ಲೈಫ್ ಸ್ಟೈಲ್

ಹಕ್ಕಿಜ್ವರ..! ಏನಿದು ಆತಂಕ, ಮನುಷ್ಯನಿಗೆ ಬರಬಹುದೇ‌..! ಲೇಖನ ಓದಿ

Published

on

 

  • ಡಾ|ಕಮಲೇಶ್ ಕುಮಾರ್ ಕೆ ಎಸ್
    ಪಶುವೈದ್ಯಾಧಿಕಾರಿ

ಗಾಗಲೇ ದಿಢೀರನೆ ಮೈಸೂರು ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಹರಡಿರುವ ಹಕ್ಕಿ ಜ್ವರ, ಏವಿಯನ್ ಇನ್ಫಲ್ಯೂಎಂಜಾ (Avian influenza), ಬರ್ಡ್ ಫ್ಲು (Bird flu) ಎಂದೆಲ್ಲ ಕೇಳಿಪಡುವ ಈ ರೋಗವು ಸಾಮಾನ್ಯವಾಗಿ ಕೋಳಿ, ಬಾತುಕೋಳಿ, ಕೌಜುಗ ಹಕ್ಕಿ (turkeys), ಟಿಟ್ಟಿಭ ಪಕ್ಷಿ (patridges), ಬೇಟೆ ಹಕ್ಕಿ (pheasant) ಹಾಗೂ ಪಾರಿವಾಳಗಳಿಗೆ ನೀರಿನ ಪಕ್ಷಿಗಳಿಂದ ಹರಡುತ್ತದೆ. ಇದು ಒಂದು ವೈರಾಣುವಿನಿಂದ ಬರುವ ರೋಗವಾಗಿದ್ದು ಮಾನವರಿಗೆ ಹಾಗೂ ಇತರ ಸಸ್ತನಿಗಳಿಗೆ ಹರಡುತ್ತದೆ.

ಹರಡುವಿಕೆ ಹೇಗೆ ?

  • ಕೋಳಿಯಿಂದ ಕೋಳಿಗೆ ಗಾಳಿಯಿಂದ
  • ಕೋಳಿಯಿಂದ ಕೋಳಿಗೆ ಸಂಪರ್ಕದಿಂದ
  • ಕೋಳಿ ಫಾರಂನಲ್ಲಿರುವ ಉಪಕರಣಗಳಿಂದ
  • ಕೋಳಿಯ ಕಣ್ಣು, ಬಾಯಿ, ಮೂಗಿನಿಂದ ಬರುವ ಸ್ರವಿಸುವಿಕೆಯನ್ನು ಸ್ಪರ್ಶಿಸಿದಾಗ ಹರಡುತ್ತದೆ.

ಕೋಳಿಯಲ್ಲಿ ಕಂಡುಬರುವ ರೋಗದ ಲಕ್ಷಣಗಳು

  1. ಆಕಸ್ಮಿಕ ಮರಣ
  2. ಖಿನ್ನತೆ
  3. ಕೆಮ್ಮುವುದು
  4. ಮುಖ ಊದಿಕೊಳ್ಳುವುದು
  5. ಕಣ್ಣಿನಿಂದ ಹಾಗೂ ಮೂಗಿನ ಹೊಳ್ಳೆ ಗಳಿಂದ ದ್ರವ ಸೋರುವುದು
  6. ಬೇದಿ
  7. ಪಾರ್ಶ್ವವಾಯುವಿನ ಲಕ್ಷಣಗಳು ಕಂಡು ಬರುವುದು
  8. ಹಸಿವಾಗದಿರುವುದು
  9. ಕೋಳಿಗಳ ಧ್ವನಿ ಕಡಿಮೆಯಾಗುವುದು
  10. ದೈನಂದಿನ ಮೊಟ್ಟೆ ಇಡುವ ಸಂಖ್ಯೆ ಕಡಿಮೆಯಾಗುವುದು

ಕೋಳಿ ಫಾರಂಗಳಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು

  • ರೋಗದ ಲಕ್ಷಣವಿರುವ ಕೋಳಿಗಳನ್ನು ಹಾಗೂ ಫಾರಂನಲ್ಲಿರುವ ಉಳಿದೆಲ್ಲಾ ಕೋಳಿಗಳನ್ನು ಕಲ್ಲಿಂಗ್ ಮಾಡುವುದು
  • ಕಲ್ಲಿಂಗ್ ಮಾಡಿದ ಕೋಳಿಗಳನ್ನು ಹಾಗೂ ರೋಗ ಬಂದು ಸತ್ತ ಕೋಳಿಗಳನ್ನು ಆಳವಾದ ಗುಂಡಿಯಲ್ಲಿ (10 ×10 ಅಡಿ) ಹೂಳಲು ಕ್ರಮಕೈಗೊಳ್ಳುವುದು
  • ಕೋಳಿಗಳನ್ನು ಗುಂಡಿಯಲ್ಲಿ ಹೂಳಿದ ನಂತರ ಕ್ರಮವಾಗಿ ಉಪ್ಪು, ನಂತರ ಮಣ್ಣು, ನಂತರ ಸೋಂಕು ನಿವಾರಕ ದ್ರವಗಳನ್ನು ಸಿಂಪಡಿಸುವುದು
  • ಈ ಕ್ರಮಗಳನ್ನು ರೋಗ ಬಂದ ಜಾಗದಿಂದ ಕಡಿಮೆ ಎಂದರೆ ಒಂದು ಕಿ.ಮೀ. ಸುತ್ತಳತೆಯಲ್ಲಿ ಇರುವ ಫಾರಂಗಳಲ್ಲಿ ಅನುಸರಿಸುವುದು
  • ಹೊಸದಾಗಿ ಕೋಳಿ ಮರಿಗಳನ್ನು ಇತರೆಡೆಯಿಂದ ತರಬಾರದು ಹಾಗೂ ಇರುವ ಕೋಳಿಗಳ ಆರೋಗ್ಯವಾಗಿದ್ದರೆ ಬೇಗನೆ ವಿಲೇವಾರಿ ಮಾಡುವುದು ಸೂಕ್ತ

ಮನುಷ್ಯ ಅನುಸರಿಸಬೇಕಾದ ಕ್ರಮಗಳು

  1. ಬೇಯಿಸದ ಮೊಟ್ಟೆಗಳನ್ನು ಹಾಗೆಯ ತಿನ್ನದಿರುವುದು
  2. ಕೋಳಿ ಫಾರಂನ ಕೆಲಸಗಾರರು ಕೋಳಿಗಳಿಂದ ಹಾಗೂ ಕೋಳಿ ಫಾರಂನಲ್ಲಿ ಉಪಕರಣಗಳಿಂದ ಆದಷ್ಟು ಕಡಿಮೆ ಸಂಪರ್ಕ ಇಟ್ಟುಕೊಳ್ಳುವುದು
  3. ಪದೇ ಪದೇ ಕೈಗಳಿಗೆ ಸೋಂಕು ನಿವಾರಕ ದ್ರವ ಬಳಸುವುದು
  4. ಕಣ್ಣು ಮೂಗು ಬಾಯಿಯನ್ನು ಮುಟ್ಟು ಕೊಳ್ಳದಿರುವುದು
  5. ಸತ್ತ ಕೋಳಿ ವಿಲೇವಾರಿ ಮಾಡುವಾಗ ಮಾಸ್ಕ್, ಗೌನ್, ಗಾಗಲ್ಸ್, ಬೂಟ್ಸ್ ಧರಿಸಿ ಅವುಗಳನ್ನು ಬಳಸಿದ ನಂತರ ಸೂಕ್ತ ಕ್ರಮಕೈಗೊಂಡು ವಿಲೇವಾರಿ ಮಾಡುವುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version