ರಾಜಕೀಯ
ಕಲಬುರಗಿ : ಬಿಜೆಪಿ ತ್ಯಜಿಸದಂತೆ ಮಾಜಿ ಸಚಿವ ಚೌವ್ಹಾಣ್ ಮತ್ತು ರಾಠೋಡ್ ಗೆ ಕಾರ್ಯಕರ್ತರ ಒತ್ತಾಯ
ಸುದ್ದಿದಿನ,ಕಲಬುರಗಿ : ಮಾಜಿ ಸಚಿವ ಬಾಬುರಾವ್ ಚೌವ್ಹಾಣ್ ಮತ್ತು ಬಂಜಾರ ಮುಖಂಡ ಸುಭಾಷ್ ರಾಠೋಡ್ ಬಿಜೆಪಿಗೆ ಗುಡ್‌ಬೈ ವಿಚಾರ ಪಕ್ಷ ತ್ಯಜಿಸದಂತೆ ಕಾರ್ಯಕರ್ತರು ಹಾಗೂ ಬೆಂಬಲಿಗರಿಂದ ತೀವ್ರ ಒತ್ತಡವೇರ್ಪಟ್ಟಿದೆ.
ಸಂತ ಸೇವಲಾಲ್ ಮಹಾರಾಜರ ಆಜ್ಞೆಯಂತೆ ಜಾಧವ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಜಾಧವ್ ಗೆಲ್ಲಿಸೋಣ, ಬಂಜಾರ ಸಮಾಜವನ್ನ ಅಭಿವೃದ್ದಿಪಡಿಸೋಣ, ಸೇವಲಾಲ್ ಧ್ವಜ ದಿಲ್ಲಿಯಲ್ಲಿ ಹಾರಿಸೋಣ. ಯಾವುದೇ ಕಾರಣಕ್ಕೂ ಬಿಜೆಪಿ ಬಿಡಬಾರದೆಂದು ಒತ್ತಡ ಹೆಚ್ಚುತ್ತಿದೆ.
ಹೀಗಂತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳನ್ನ ಹಾಕ್ತಿರೊ ಕಾರ್ಯಕರ್ತರು. ಜಾಧವ್‌ಗೆ ಲೋಕಸಭೆ ಟಿಕೆಟ್ ನೀಡಿದಕ್ಕೆ ಅಸಮಾಧಾನಗೊಂಡು ಚೌವ್ಹಾಣ್ ಮತ್ತು ರಾಠೋಡ್ ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401