ದಿನದ ಸುದ್ದಿ
ಮೇಕೆ ದಾಟು ಯೋಜನೆ ಆಗಲೇ ಬೇಕು : ಬಿ ಎಸ್ ವೈ
ಸುದ್ದಿದಿನ, ವಿಜಯಪುರ : ಸಮ್ಮಿಶ್ರ ಸರ್ಕಾರ ಖಾತೆ ಹಂಚಿಕೆಯಲ್ಲಿ ಕಚ್ಚಾಟ ನಡೆಸುತ್ತಿದೆ. ಸಚಿವ ಸಂಪುಟ ವಿಸ್ತರಣೆ ಆಗಿ ಆರೇಳು ದಿನಗಳಾಗಿವೆ.ಖಾತೆ ಹಂಚಿಕೆ ವಿಷಯದಲ್ಲಿ ಕಚ್ಚಾಡುವುದನ್ನು ಬಿಟ್ಟು ಅಭಿವೃದ್ಧಿ ಕಡೆ ಗಮನ ಹರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ನಂತರ ಮಾತನಾಡಿದ ಅವರು ರಾಜ್ಯದಲ್ಲಿ 156ತಾಲ್ಲೂಕುಗಳು ಬರಗಾಲದಲ್ಲಿವೆ.ಬರಗಾಲ ನಿರ್ವಹಣೆ ಮಾಡುವುದರ ಬಗ್ಗೆ ಸರಕಾರ ಗಮನ ಹರಿಸುತ್ತಿಲ್ಲ.ಬರದ ಬಿಸಿ ಇನ್ನೂ ರಾಜ್ಯ ಸರಕಾರಕ್ಕೆ ತಟ್ಟಿದಂತ್ತೆ ಕಾಣುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವ್ಯಕ್ತ ಪಡಿಸಿದ್ದರು.
ಮೇಕೆ ದಾಟು ಯೋಜನೆ ಆಗಲೇ ಬೇಕು.ನೀರಾವರಿ ದೃಷ್ಟಿಯಿಂದ ಮೇಕೆ ದಾಟು ಯೋಜನೆ ಅವಶ್ಯಕತೆ ಇದೆ.ಯೋಜನೆ ಜಾರಿಗೆ ಬಿಜೆಪಿ ಎಲ್ಲಾ ಸಹಕಾರ ನೀಡಲಿದೆ.ಅಮಿತ್ ಷಾ ವಿರುದ್ಧ ನಿತಿನ್ ಗಡ್ಕರಿ ನೀಡಿರುವ ಹೇಳಿಕೆ ಅದು ಅವರ ವಯಕ್ತಿಕ.ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401