ದಿನದ ಸುದ್ದಿ
ಆರ್ಥಿಕ ಸಬಲರು ಪಡೆದಿರುವ ಬಿಪಿಎಲ್ ಕಾರ್ಡನ್ನು ಸ್ವಯಂಪ್ರೇರಿತರಾಗಿ ಹಿಂದುರಿಗಿಸಲು ಸೂಚನೆ
ಸುದ್ದಿದಿನ,ದಾವಣಗೆರೆ : ಆರ್ಥಿಕವಾಗಿ ಸಬಲರು ಪಡೆದಿರುವ ಬಿ.ಪಿ.ಎಲ್ ಕಾರ್ಡ್‍ಗಳನ್ನು ಸ್ವಯಂಪ್ರೇರಿತವಾಗಿ ಹಿಂತಿರುಗಿಸಲು ಇಲಾಖೆ ವತಿಯಿಂದ ಒಂದು ತಿಂಗಳ ಕಾಲಾವಕಾಶವನ್ನು ನೀಡಲಾಗಿರುತ್ತದೆ. ನಿಗದಿತ ಒಂದು ತಿಂಗಳ ಅವಧಿಯೊಳಗೆ ಬಿ.ಪಿ.ಎಲ್ ಕಾರ್ಡ್‍ಗಳನ್ನು ಸ್ವಯಂ ಪ್ರೇರಿತವಾಗಿ ಹಿಂದಿರುಗಿಸಲು ಸೂಚಿಸಿದ್ದು, ಅಂತಹವರಿಗೆ ಇಲಾಖೆಯು ಯಾವುದೇ ದಂಡ ವಿಧಿಸುವುದಿಲ್ಲ.
ಜಿಲ್ಲೆಯಲ್ಲಿ ಒಟ್ಟು 3,81,145 ಎಎವೈ/ಬಿಪಿಎಲ್ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. ಆದರೆ ಕೆಲವು ಕುಟುಂಬಗಳು ಆರ್ಥಿಕವಾಗಿ ಸುಸ್ಥಿತಿಯಲ್ಲಿರುವವರು, ಮಕ್ಕಳು ಸರ್ಕಾರಿ/ಅರೆ ಸರ್ಕಾರಿ ಸೇವೆಗೆ ಸೇರಿ ವೇತನ ಪಡೆಯುತ್ತಿರುವವರು, ಆದಾಯ ತೆರಿಗೆ ಪಾವತಿದಾರರು, ನಗರ ಪ್ರದೇಶದಲ್ಲಿ ಸ್ವಂತ ಆರ್.ಸಿ.ಸಿ ಕಟ್ಟಡಗಳನ್ನು ಹೊಂದಿದ್ದು, ಮನೆ ಬಾಡಿಗೆ ಪಡೆಯುತ್ತಿರುವವರು ತಮ್ಮ ಪಡಿತರ ಚೀಟಿಯನ್ನು ಬಿ.ಪಿ.ಎಲ್ ಪಟ್ಟಿಯಲ್ಲೇ ಮುಂದುವರಿಸಿಕೊಂಡು ಉಚಿತವಾಗಿ ಅಕ್ಕಿಯನ್ನು ಪಡೆಯುತ್ತಿರುತ್ತಾರೆ. ಆರ್ಥಿಕವಾಗಿ ಸಬಲರು ಪಡೆದಿರುವ ಬಿ.ಪಿ.ಎಲ್ ಕಾರ್ಡ್‍ಗಳನ್ನು ಸ್ವಯಂಪ್ರೇರಿತವಾಗಿ ಹಿಂತಿರುಗಿಸಲು ಇಲಾಖೆ ವತಿಯಿಂದ ಒಂದು ತಿಂಗಳ ಕಾಲಾವಕಾಶವನ್ನು ನೀಡಲಾಗಿರುತ್ತದೆ. ನಿಗಧಿತ ಒಂದು ತಿಂಗಳ ಅವಧಿಯೊಳಗೆ ಬಿ.ಪಿ.ಎಲ್ ಕಾರ್ಡ್‍ಗಳನ್ನು ಸ್ವಯಂ ಪ್ರೇರಿತವಾಗಿ ಹಿಂದಿರುಗಿಸಲು ಸೂಚಿಸಿದೆ. ಅಂತಹವರಿಗೆ ಇಲಾಖೆಯು ಯಾವುದೇ ದಂಡ ವಿಧಿಸುವುದಿಲ್ಲ.
ಇಲಾಖೆಯಿಂದ ಅನರ್ಹ ಕಾರ್ಡ್‍ಗಳನ್ನು ಗೌಪ್ಯವಾಗಿ ಪರಿಶೀಲಿಸಿ ಪತ್ತೆ ಮಾಡುವ ಕಾರ್ಯ ಆರಂಭವಾಗಿರುತ್ತದೆ. ಪರಿಶೀಲನೆ ವೇಳೆಯಲ್ಲಿ ಅನರ್ಹರು ಬಿ.ಪಿ.ಎಲ್ ಕಾರ್ಡ್‍ಗಳನ್ನು ಪಡೆದಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ದ ಬಿ.ಪಿ.ಎಲ್ ಪಡಿತರ ಚೀಟಿ ಪಡೆದಾಗಿನಿಂದ ಇದುವರೆಗೆ ಸ್ವೀಕರಿಸಿರುವ ಪಡಿತರ ಪ್ರಮಾಣಕ್ಕೆ ಮುಕ್ತ ಮಾರುಕಟ್ಟೆ ದರದಲ್ಲಿ ದಂಡವನ್ನು ವಸೂಲಿ ಮಾಡಲಾಗುವುದು ಮತ್ತು ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಇದು ಕೊನೆಯ ಅವಕಾಶವಾಗಿದ್ದು, ಆರ್ಥಿಕವಾಗಿ ಸದೃಢವಾಗಿರುವ ಕುಟುಂಬಗಳು ಪಡೆದಿರುವ ಬಿ.ಪಿ.ಎಲ್ ಪಡಿತರ ಚೀಟಿಗಳನ್ನು ಸ್ವಯಂಪ್ರೇರಿತವಾಗಿ ಆಹಾರ ಇಲಾಖೆಗೆ ಹಿಂತಿರುಗಿಸಲು ಸೂಚಿಸಿದೆ.
ಮಾನದಂಡಗಳನ್ವಯ ಈ ಕೆಳಕಂಡ ವರ್ಗಗಳಡಿ ಬರುವ ಕುಟುಂಬಗಳು ಬಿ.ಪಿ.ಎಲ್ ಪಡಿತರ ಚೀಟಿಯನ್ನು ಪಡೆಯಲು ಅರ್ಹರಿರುವುದಿಲ್ಲ
- ವೇತನವನ್ನು ಗಣನೆಗೆ ತೆಗೆದುಕೊಳ್ಳದೇ ಎಲ್ಲಾ ಖಾಯಂ ನೌಕರರು ಅಂದರೆ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ದೆಗಳು ಅಥವಾ ಸರ್ಕಾರಿ ಪ್ರಾಯೋಜಿಕ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ ಮಂಡಳಿಗಳು/ ನಿಗಮಗಳು/ ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ/ ಸೇವಾ ತೆರಿಗೆ/ ವ್ಯಾಟ್ /ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು.
- ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣ ಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶದಲ್ಲಿ 1000 ಚ.ಅಡಿ ಗಿಂತಲೂ ಹೆಚ್ಚಿನ ವಿಸ್ತೀರ್ಣದ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು.
- ಜೀವನೋಪಾಯಕ್ಕಾಗಿ ಸ್ವಂತ ಓಡಿಸುವ ಒಂದು ವಾಣಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿ ಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ 4 ಚಕ್ರದ ವಾಹನವನ್ನು ಹೊಂದಿರುವ ಎಲ್ಲಾ ಕುಟುಂಬಗಳು. ವಾರ್ಷಿಕ ಆದಾಯ (ಎಲ್ಲಾ ಮೂಲದಿಂದ) ರೂ.1,20,000/- ಗಳು ಮೇಲ್ಪಟ್ಟ ಕುಟುಂಬಗಳು.
ವಿಶೇಷ ಸೂಚನೆ
ಸಾರ್ವಜನಿಕರು ಮತ್ತು ಸ್ವಯಂ ಸೇವೆ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಅನರ್ಹ ಬಿ.ಪಿ.ಎಲ್ ಪಡಿತರ ಚೀಟಿ ಪಡೆದಿರುವವರ ಬಗ್ಗೆ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ (ಆಹಾರ ಶಾಖೆ)ಗೆ ಗೌಪ್ಯವಾಗಿ ಲಿಖಿತವಾಗಿ ಸಲ್ಲಿಸಿದಲ್ಲಿ ಅಂತಹ ಅರ್ಜಿಗಳನ್ನು ಪರಿಶೀಲಿಸಿ ಅನರ್ಹತೆ ಕಂಡು ಬಂದಲ್ಲಿ ಪಡಿತರ ಚೀಟಿಯನ್ನು ರದ್ದುಗೊಳಿಸಿ ಮಾಹಿತಿ ನೀಡಿದವರಿಗೆ ಸರ್ಕಾರದಿಂದ ಬಹುಮಾನ ಯೋಜನೆಯಡಿ ಅನರ್ಹ ಪಡಿತರ ಚೀಟಿಯೊಂದಕ್ಕೆ ರೂ.400/- ಗಳನ್ನು ನೀಡಲಾಗುವುದೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243