ದಿನದ ಸುದ್ದಿ

ಬಿಎಸ್ವೈ ಮೇಲೆ ಹೈಕಮಾಂಡ್ ಕಂಟ್ರೋಲ್ ಸಲ್ಲ : ಡಾ.ಅಭಿನವ ಅನ್ನದಾನ ಸ್ವಾಮೀಜಿ

Published

on

ಸುದ್ದಿದಿನ,ದಾವಣಗೆರೆ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಲಿನ ಭಾರತೀಯ ಜನತಾ ಪಕ್ಷದ ವರಿಷ್ಠರ ಸವಾರಿ ಬಗ್ಗೆ ಹಾಲಕೆರೆಯ ಶ್ರೀ ಅನ್ನದಾನ ಸಂಸ್ಥಾನ ಮಠದ ಡಾ.ಅಭಿನವ ಅನ್ನದಾನ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶ್ರೀ ಅನ್ನದಾನೇಶ್ವರ ಶಾಖಾಮಠದಲ್ಲಿ ಭಾನುವಾರ ಆಯೋಜಿಸಿದ್ದ ಲಿಂಗೈಕ್ಯ ಶ್ರೀ ಗುರು ಅನ್ನದಾನ ಮಹಾಶಿವಯೋಗಿಗಳವರ ಪುಣ್ಯಾರಾಧನೆ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ಅತಿಯಾಗಿ ಕಂಟ್ರೋಲ್ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಪದವಿ ಪ್ರಮಾಣ ವಚನ ಸ್ವೀಕರಿಸಿ 15 ದಿನಗಳ ಬಳಿಕ ಮಂತ್ರಿ ಮಂಡಲ ರಚನೆಯಾಯಿತು. ಇದಾಗಿ 8 ದಿನಗಳಾದರೂ ಖಾತೆ ಹಂಚಿಕೆ ಮಾಡಿಲ್ಲ. ಎಲ್ಲಾದರಲ್ಲೂ ಅತಿಯಾಗಿ ಕಂಟ್ರೋಲ್ ಮಾಡುತ್ತಿದೆ.

ಅದರಲ್ಲೂ ರಾಷ್ಟ್ರೀಯ ಸೇವಾ ಸಂಘದ ಹಸ್ತಕ್ಷೇಪ ಒಳಿತಲ್ಲ. ಹೈಕಮಾಂಡ್ ಕೂಡ ಆರೆಸ್ಸೆಸ್’ನ ಮಾತನ್ನು ಅತಿಯಾಗಿ ಕೇಳಬಾರದು. ಎಷ್ಟಿರಬೇಕೋ ಅಷ್ಟಿದ್ದರೆ ಉತ್ತಮ. ಯಡಿಯೂರಪ್ಪ ಅವರಿಗೆ ಸ್ವಾತಂತ್ರ್ಯ ನೀಡಿದರೆ ಮೂರೂವರೆ ವರ್ಷದಲ್ಲಿ ರಾಜ್ಯದ ಚಿತ್ರಣ ಬದಲಾಯಿಸಿ, ಅಭಿವೃದ್ಧಿ ಮಾಡುವ ವಿಶ್ವಾಸ ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version