ದಿನದ ಸುದ್ದಿ
BTV ನಿರೂಪಕಿಯಿಂದ ‘ಶಿಳ್ಳೇಕ್ಯಾತ’ ಪದಬಳಕೆಗೆ ಶಿಳ್ಳೆಕ್ಯಾತ ರಾಜ್ಯ ನಾಯಕರ ವಿರೋಧ
ಸುದ್ದಿದಿನ ಡೆಸ್ಕ್ : ಕನ್ನಡ ಸುದ್ದಿ ವಾಹಿನಿ ‘ಬಿಟಿವಿ ನಿರೂಪಕಿ’ಯಿಂದ ‘ಶಿಳ್ಳೇಕ್ಯಾತ’ ಪದಬಳಕೆಗೆ ಶಿಳ್ಳೆಕ್ಯಾತ ರಾಜ್ಯ ನಾಯಕರು ಭಾರೀ ವಿರೋಧ ವ್ಯಕ್ತ ಪಡಿಸಿದ್ದಾರೆ.
‘ಒಬ್ಬ ತೆಳ್ಳಗಿರುವ, ನಕಲಿ ಪೊಲೀಸ್ ಒಬ್ಬನ ಬಗ್ಗೆ ನೀಡುವ ಸುದ್ದಿಯನ್ನು ಭಿತ್ತರಿಸುವಾಗ BTVಯ ಆ ಆಂಕರ್, “ನೋಡೋಕೆ ಶಿಳ್ಳೆಕ್ಯಾತನಂತಿದ್ರೂ ಥೇಟ್ ಎಸ್ ಐ ವೇಷ ಹಾಕಿಕೊಂಡಿರುವ ಮಹಾಶಯನ ಹೆಸರು…” ಹೀಗೆ ಬರೆದಿರುವ ಸುದ್ದಿಯನ್ನು ಸುದ್ದಿ ನಿರೂಪಕಿ ವಾಚಿಸುತ್ತಾರೆ. “ಹೀಗೆ ಕಳ್ಳರಿಗೆ, ಸಣ್ಣಗೆ ಇರುವವರಿಗೆ, ವಿಕೃತವಾಗಿರುವವರಿಗೆ ಉದಾಹರಣೆಗಳನ್ನು ಕೊಟ್ಟುಕೊಂಡು ಮಾನವೀಯತೆಯಿಂದ ಬದುಕುತ್ತಿರುವ, ಬಹುದೊಡ್ಡ ಇತಿಹಾಸವಿರುವ ತೊಗಲುಗೊಂಬೆ ಆಟದ ನಮ್ಮ ಜನಾಂಗದ ಹೆಸರನ್ನು ಈ ರೀತಿ ಅವಹೇಳನ ಕಾರಿಯಾಗಿ ಬಳಸಿಕೊಳ್ಳುತ್ತಿರುವುದು ಬೇಸರ ತಂದಿದೆ” ಎಂದು ‘ಕರ್ನಾಟಕ ರಾಜ್ಯ ಶಿಳ್ಳೆಕ್ಯಾತ ಜನಾಂಗದ ಅಭಿವೃದ್ಧಿ ವೇದಿಕೆಯ,ರಾಜ್ಯಾಧ್ಯಕ್ಷರಾದ ಡಿ.ಎಚ್.ಮಂಜುನಾಥ್ ಅವರು ‘ಸುದ್ದಿದಿನ’ಕ್ಕೆ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಕಾನೂನಾತ್ಮಕ ಹೋರಾಟ ಮಾಡುವುದಾಗಿಯೂ ಹೇಳಿದ್ದಾರೆ.
“ಶಿಳ್ಳೆಕ್ಯಾತ ಸಮುದಾಯದ ಬಗ್ಗೆ ಹಿಂದಿನಿಂದಲೂ ಈ ರೀತಿಯಾದಂದತಹ ಅವಮಾನ ನಡೆಯುತ್ತಲೇ ಇದೆ. ಸುದ್ದಿ ವಾಹಿನಿಗಳಲ್ಲಿ ಕಾರ್ಯನಿರ್ವಹಿಸುವವರು ಶಿಕ್ಷಿತರಿದ್ದಾರೆ, ಅವರೂ ಕೂಡ ಪದಗಳನ್ನು ಬಳಸುವಾಗ ಎಚ್ಚರಿಕೆಯಿಂದ ಬಳಸ ಬೇಕಾಗುತ್ತದೆ. ಹಲವು ಸಿನೆಮಾಗಳಲ್ಲಿಯೂ ಶಿಳ್ಳೆಕ್ಯಾತ ಸಮುದಾಯವನ್ನು ಅವಮಾನ ಮಾಡುವಂತಹ ಹಲವು ದೃಶ್ಯಗಳಿವೆ. ಇನ್ನಾದರೂ ಮಾಧ್ಯಮಗಳು ಸಮುದಾಯದ ಹೆಸರುಗಳನ್ನು ಅವಹೇಳನಕಾರಿಯಾಗಿ ಬಳಸಿಕೊಳ್ಳುವುದನ್ನು ಬಿಡಬೇಕು. ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಕಾರ್ಯನಿವರ್ವಗಿಸ ಬೇಕು” ಎಂದು ಹೇಳಿರುವ ‘ಕರ್ನಾಟಕ ರಾಜ್ಯ ಶಿಳ್ಳೆಕ್ಯಾತ ಜನಾಂಗದ ಅಭಿವೃದ್ಧಿ ವೇದಿಕೆಯ,ಉಪಾಧ್ಯಕ್ಷರಾದ ಸುಭಾಷ್ ಚೌಹಾಣ್ ಈ ಸುದ್ದಿಗೆ ಸಂಬಂಧಿಸಿದಂತೆ ರಾಜ್ಯಾದ್ಯಕ್ಷರೊಂದಿಗೆ ಚರ್ಚಿಸಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬಿತ್ತರಗೊಂಡ ಸುದ್ದಿಯನ್ನು ಡಿಲೀಟ್ ಮಾಡಿರುವ ಬಿಟಿವಿ. (ಕೆಳಗಿನ ಲಿಂಕ್)
https://m.facebook.com/story.php?story_fbid=2402302569800278&id=798350103528874
ಒಟ್ಟಾರೆ ಒಂದು ಸಮುದಾಯ ಹೆಸರನ್ನು ಅವಹೇಳನಕಾರಿಯಾಗಿ ಬಳಸಿಕೊಳ್ಳುವಾಗ ಮಾಧ್ಯಮಗಳು ಎಚ್ಚರ ವಹಿಸಿಬೇಕಿದೆ.
ಈ ಸುದ್ದಿಗೆ ಸಂಬಂಧಿಸಿದಂತೆ ಪತ್ರಕರ್ತ ಹರ್ಷ ಕುಮಾರ್ ಕುಗ್ವೆ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಖಂಡಿಸಿ ಹೀಗೆ ಬರೆದಿದ್ದಾರೆ.
https://m.facebook.com/story.php?story_fbid=10213177497064147&id=1596920893
ಸುದ್ದಿದಿನ.ಕಾಂ|ವಾಟ್ಸಾಪ್|9986715401