ದಿನದ ಸುದ್ದಿ

ಚುನಾವಣೆಗೂ ಮುನ್ನ ಕೊನೆಯ ಬಜೆಟ್‌–2019 | 2022ರ ವೇಳೆಗೆ ನವಭಾರತ ನಿರ್ಮಾಣ: ವಿತ್ತ ಸಚಿವ ಪಿಯೂಷ್ ಗೋಯಲ್

Published

on

ಸುದ್ದಿದಿನ,ನವದೆಹಲಿ : ಆಯುಷ್ಮಾನ್‌ ಭಾರತ್‌ ಯೋಜನೆ ಮೂಲಕ ಬಡವರ ₹3000 ಕೋಟಿ ಉಳಿತಾಯ, ಶೇ 98 ಗ್ರಾಮಗಳಲ್ಲಿ ನೈರ್ಮಲ್ಯ, ಜನ ಔಷಧಿ ಕೇಂದ್ರಗಳ ಮೂಲಕ ಅತಿ ಕಡಿಮೆ ದರದಲ್ಲಿ ಜನರಿಗೆ ಔಷಧಿ ಕೊಡಲಾಗುತ್ತಿದೆ ಎಂದು ಬಜೆಟ್ ಭಾಷಣದ ನೆಪದಲ್ಲಿ ಸರ್ಕಾರದ ಸಾಧನೆಗಳನ್ನು ನಾನ್‌ಸ್ಟಾಪ್ ಹೊಗಳಿದರು ವಿತ್ತ ಸಚಿವ ಪಿಯೂಷ್ ಗೋಯಲ್.

ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಿರು ನಮ್ಮ ಸರ್ಕಾರದಿಂದ ಆಯುಷ್ಮಾನ್‌ ಭಾರತ್ ಮೂಲಕ 50 ಕೋಟಿ ಜನರಿಗೆ ಸಹಾಯವಾಗಿದೆ.ಪ್ರತಿ ವಿದ್ಯಾರ್ಥಿ ಶಾಲೆಯಿಂದ ತನ್ನ ಹಳ್ಳಿಯ ಮನೆಯ ವರೆಗೂ ಬಸ್‌; ಸಂಪರ್ಕ ವ್ಯವಸ್ಥೆಯಲ್ಲಿ ಅಭಿವೃದ್ಧಿಯಾಗಿದೆ. ಜಿಎಸ್‌ಟಿ ಅನುಷ್ಠಾನ, ಬ್ಯಾಂಕಿಂಗ್ ಸುಧಾರಣೆಗೆ ದಿಟ್ಟ ಕ್ರಮ ದೇಶದ ಆರ್ಥಿಕ ಇತಿಹಾಸದ ಮೈಲಿಗಲ್ಲುಗಳು
ಬಡವರ ಹೊಟ್ಟೆಯ ಮೇಲೆ ಹೊಡೆಯುವ ಹಣದುಬ್ಬರ ಕಣ್ಣಿಗೆ ಕಾಣದ ತೆರಿಗೆ. ಕಳೆದ ಐದು ವರ್ಷಗಳಲ್ಲಿ ಹಣದುಬ್ಬರವನ್ನು ಯಶಸ್ವಿಯಾಗಿ ನಿಯಂತ್ರಣದಲ್ಲಿಟ್ಟಿದ್ದೇವೆ ಎಂದು ಬಜೆಟ್ ಭಾಷಣದಲ್ಲಿ ನುಡಿದ ಪಿಯೂಷ್ ಗೋಯಾಲ್.

ಹಾಗೇ ಮುಂದುವರೆದು ಮಾತನಾಡಿದ ಅವರುರೇರಾ ಕಾಯ್ದೆ ಮೂಲಕ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಆಮೂಲಾಗ್ರ ಬದಲಾವಣೆ ಮಾಡಿದ್ದು, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ನೀಡಿದೆ.
ಬ್ಯಾಂಕ್‌ಗಳು ನೀಡಿರುವ ಸಾಲದ ಗುಣಮಟ್ಟ ಮತ್ತು ಸ್ಥಿತಿಗತಿ ಪರಿಶೀಲಿಸುವಂತೆ ಆರ್‌ಬಿಐಗೆ ಸೂಚನೆ ನೀಡಿದ್ದೇವೆ. 5.45 ಲಕ್ಷ ಹಳ್ಳಿಗಳು ಬಹಿರ್ದೆಸೆ ಮುಕ್ತ ಘೋಷಣೆ; ಸ್ವಚ್ಛ ಭಾರತ ಅಭಿಯಾನದ ಯಶಸ್ಸಿಗೆ ಜನತೆಗೆ ಧನ್ಯವಾದ ಅರ್ಪಿಸಿದರು ಗೋಯಲ್‌.

5 ವರ್ಷ ಭ್ರಷ್ಟಾಚಾರ ಮುಕ್ತ ಸರ್ಕಾರ
ಜಿಎಸ್‌ಟಿ ಹಾಗೂ ಇತರೆ ತೆರಿಗೆಗಳ ಮೂಲಕ ಆದಾಯ ಹೆಚ್ಚಳ ಜಾತಿವಾದ, ಭಯೋತ್ಪಾದನೆ ನಿಯಂತ್ರಣವಾಗಿದೆ. 2008 ರಿಂದ 2014ರ ವರೆಗೆ ಬ್ಯಾಂಕ್‌ಗಳಿಗೆ ಸಾಲ ಮರುಪಾವತಿಯಾಗಿಲ್ಲ.
ಅತಿ ಹೆಚ್ಚು ವಿದೇಶಿ ನೇರ ಹೂಡಿಕೆ(ಎಫ್‌ಡಿಐ) ಹರಿವು ಬಂದಿದೆ. ಹಣದುಬ್ಬರ ದರ ನಿಯಂತ್ರ; ಆರ್ಥಿಕವಾಗಿ ಮುನ್ನಡೆಯುತ್ತಿರುವ ಭಾರತ ಜಾಗತಿಕವಾಗಿ 6ನೇ ಸ್ಥಾನದಲ್ಲಿದೆ. 5 ವರ್ಷಗಳಲ್ಲಿ ಜಾಗತಿಕವಾಗಿ ಭಾರತ ಪ್ರಕಾಶಿಸುತ್ತಿದೆ– ಚೊಚ್ಚಲ ಬಜೆಟ್‌ ಮಂಡನೆಯಲ್ಲಿ ಪಿಯೂಷ್‌ ಗೋಯಲ್‌ 2022ರ ವೇಳೆಗೆ ನವಭಾರತ ನಿರ್ಮಾಣವಾಗಲಿದೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version