ರಾಜಕೀಯ
ಬಜೆಟ್ ಮಂಡನೆ |ಏರಿದ್ದೆಷ್ಟು ? | ಇಳಿದದ್ದೆಷ್ಟು ?
ಸುದ್ದಿದಿನ ಡೆಸ್ಕ್ : ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ರೈತರ ಸಾಲಾಮನ್ನಾ ಹಾಗೂ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳದಿಂದ ಸರ್ಕಾರಕ್ಕೆ ಆಗುವಂತಹ ಹೊರೆ ಕಡಿಮೆ ಮಾಡಿಕೊಳ್ಳಲು ಕೆಲವು ಅಗತ್ಯ ಕ್ರಮಗಳನ್ನು ತೆಗೆದು ಕೊಂಡಿದ್ದಾರೆ.
ಆ ಎಲ್ಲ ಕಾರಣಗಳಿಗಾಗಿ ಕೆಲವು ದೈನಂದಿನ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸಿದ್ದಾರೆ. ಕೆಲವು ವಸ್ತುಗಳ ಬೆಲೆಯನ್ನು ಇಳಿಸಿದ್ದಾರೆ.
ಏರಿಕೆ
• ಮದ್ಯದ ಮೇಲೆ ಶೇ4ರಷ್ಟು ಅಬಕಾರಿ ಸುಂಕ ಏರಿಕೆ
• ಅಬಕಾರಿ ತೆರಿಗೆ 17 ಸ್ಲ್ಯಾಬ್ ಗಳಿಗೆ ಶೇ15 ರಿಂದ ಶೇ 34ಕ್ಕೆ ಏರಿಕೆ
• ತಂಬಾಕು ಉತ್ಪನ್ನಗಳು, ಮದ್ಯ, ಬೀಡಿ – ಸಿಗರೇಟ್ ಬೆಲೆ ಏರಿಕೆ
• ಪ್ರತಿ ಲೀಟರ್ ಡೀಸೆಲ್ ಗೆ 1.12 ಏರಿಕೆ
ಪ್ರತಿ ಲೀಟರ್ ಪೆಟ್ರೋಲ್ ಗೆ 1. 14 ರೂ ಏರಿಕೆ
ಪ್ರತಿ ಯೂನಿಟ್ ಗೆ 20 ಪೈಸೆ ವಿದ್ಯುತ್ ದರ ಏರಿಕೆ
ಇಳಿಕೆ
• ಸಿರಿಧಾನ್ಯಗಳಾದ ಸಾಮೆ, ನವಣೆ, ಅರಕ, ಬರಗು ಮೇಲಿನ ಹಿಟ್ಟುಗಳ ಮೇಲೆ ತೆರಿಗೆ ವಿನಾಯಿತಿ ಮಾಡಲಾಗಿದೆ.
• ತೆಂಗಿನಕಾಯಿ ಸಿಪ್ಪೆ, ದ್ವಿದಳ ಧಾನ್ಯಗಳ ಮೇಲಿನ ತೆರಿಗೆಯನ್ನು ಈ ಹಿಂದಿನಂತೆ ಮುಂದಯವರಿಸಲಾಗುವುದು.
ಸುದ್ದಿದಿನ.ಕಾಂ|ವಾಟ್ಸಾಪ್|9986715401