ದಿನದ ಸುದ್ದಿ
ಕೇಂದ್ರ ಬಜೆಟ್ 2019 | ರೈತರಿಗೆ ಬಂಪರ್ ಕೊಡುಗೆ..!
ಸುದ್ದಿದಿನ,ನವದೆಹಲಿ : ಕೇಂದ್ರ ಸರ್ಕಾರ 2019-20 ನೇ ಸಾಲಿನ ಬಜೆಟ್ ಅನ್ನು ಮಂಡನೆ ಮಾಡಿದ್ದು, ರೈತರಿಗೆ ಬಂಪರ್ ಕೊಡುಗೆಯನ್ನು ನೀಡಿದೆ.
ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್ ಅವರು ಸಣ್ಣ ಹಿಡುವಳಿದಾರರಿಗಾಗಿ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್’ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.
ಹಾಗೇ ಪಶುಸಂಗೋಪನೆ,ಮೀನುಗಾರಿಕೆ ಕ್ಷೇತ್ರಗಳಿಗೆ ಉತ್ತಮಯೋಜನೆಗಳನ್ನು ಘೋಷಿಸಲಾಗಿದ್ದು, ಗೋವುಗಳ ರಕ್ಷಣೆಗೋಸ್ಕರ ‘ರಾಷ್ರ್ಟೀಯ ಕಾಮಧೇನು’ ಯೋಜನೆಯನ್ನು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಘೋಷಣೆಯಾದ ಅನುದಾನ ಹಾಗು ಯೋಜನೆಗಳ ವಿವರಗಳು ಈ ರೀತಿ ಯಾಗಿದೆ.
ಪ್ರಧಾನಮಂತ್ರಿ ‘ಕಿಸಾನ್ ಸಮ್ಮಾನ್’ಯೋಜನೆಯ ಬಗೆಗೆ ನೀವು ತಿಳಿಯ ಬೇಕಾದದ್ದು
ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಎರಡು (2)ಹೆಕ್ಟೇರ್ ಹಾಗೂ ಅದಕ್ಕಿಂತ ಕಡಿಮೆಯಿರುವ ಸಣ್ಣ ಹಿಡುವಳಿದಾರರಿಗೆ ಪ್ರತಿವರ್ಷ ಆರು (6) ಸಾವಿರ ರೂಪಾಯಿ (ತಿಂಗಳಿಗೆ 500 ರೂ )ನೇರವಾಗಿ ರೈತರ ಖಾತೆಗೆ ಜಮಾ ಆಗಲಿದೆ.
- 2018 ರ ಡಿಸೆಂಬರ್ ನಿಂದಲೇ ಜಾರಿ ಪೂರ್ವಾನ್ವಯ
- ಪಶುಪಾಲನೆ ಹಾಗೂ ಮೀನುಗಾರಿಕರ ಯೋಜನೆಗೆ 750ಕೋಟಿ ಮೀಸಲು.
- 6 ಸಾವಿರ ರೂಪಾಯಿಯನ್ನು, ಪ್ರತಿಬಾರಿ 2ಸಾವಿರ ರೂಪಾಯಿಯಂತೆ ವರ್ಷದಲ್ಲಿ ಮೂರು ಕಂತುಗಳ ಮೂಲಕ ಹಣ ವರ್ಗಾವಣೆ ಮಾಡಲಾಗುವುದು.
- ಸಕಾಲದಲ್ಲಿ ಸಾಲ ಮರುಪಾವತಿ ಮಾಡುವಂತಹ ರೈತರಿಗೆ ಶೇ.3ರಷ್ಟು ಬಡ್ಡಿ ವಿನಾಯಿತಿ ನೀಡಲಾಗುವುದು.
- ನೈಸರ್ಗಿಕ ವಿಕೋಪ ಪಕ್ಕೆ ಒಳಗಾಗಿ ಬೆಳೆಹಾನಿಯಾದ ರೈತರಿಗೆ ಶೇ.2ರಷ್ಟು ಬಡ್ಡಿ ರಿಯಾಯಿತಿ ಕೊಡಲಾಗುವುದು.
- ಒಟ್ಟಾರೆ ಈ ಯೋಜನೆಯಿಂದ 12 ಕೋಟಿ ರೈತರಿಗೆ ಲಾಭವಾಗಲಿದ್ದು, ಈ ಯೋಜನೆಗಾಗಿ 75 ಸಾವಿರ ಕೋಟಿ ರೂ ಮೀಸಲಿಡಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401