಗೆ ಕಿಚ್ಚು ಹೆಚ್ಚಿಸಿದರೆ, ಕತ್ರಿನಾ ತಮ್ಮ ಎಂದಿನ ಅಭಿನಯದಿಂದ”ಮೇಡಮ್ ಸಾರ್” ಆಗಿ ನೆನಪಿನಲ್ಲಿ ಉಳಿಯುತ್ತಾರೆ. ದಿಶಾ ಪಟಾಣಿ ಯು “ಸ್ಲೋ ಮೋಷನ್” ಹಾಡು ಈ ವರ್ಷದ ಸೂಪರ್ ಹಿಟ್ ಹಾಡುಗಳ ಪಟ್ಟಿ ಸೇರಿದೆ.

ವಿಶಾಲ್-ಶೇಖರ್ ರೈ ಸಂಗೀತ ನಿರ್ದೇಶನ ದಿಲ್ಲಿ ಮೂಡಿಬಂದಿರುವ ಭಾರತ್ ಚಿತ್ರ ದ ಹಾಡುಗಳು ಈಗಾಗಲೇ ಬಾಲಿವುಡ್ ಹಾಡುಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಸಲ್ಮಾನ್ ಖಾನ್ ರ ಯಶಸ್ಸಿನ ಕಿರೀಟಕ್ಕೆ ಭಾರತ್ ಮತ್ತೊಂದು ಗರಿ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version