ಲೈಫ್ ಸ್ಟೈಲ್

ಪಕ್ಷಿ ಪರಿಚಯ | ಹದ್ದು

Published

on

ಬ್ಲಾಕ್ ಕೈಟ್ | ಫೋಟೋ : ಭಗವತಿ ಎಂ.ಆರ್
  • ಭಗವತಿ ಎಂ.ಆರ್, ಛಾಯಾಗ್ರಾಹಕಿ

ದ್ದುಗಳು ಬಹುತೇಕ ಒಂಟಿಯಾಗಿಯೂ, ಕೆಲವೊಮ್ಮೆ ಜೋಡಿಯಾಗಿಯೂ ಇರುತ್ತವೆ. ಅಹಾರ ಹೆಚ್ಚು ಇರುವ ಕಡೆ ಒಟ್ಟಾಗಿ ಕುಳಿತಿರುತ್ತವೆ. ಮನೆಯ ಮಹಡಿ ಮೇಲೆ ನಿಂತು ನೀಲಿ ಆಕಾಶದಲ್ಲಿ ಕತ್ತೆತ್ತಿ ನೋಡಿದರೆ ಬಹುದೂರದಲ್ಲಿ ಹದ್ದುಗಳು ಹಾರುತ್ತಾ, ಸುತ್ತು ಹಾಕುತ್ತಾ ಇರುವುದನ್ನು ನೋಡಬಹುದು.

ಹಾಗೆ ಸುತ್ತು ಹಾಕುತ್ತಿರುವ ಮೂರ್ನಾಲ್ಕು ಹದ್ದುಗಳಾದರು ಅಲ್ಲಿ ಇರುತ್ತವೆ. ಮನೆಗಳ ಮೇಲೆ ನೀರಿನ ತೊಟ್ಟಿಯ ಮೇಲೆ ಒಂಟಿಯಾಗಿ ಕೂತಿರುತ್ತವೆ. ದೂರದಿಂದ ನೋಡಿದಾಗ ಕಪ್ಪುಬಣ್ಣ ಕಂಡರೂ, ಕಪ್ಪು ಮಿಶ್ರಿತ ಕಂದು ಬಣ್ಣದಾಗಿವೆ. ಕಿವಿ ಮತ್ತು ಕಣ್ಣು ಮಾತ್ರ ಕಪ್ಪು. ಅವುಗಳು ಹಾರುವಾಗ ಕತ್ತರಿಯ ಅಲಗಿನಂತೆ ಚಾಚಿಕೊಂಡ ಬಾಲವನ್ನು ಗುರುತಿಸಬಹುದು. ಕತ್ತರಿಯ ಅಲಗಿನಂಥ ಈ ಬಾಲದ ತುದಿಯಿಂದಲೇ ಇವುಗಳನ್ನು ಹದ್ದು ಎಂದು ಸ್ಪಷ್ಟವಾಗಿ ಗುರುತಿಸಬಹುದು.

ಫೋಟೋ : ಭಗವತಿ ಎಂ.ಆರ್

ಹದ್ದುಗಳು ಎತ್ತರದ ಮರದ ಮೇಲೆ ಗೂಡು ಕಟ್ಟುತ್ತವೆ. ಹೆಚ್ಚುತ್ತಿರುವ ನಗರೀಕರಣದಿಂದಾಗಿ ನಗರದಲ್ಲಿ ವಾಸಿಸುವ ಹಕ್ಕಿಗಳ ಗೂಡುಕಟ್ಟುವ ವಿನ್ಯಾಸವೂ ಬದಲಾಗುತ್ತಾ ಬಂದಿದೆ. ಮೊಬೈಲ್ ಟವರ್, ಲೈಟು ಕಂಬಗಳ ಮೇಲೆ ಹದ್ದುಗಳು ಗೂಡು ಕಟ್ಟುತ್ತವೆ. ಹದ್ದುಗಳಲ್ಲಿ ಗಂಡು ಆಹಾರ ತರಲು ಹೋದಾಗ, ಹೆಣ್ಣುಕಾವು ಕೂರುತ್ತವೆ. ಮೊಟ್ಟೆ ಇಟ್ಟು ಮರಿಯಾದ ಮೂವತ್ತು ದಿನಗಳಲ್ಲಿ ಮರಿಗಳು ಸ್ವತಂತ್ರವಾಗುತ್ತವೆ.

ನಾವು ಮಾಡುವ ಕೊಳಕನ್ನು ಶುಚಿಗೊಳಿಸಿ, ಎಷ್ಟೋ ರೀತಿಯಲ್ಲಿ ಉಪಕಾರಿಯಾದ ಹದ್ದುಗಳನ್ನು ದೂರವೇ ಇಟ್ಟಿದ್ದೇವೆ. ಸಾಮಾನ್ಯವಾಗಿ ಹದ್ದು ಎನ್ನುವುದು ನೆಗೆಟಿವ್ ಆಗಿಯೇ ಬಳಕೆಯಾಗುತ್ತದೆ. ಹದ್ದು ಎಂದರೆ ಅದರ ಚೂಪಾದ ಕೊಕ್ಕು, ಉದ್ದವಾದ ಉಗುರು, ಬಲವಾದ ಹಿಡಿತ ಕೂಡ ನೆನಪಾಗುತ್ತದೆ. ಈಗ ಹದ್ದುಬಸ್ತಿನಲ್ಲಿಡಬೇಕಾದುದ್ದು ಯಾರ ವರ್ತನೆ ಎನ್ನುವುದನ್ನು ನೀವೇ ಯೋಚಿಸಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version